spot_img
spot_img

ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿಶ್ವ ಮಣ್ಣು ದಿನ ಆಚರಣೆ

Must Read

spot_img
- Advertisement -

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ದಿನಾಂಕ: ೦೫.೧೨.೨೦೨೪ ರಂದು ಮಹಾವಿದ್ಯಾಲಯದ ಎನ್.ಎಸ್ ಎಸ್. ಮತ್ತು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕದ ಸಹಭಾಗಿತ್ವದಲ್ಲಿ ವಿಶ್ವ ಮಣ್ಣು ದಿನವನ್ನು ಡಾ. ಎಮ್. ಜಿ. ಕೆರುಟಗಿ, ಡೀನ್, ಕಿ.ರಾ.ಚ.ತೋ.ಮ, ಅರಭಾವಿ ಇವರ ಸೂಕ್ತ ಮಾರ್ಗದರ್ಶನದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಕಾಂತರಾಜು ವಿ., ಪ್ರಾಧ್ಯಾಪಕರು, ಎ. ಡಿ. ಎಸ್. ಡಬ್ಲ್ಯೂ ಅಧಿಕಾರಿಯಾದ ಡಾ. ಎಸ್. ಜಿ. ಪ್ರವೀಣಕುಮಾರ ಮತ್ತು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ಎ. ಎಮ್. ನದಾಪ ಹಾಗೂ ಎನ್.ಎಸ್ ಎಸ್. ಅಧಿಕಾರಿಗಳಾದ ಡಾ. ರಾಘವೇಂದ್ರ ಕೆ.ಎಸ್ ಇವರು ಉಪಸ್ಥಿತರಿದ್ದರು. ಹಣಮಂತರಾವ ಜೋಗನ, ಸಹಾಯಕ ಪ್ರಾಧ್ಯಾಪಕರು ಇವರು ಮಣ್ಣಿನ ಆರೋಗ್ಯ ಹಾಗೂ ನಿರ್ವಹಣೆ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಾದ ಕು. ಅನುಪಮ ಮತ್ತು ಆರತಿ ಇವರು ಮಣ್ಣಿನ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳಿದರು.

ಪ್ರಥಮ ವರ್ಷದ ವಿದ್ಯಾರ್ಥಿನಿ ಪ್ರಾರ್ಥನಾ ಗೀತೆ ಹಾಡಿದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕು. ಹರೀಶ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group