ಸಿಂದಗಿ – ಪಟ್ಟಣದ ಶ್ರೀ ಪದ್ಮರಾಜ್ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿ ಜಯಶ್ರೀ ರಾಜಶೇಖರ ಕೂಚಬಾಳ ಕರ್ನಾಟಕ ಅಂಡರ್ 23 ಮಹಿಳಾ ಟಿ20 ತಂಡಕ್ಕೆ ರಾಯಚೂರು ವಿಭಾಗದಿಂದ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಶೀನ್ ಕ್ರಿಕೆಟ ಅಕಾಡೆಮಿಯಲ್ಲಿ ಕ್ರಿಕೆಟ್ ತರಬೇತಿ ಪಡೆದುಕೊಂಡು ಪ್ರಸ್ತುತ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
2024 -25 ನೇ ಸಾಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಟಿ20 ತಂಡದ ಅಂಡರ್ 19 ಹಾಗೂ ಅಂಡರ್ 23 ಎರಡು ವಿಭಾಗದಲ್ಲಿ ಸಂಭವನೀಯ ಆಟಗಾರ್ತಿಯಾಗಿ ವಿಶೇಷ ಸಾಧನೆಗೈದ ಕ್ರಿಕೆಟ್ ಕ್ರೀಡಾಪಟು ಜಯಶ್ರೀ ಕೂಚಬಾಳ ಅವರಿಗೆ ಫ್ಲೈ ಸ್ಪೋರ್ಟ್ಸ್ ಕ್ಲಬ್ ಸಿಂದಗಿ, ಕೊಹಿನೂರು ಕ್ರಿಕೆಟ್ ಕ್ಲಬ್ ವಿಜಯಪುರ, ಶಾಸಕ ಅಶೋಕ್ ಮನಗೂಳಿ, ಗುತ್ತಿಗೆದಾರ ಮುತ್ತು ಮುಂಡೇವಾಡಗಿ, ಉಮೇಶ ಜೋಗುರ, ನಾರಾಯಣ ಕುಲಕರ್ಣಿ, ಮುತ್ತು ಸೊನ್ನದ, ಶ್ರೀಕಾಂತ ಹೂಗಾರ, ಯಂಕನಗೌಡ ಪಾಟೀಲ, ರವಿ ದೇವರಮನಿ, ಗೊಲ್ಲಾಳಪ್ಪಗೌಡ, ಸಿದ್ದನಗೌಡ ಪಾಟೀಲ, ಸಿದ್ದಲಿಂಗ ಕಿಣಗಿ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.