spot_img
spot_img

ಪತ್ನಿ ವೈಫ್ ಆಗಿದ್ದಾಳೆ ಜೀವನ ಲೈಫ್ ಆಗಿದೆ. ಕನ್ನಡಾಂಬೆಯಲ್ಲಿ ಕ್ಷಮೆ ಕೇಳಬೇಕಿದೆ.

Must Read

spot_img
- Advertisement -

ನಾವು ಖಂಡಿತಕ್ಕೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆತಂಕದ ದಿನಗಳನ್ನು ನೋಡುತ್ತಿದ್ದೇವೆ. ಕರ್ನಾಟಕದಲ್ಲೇ ಕನ್ನಡ ದ್ವಿತೀಯ ದರ್ಜೆಯ ಪ್ರಜೆಯಂತಾಗಿದೆ. ಆದರೆ ನಾವು ಕನ್ನಡ ಪ್ರೀತಿಯಿಂದ ಮುಕ್ತರಾಗುವ ಬದಲು ಶಕ್ತರಾದಾಗ ಮಾತ್ರ, ಕನ್ನಡ ಪ್ರೀತಿಯಿಂದ ಪರಿತ್ಯಕ್ತರಾಗುವ ಬದಲು ಅನುರಕ್ತವಾದಾಗ ಮಾತ್ರ ಕನ್ನಡವನ್ನು ಮುಂದಿನ ತಲೆಮಾರಿಗೆ ಮುಟ್ಟಿಸುವ ರಹದಾರಿಯಾಗುತ್ತದೆ..

ಹೀಗೆ ‘ನಾವು ಕನ್ನಡಿಗರು’ ಬರಹದಲ್ಲಿ ಕನ್ನಡ ಕಾಳಜಿ ತೋರಿದ್ದಾರೆ ಡಾ.ಪ್ರದೀಪ್ ಕುಮಾರ್ ಹೆಬ್ರಿ. ಮಂಡ್ಯದ ಸಾಹಿತಿ ಮಿತ್ರರು. ಇವರ ನಾವು ಎಳೆಯರು ನಾವು ಗೆಳೆಯರು ೨೭ ಲೇಖನಗಳ ಪುಸ್ತಕ. ಮಸ್ತಕಕ್ಕೆ ಉತ್ತಮ ವಿಷಯ. ೨೦ಕ್ಕೆ ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆರಂಭ. ಕೃತಿಯ ಆರಂಭ ಲೇಖನ ‘ಕನ್ನಡವೆಂದರೆ ಬರಿ ನುಡಿಯಲ್ಲ’ ನಾಡು ನುಡಿಯ ಭವ್ಯ ಇತಿಹಾಸ ಬಣ್ಣಿಸಿದೆ. ಕನ್ನಡ ಎಂಬುದು ಸಂಪಾದನೆಗಲ್ಲ. ಸಂವೇದನೆಗೆ.. ಮಹಾಭಾರತ ಕಾಲದಿಂದಲೂ ಕನ್ನಡದ ಅಸ್ತಿತ್ವವಿದೆ. ಸಭಾಪರ್ವ-ಕರ್ಣಾಟಾ, ಭೀಷ್ಮಪರ್ವ-ಕರ್ಣಾಟಕಾ: ಹೀಗೆ ಪ್ರಾರಂಭವಾಗಿ ಶೂದ್ರಕ ಕವಿಯ ಮೃಚ್ಛಕಟಿಕ, ಮುಂದೆ ಮತಂಗ, ಜಯಕೀರ್ತಿ, ಕ್ಷೇಮೆಂದ್ರ, ಕಲ್ಹಣ, ಬಿಲ್ವಣ, ಸೋಮದೇವ ಮೊದಲಾದವರ ಕಾವ್ಯಗಳಲ್ಲಿ ತಮಿಳಿನ ಶಿಲಪ್ಪದಿಕಾರನ್ ಕೃತಿಯಲ್ಲಿ ಮುಂದೆ ಕದಂಬರ ೫ನೇ ಶತಮಾನ, ತಲಕಾಡು ಗಂಗರ ೭ನೇ ಶತಮಾನ ರಾಷ್ಟ್ರಕೂಟರ, ಪಾಂಡ್ಯರಾಜನ ೮ನೇ ಶತಮಾನ ಶಾಸನಗಳಲ್ಲಿ ಕನ್ನಡದ ಉಲ್ಲೇಖವಿದೆ..

ಮುಂದೆ ನಾವು ಕನ್ನಡಿಗರು ಬರಹದಲ್ಲಿ ನಮ್ಮ ರಾಜ್ಯಕ್ಕೆ ಬರುವವರೆಲ್ಲರೂ ಪ್ರೀತಿಯ ಅತಿಥಿಗಳಂತೆ ಕಂಡು ಕನ್ನಡ ಭೋಜನವನ್ನು ಉಣಬಡಿಸಿಬೇಕಾಗಿದ್ದ ನಾವು ಕನ್ನಡಾಂಬೆಯಲ್ಲಿ ಕ್ಷಮೆ ಕೇಳಬೇಕಿದೆ. ಏಕೆಂದರೆ ಪತ್ನಿ ವೈಫ್ ಆಗಿದ್ದಾಳೆ. ಜೀವನ ಲೈಫ್ ಆಗಿದೆ. ಚಾಕು ನೈಫ್ ಆಗಿದೆ. ಪ್ರೇಮ ಲವ್ ಆಗಿದೆ ರೋಮಾನ್ಸ್ ಆಗಿದೆ. ಹಸು ಕೌ ಆಗಿದೆ. ಮುತ್ತು ಕಿಸ್ ಆಗಿದೆ. ಶಿಕ್ಷಕಿ ಮಿಸ್ ಆಗಿದ್ದಾರೆ. ಕ್ಷಮೆ ಸಾರಿ ಆಗಿದೆ. ಕ್ಷಮಿಸಿ ಕವಿಗಳು ಎರಡು ಸಾಲು ಪರಿಚಯ: ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳ ತಾ. ಹೆಬ್ರಿಯಲ್ಲಿ ೧-೬-೧೯೫೮ರಂದು ಜನಿಸಿ ಈಗ ಮಂಡ್ಯ ವಾಸಿ. ಇವರ ದರ್ಶಿನಿ ಕ್ಲಿನಿಕಲ್ ಲ್ಯಾಬೋರೇಟರಿ ಸಾಹಿತ್ಯ ಸಾಂಸ್ಕೃತಿಕ ಸಾಧಕರ ನೆಚ್ಚಿನ ತಾಣ. ಮೊದಲ ಕೃತಿ ಬಾಳ ಪಯಣ ೧೯೮೯ರಲ್ಲಿ ಪ್ರಕಟ. ಅಲ್ಲಿಂದ ಬಿಡುವಿಲ್ಲದ ಬರವಣಿಗೆ. ಕೃತಿಗಳ ಸಂಖೈ ೫೦೦ ದಾಟಿದೆ.

- Advertisement -

ನಮ್ಮ ಜಗತ್ತು ವಿಶಾಲವಾದುದು. ವಿಷಯಗಳೂ ವಿಶಾಲವಾದವು. ತಿಳಿದಷ್ಟು ಕಡಿಮೆ ಸದ್ಯ ಕೃತಿಯ ೨೭ ಬರಹ ವೈವಿಧ್ಯ. ಕನ್ನಡ, ಶ್ರೀರಾಮ, ಹನುಮ, ಬ್ರಹ್ಮಾನಂದ ಗುರು, ಶಿರಡಿ ಸಾಯಿಬಾಬಾ, ಭರತ ಮುನಿ, ಬಸವಣ್ಣ, ಗಾಂಧಿ. ಹೀಗೆ ವಿಷಯಗಳು ಉಪನ್ಯಾಸದ ಲೇಖನ ಸ್ವರೂಪದವು. ನಮ್ಮ ಓದಿನಾಸಕ್ತಿಗೆ ಪ್ರೇರಕವು.

‘ಕನ್ನಡ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು’ ವಿಷಯವಾಗಿ ಬರೆಯುತ್ತಾ ನಾವೂ ಕೃಷಿಕರು. ಅಕ್ಷರ ಕೃಷಿಕರು. ನನ್ನಂತೆ ನೂರು ಸಾವಿರ ಮಂದಿ ಅಕ್ಷರ ಬೆಳೆದು ಕೃತಿ ಬೆಳೆ ಬೆಳೆಯುತ್ತೇವೆ. ಬೆಲೆ ಸಿಗದೆ ಪರದಾಡುತ್ತೇವೆ. ನೇಗಿಲ ಯೋಗಿ ಭೂಮಿ ತಾಯಿಯ ಚೊಚ್ಚಲ ಮಗ. ಕೈ ಕೆಸರಾದರೆ ಬಾಯಿ ಮೊಸರು ಎಂದು ಸಾಧಿಸಿ ತೋರಿದವ. ಆದರೆ ಎಲ್ಲರಿಂದಲೂ ನಿರ್ಲಕ್ಷಿಸಲ್ಪಟ್ಟವ. ರೈತನಿಲ್ಲದಿದ್ದರೆ ನಮ್ಮ ಬದುಕೇ ಇಲ್ಲ. ಆದರೆ ರೈತನಿಗೆ ಬದುಕು ಎಂಬುದೇ ಇಲ್ಲ. ಜನಪದ ತ್ರಿಪದಿ ಹೇಳಿದ್ದು:

ಕಣಜ ಬೆಳೆದ ಮನೆಗೆ ಉಣಲಾಕ ಕೂಳಿಲ್ಲ
ಬೀಸಾಕ ಕವಣೆ ಬಲವಿಲ್ಲ: ಕೊಟ್ಟ ವರ
ಸುಡಬೇಡ ಜನುಮ ಸುಖವಿಲ್ಲ.

- Advertisement -

‘ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ’ ಬರಹ ಸ್ವಾರಸ್ಯ ಸೊಗಸಿದೆ. ಬಸವಣ್ಣನವರು ಕಾಯಕತತ್ವ ಪ್ರತಿಪಾದಕರು. ದಾಸೋಹ ಚಿಂತಕರು. ದುಡಿದುದರಲ್ಲಿ ಅಗತ್ಯಕ್ಕೆ ಬೇಕಿರುವಷ್ಟನ್ನು ಮಾತ್ರವೇ ಇರಿಸಿಕೊಂಡು ಹೆಚ್ಚು ಕೂಡಿಡದೆ ಇತರರಿಗೆ ನೀಡಬೇಕೆಂಬುದು ಪ್ರತಿಪಾದನೆ. ಅವರ ಜೀವನದಲ್ಲಿ ನಡೆದ ಘಟನೆ: ನಡು ರಾತ್ರಿ ಬಸವಣ್ಣನವರ ಮನೆಗೆ ಕಳ್ಳರು ನುಗ್ಗುತ್ತಾರೆ. ಕೋಣೆಯಲ್ಲಿ ಮಲಗಿದ್ದ ನೀಲಾಂಬಿಕೆಯ ಕಿವಿಯೋಲೆ ಕಿತ್ತುಕೊಳ್ಳಲು ಮುಂದಾಗುತ್ತಾರೆ. ಅಯ್ಯೋ! ಕಳ್ಳ ಕಳ್ಳ ನನ್ನ ಕಿವಿಯೋಲೆ ಎಂದು ನೀಲಾಂಬಿಕೆ ಕಿರುಚುತ್ತಾರೆ. ಬಸವಣ್ಣರಿಗೆ ಎಚ್ಚರವಾಗುತ್ತದೆ. ತಕ್ಷಣ:

ಒಡನಿರ್ದ ಸತಿಯೆಂದು ನೆಚ್ಚಿರ್ದೆನಯ್ಯಾ
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ
ಅಯ್ಯೋ ನಮ್ಮಯ್ಯನ ಕೈ ನೊಂದಿತು
ತೆಗೆದು ಕೊಡಾ ಎಲೆ ಚಾಂಡಾಲಗಿತ್ತಿ
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದೊಡೆ
ಕೂಡಲ ಸಂಗಮದೇವನಲ್ಲದೆ ಮತ್ತಾರೂ ಅಲ್ಲ..

ಎನ್ನುತ್ತಾರೆ. ವಚನ ಕೇಳಿ ಕಳ್ಳರ ಅವಸ್ಥೆ ಏನಾಗಿರಬೇಡ. ಕಳ್ಳರಾಗಿದ್ದರೂ ಹಗಲು ದರೋಡೆಗೆ ಇಳಿಯದ ಅವರು ಪಶ್ಚಾತ್ತಾಪದ ಅಗ್ನಿಯಲ್ಲಿ ದಗ್ಧರಾಗುತ್ತಾರೆ. ಶುಧ್ಧರಾಗಿ ಬಸವಣ್ಣರ ಭಕ್ತರಾಗುತ್ತಾರೆ. ಇನ್ನೂ ಕೃತಿಯ ಶೀರ್ಷಿಕೆ ನಾವು ಎಳೆಯರು ನಾವು ಗೆಳೆಯರುನಲ್ಲಿ ಹೇಳಿರುವ ಆರು ಹಿತವಚನಗಳಲ್ಲಿ ಒಂದು ‘ಹಿಂದಕ್ಕೆ ನೋಡು ಅನುಭವ, ಮುಂದಕ್ಕೆ ನೋಡು ಭವಿಷ್ಯ, ಸುತ್ತಲೂ ನೋಡು ಸತ್ಯದರಿವು, ನಿನ್ನೊಳಗೆ ನೋಡು ಆತ್ಮ ವಿಶ್ವಾಸ, ಹೆಜ್ಜೆಗಳಿಂದ ದಾರಿ ಕಷ್ಟಗಳಿಂದ ಗುರಿ.. ಇನ್ನೊಂದು ನಿಮ್ಮ ಬದುಕಿನ ನಿಜ ಶಿಲ್ಪಿಗಳು ನೀವು ಮಾತ್ರ. ಮತ್ತೊಂದು ಮತ್ತು ಕಡೆಯದು ಮೂರ್ಖರ ಸಂತೆಯಲ್ಲಿ ಮೌನವಾಗಿರಿ. ಬುಧ್ದಿವಂತರ ಜೊತೆ ಬುದ್ಧನಂತಿರಿ..

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,೩ನೇ ಕ್ರಾಸ್, ಹಾಸನ-೫೭೩೨೦೧.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group