ವಿದ್ಯೆ ಜತೆಗೆ ಸಂಸ್ಕಾರ ಕಲಿಯಿರಿ: ಎಸ್ಆರ್ ಪಾಟೀಲ

Must Read

ಬೀಳಗಿ:- ಸಹಕಾರಿ, ಶಿಕ್ಷಣ,ಕೈಗಾರಿಕೆ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಸಹಸ್ರಾರು ಜನರಿಗೆ ಉದ್ಯೋಗಾವಕಾಶ ನೀಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ, ಎಂದು ಎಸ್,ಆರ್,ಪಾಟೀಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಸ್,ಆರ್,ಪಾಟೀಲ ಹೇಳಿದರು

ತಾಲೂಕಿನ ಬಾಡಗಂಡಿ ಎಸ್,ಆರ್,ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಅಂತಾರಾಷ್ಟ್ರೀಯ  ಶಾಲೆ ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸಾರ್ಥಕ ಸಂಭ್ರಮ ಮತ್ತು ಪಾದಪೂಜೆ ನಿಮ್ಮನ್ನು ಹೆತ್ತವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯೆ ಎಲ್ಲಾ ಸಂಪತ್ತಿಗಿಂತ ದೊಡ್ಡದು. ವಿದ್ಯೆಯ ಜತೆಗೆ ವಿದ್ಯಾರ್ಥಿಗಳು ವಿನಯ, ಸಂಸ್ಕಾರವ0ತರಾಗಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಮಕ್ಕಳ ಸಾಹಿತಿ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪ.ಗು. ಸಿದ್ದಾಪುರ ಮಾತನಾಡಿ, ಇಂದಿನ ಸಮಾಜದಲ್ಲಿ ಎಸ್,ಆರ್,ಪಾಟೀಲರಂತಹ ವ್ಯಕ್ತಿಗಳು ಸಿಗುವುದು ಅಪರೂಪ. ಸಮಾಜದಲ್ಲಿ ಅಕ್ಷರ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಜನರೊಂದಿಗೆ ಬೆರೆಯುವ ಅವರ ಮನೋಭಾವ ಮೆಚ್ಚುವಂತದ್ದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಶಿವಭೋದ ಶೆಟ್ಟಿ ಅಕ್ಷರ ಕಲಿತವರು ಭ್ರಷ್ಟರಾಗಬಹುದು ಆದರೆ ಸಂಸ್ಕಾರ ಕಲಿತವರು ಎಂದು ಭ್ರಷ್ಟರಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಭವಿ಼ಷ್ಯದಲ್ಲಿ ಶ್ರೀಮಂತರಾಗದಿದ್ದರೂ ಪರವಾಗಿಲ್ಲ ಧೀಮಂತರಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯೆ ಅನಿಷಾ ಪಾಟೀಲ, ಆಡಳಿತಾಧಿಕಾರಿ ಎಚ್, ಬಿ, ಧರ್ಮಣ್ಣವರ, ವೈದ್ಯಕೀಯ ವ್ಯವಸ್ಥಾಪಕ ವಿಜಯಾನಂದ ಹಳ್ಳಿ, ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಎ.ಎ.ಬಾಳಿಕಾಯಿ, ಅಶೋಕ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ನಂತರ ಪಾರಿತೋಷಕ ವಿತರಣೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Latest News

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ

ಸಿಂದಗಿ; ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜಯಂತಿಗಳನ್ನು ಆಚರಿಸುವ ಸತ್ಕಾರ್ಯಗಳನ್ನು ನಡೆಸಿದೆ. ಮಹಾನ್ ವ್ಯಕ್ತಿಗಳ...

More Articles Like This

error: Content is protected !!
Join WhatsApp Group