- Advertisement -
ಮೂಡಲಗಿ – ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ನಡೆಯುವ ಶ್ರೀ ಆಂಜನೇಯನ ಮಹಾಪೂಜೆಯಲ್ಲಿ ಪಾಲ್ಗೊಳ್ಳಲು ಮೂಡಲಗಿಯಿಂದ ಐವರು ಯುವ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.
ಸುಮಾರು ಇನ್ನೂರೈವತ್ತು ಕಿ ಮೀ ದೂರವಿರುವ ಅಂಜನಾದ್ರಿಗೆ ಶಿವು ಕೊಪ್ಪದ, ಮುತ್ತು ಕರೆನ್ನವರ, ಗಂಗಪ್ಪಾ ಸನದಿ, ಶಿವಚಂದ್ರ ಪೂಜೇರಿ ಹಾಗೂ ಸಾಗರ ಗುಡದಾರ ಎಂಬ ಯುವಕರು ಬುಧವಾರದಂದು ಪಾದಯಾತ್ರೆ ಕೈಗೊಂಡಿದ್ದಾರೆ.
ಇನ್ನೆರಡು ದಿನಗಳಲ್ಲಿ ಕಿಷ್ಕಿಂಧೆಯನ್ನು ತಲುಪಿ ಸುಮಾರು ೫೭೫ ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟವನ್ನು ಏರಿ ಆಂಜನೇಯನಿಗೆ ಮಹಾಪೂಜೆ ಸಲ್ಲಿಸಿ ದಿ. ೧೪ ರಂದು ಈ ಯುವಕರು ಅಲ್ಲಿಂದ ನಿರ್ಗಮಿಸಲಿದ್ದಾರೆ.