spot_img
spot_img

ಕೃತಿ ವಿಮರ್ಶೆ : ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಶಾಸ್ತ್ರೀಯ ಅಧ್ಯಯನ

Must Read

spot_img
- Advertisement -

ನಾನು ಅತ್ಯಂತ ಚಿಕ್ಕಂದಿನಲ್ಲೇ ಅನೇಕ ಗೊಂಬೆಯಾಟ ಮತ್ತು ಯಕ್ಷಗಾನವನ್ನೂ ನೋಡಿದ್ದೇ. ಆಗಲೇ ಅವುಗಳ ಬಗ್ಗೆ ಆಸಕ್ತಳಾಗಿದ್ದೆ ಪರಿಣಾಮ ನಾನು ಕನ್ನಡ ಎಂ.ಎ.ವಿದ್ಯಾರ್ಥಿಯಾದಾಗ ಜಾನಪದವನ್ನೇ ವಿಶೇಷ ವಿಷಯವನ್ನಾಗಿ ಆರಿಸಿಕೊಂಡೆ ಎನ್ನುವ ಡಾ. ಎಚ್.ಬಿ.ಯಶೋಧರಾ ಅವರ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಕೃತಿ ನನ್ನ ಬಳಿಗೆ ಬಂದು ಬಹಳ ದಿನಗಳೇ ಅಗಿವೆ. ಯಾವ ಸಂಧರ್ಭ ವೇದಿಕೆ ನೆನಪಾಗುತ್ತಿಲ್ಲ.

ಇತ್ತೀಚೆಗೆ ಹಾಸನದ ಕುವೆಂಪು ನಗರ ಕನ್ನಡ ಸಂಘದವರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದಿದ್ದರು ಹೋಗಿದ್ದೆ. ಸಂಘಟಕರ ಪರಿಚಯ ಇಲ್ಲ. ಅಲ್ಲಿಯ ನಿವಾಸಿ ಡಾ.ಸಿ.ಎನ್.ಜಗದೀಶ್ ನನ್ನ ಹೆಸರು ಹಾಕಿಸಿದ್ದರು. ಅವರೇ ಬೆಳಿಗ್ಗೆ ಕನ್ನಡ ದ್ವಜಾರೋಹಣ ಕೂಡ ನೆರವೇರಿಸಿದ್ದರು. ನಾನು ಸಂಜೆ ಹೋಗಿದ್ದೆ. ಅದ್ಧೂರಿ ಸ್ಟೇಜ್ ರಸ್ತೆ ನಡುವೆ ಹಾಕಿದ್ದರು. ಆರ್ಕೆಸ್ಟ್ರಾ ಇತ್ತಾಗಿ ವೇದಿಕೆ ಕಾರ್ಯಕ್ರಮ ತಿಳಿಯಲಿಲ್ಲ.

ಡಾಕ್ಟರ್ ಕಾಫಿಗೆ ಮನೆಗೆ ಕರೆದರು ಹೋದೆ. ಅಲ್ಲಿ ಯತೋಧರಾ ಅವರ ಕೃತಿ ನನ್ನ ಕಣ್ಣಿಗೆ ಬಿತ್ತು. ‘ಡಾಕ್ಟ್ರೆ, ಈ ಪುಸ್ತಕ ನನ್ನ ಬಳಿಯೂ ಇದೆ. ಇನ್ನೂ ಓದಿಲ್ಲ ಎಂದೆ. ಖಂಡಿತ ಓದಿ ಇವರು ನನ್ನ ಹೆಂಡತಿ ಎಂದರು. ಮೇಡಂ ಇದ್ದಾರಾ ಎಂದೆ. ಇಲ್ಲಾ ತೀರಿಹೋಗಿ ೨೦ ವರ್ಷವಾಯಿತು ಎಂದರು. ಕರೆಂಟ್ ಶಾಕ್ ಹೊಡೆದಂತಾಯಿತು. ೬೫೦ ಪುಟದ ಪುಸ್ತಕ ನೋಡಿ ಉಡುಪಿ ಕಡೆಯ ಮೇಡಂ ಇರಬಹುದು ಎಂದುಕೊಂಡಿದ್ದ ನನ್ನ ಊಹೆ ಸುಳ್ಳಾಗಿ ಮೇಡಂ ಹಾಸನದಲ್ಲೇ ಹುಟ್ಟಿ ಬೆಳೆದಿದ್ದು ತಿಳಿಯಿತು.

- Advertisement -

ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ಪ್ರಾಧ್ಯಾಪಕರು ಡಾ. ಜೀ.ಶಂ.ಪರಮಶಿವಯ್ಯ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಮಹಾ ಪ್ರಬಂಧ. ಒಟ್ಟು ೧೧ ಅಧ್ಯಾಯಗಳಲ್ಲಿದೆ. ಯಕ್ಷಗಾನ ಸಾಹಿತ್ಯ ಸ್ವರೂಪವನ್ನು ಹಂತ ಹಂತವಾಗಿ ವಿಶ್ಲೇಸಿಸುವುದಕ್ಕೆ ಪೂರ್ವಭಾವಿ ಡಾ.ಯಶೋಧರಾ ಅವರು ಎತ್ತಿಕೊಳ್ಳುವ ವಿಷಯ ಯಕ್ಷಗಾನ ಕಾವ್ಯವೂ ಹೌದು ನಾಟಕವೂ ಹೌದು ಎಂಬುದು. ಇದರಲ್ಲಿ ಪ್ರಮುಖವಾಗಿ ಅವರು ಯಕ್ಷಗಾನ ಸಾಹಿತ್ಯದ ಎರಡು ಮುಖ್ಯ ಘಟ್ಟಗಳನ್ನು ಗುರುತಿಸುತ್ತಾರೆ. ನೋಡುವ ದೃಶ್ಯಾಂತ ಕೇಳುವ ಶ್ರವ್ಯಾಂಶ. ಇವರೆಡನ್ನು ಮೈಗೂಡಿಸಿಕೊಂಡು ಹುಟ್ಟಿಕೊಂಡ ಯಕ್ಷಗಾನ ಕಾವ್ಯ ಕಾಲಕ್ರಮೇಣ ದೃಶ್ಯಾಂಶವನ್ನೇ ಮುಂದಾಗಿಸಿಕೊಂಡು ನಾಟಕ ಸ್ವರೂಪವನ್ನು ಪಡೆದುಕೊಂಡವೆಂಬುದನ್ನು ನಿರೂಪಿಸುವಲ್ಲಿ ಸಾಕಷ್ಟು ಆಧಾರಗಳನ್ನು ಕಲೆಹಾಕಿದ್ದಾರೆ. ತಮ್ಮ ಅಧ್ಯಯನದಲ್ಲಿ ಅವರು ವ್ಯಾಪಕವಾಗಿ ವಿಷಯ ಸಂಗ್ರಹಣೆ ಮಾಡಿ ಅದನ್ನೂ ಸೂಕ್ತ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಯಕ್ಷಗಾನದಲ್ಲಿ ಕಂಡುಬರುವ ಪಾಯಗಳನ್ನು ಹೆಸರಿಸಿ ಅವುಗಳ ಸಾಹಿತ್ಯದ ಸ್ವರೂಪವನ್ನು, ಯಕ್ಷಗಾನದ ಪೂರ್ವರೂಪಗಳನ್ನು ಪ್ರಸ್ತಾಪಿಸಿದ್ದಾರೆ. ಶ್ರೀಕೃಷ್ಣ ಪಾರಿಜಾತ, ತಾಳಮದ್ದಲೆ, ಗೊಂಬೆಯಾಟಗಳ ಸಾಹಿತ್ಯ ಸ್ವರೂಪವನ್ನು ಗುರುತಿಸಿದ್ದಾರೆ. ೧೩ನೇ ಶತಮಾನದ ಕವಿಗಳಿಂದ ಹಿಡಿದು ೨೦ನೇ ಶತಮಾನದ ಕವಿಗಳವರೆಗೆ ಕೃತಿ ಮತ್ತು ಕೃತಿಕಾರರ ಪರಿಚಯ ಮಾಡಿದ್ದಾರೆ. ಯಕ್ಷಗಾನ ಸಂಗೀತ ಹಾಗೂ ರಸಪ್ರತಿಪಾದನೆ, ಯಕ್ಷಗಾನ ಛಂದಸ್ಸು, ಬಯಲಾಟದ ಲಕ್ಷö್ಯ ಗ್ರಂಥಗಳನ್ನು ಕುರಿತಾದ ವಿವರ ಹಾಗೂ ವಿಶ್ಲೇಷಣೆ ಅವರ ಪ್ರೌಢಿಮೆ ವಿದ್ವತ್ತಿಗೆ ಸಾಕ್ಷಿ ಎಂದು ಪ್ರೊ.ಡಿ.ಕೆ.ರಾಜೇಂದ್ರರವರು ಮುನ್ನುಡಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಧ್ಯಾಯ ೧ರ ಯಕ್ಷಗಾನ ಅದರ ಸ್ವರೂಪದಲ್ಲಿ ಮಾನವ ಭಾಷೆ ಕಲಿಯುವ ಮೊದಲು ತಾನು ಆಶ್ರಯಿಸಿದ್ದ ಅರಣ್ಯದ ಪ್ರಾಣಿಪಕ್ಷಿಗಳನ್ನು ಅನುಕರಿಸಿದ. ಪ್ರಕೃತಿಯ ರಮಣೀಯತೆಯನ್ನು ಕಂಡು ಸಂತೋಷದಿಂದ ಕೂಗಿ, ಕುಪ್ಪಳಿಸಿ ಕೇಕೆ ಹಾಕುವಂತೆ ರುದ್ರತೆಯನ್ನು ಕಂಡಾಗ ಖಿನ್ನನಾಗುತ್ತಿದ್ದ. ಪ್ರಕೃತಿಯನ್ನೋ ಇಲ್ಲ ತನ್ನ ಆರಾಧ್ಯ ದೇವತೆಯನ್ನೋ ಮೆಚ್ಚಿಸಲು ಕುಣಿತವನ್ನು ಅನುಸರಿಸಿದ ಆರಾಧನಾ ವಿಧಾನ ಅವನ ಮನರಂಜನೆಯ ಸಾಧನವೂ ಆಯಿತು. ಮುಳಿಯ ತಿಮ್ಮಪ್ಪಯ್ಯ ಅವರು ಅತಿ ಪ್ರಾಚೀನ ಕಾಲದಲ್ಲಿ ದಕ್ಷಿಣ ಪ್ರಾಂತದಲ್ಲಿದ್ದ ಯಕ್ಷರೆಂಬ ಜನವರ್ಗದವರಲ್ಲಿ ಪ್ರಚಾರದಲ್ಲಿದ್ದ ಹಾಡುಗಾರಿಕೆಯ ಕ್ರಮವೇ ಯಕ್ಷಗಾನ ಎಂದಿದ್ದಾರೆ. ಅದಕ್ಕೆ ಡಾ.ಶಿವರಾಮ ಕಾರಂತರು ‘ಗಂಧರ್ವರು ಕಾಲ್ಪನಿಕ ವ್ಯಕ್ತಿಗಳು. ಅಂತೆಯೇ ಯಕ್ಷ, ಕಿನ್ನರ, ಕಿಂಪುರುಷರು ಕೂಡ ಕಲ್ಪನಾ ಲೋಕದವರೇ. ಯಕ್ಷ ಪದವನ್ನು ತದ್ಭವ ರೂಪಕ್ಕಿಳಿಸಿ ಆ ಶಬ್ಧದಿಂದ ಅಂಥ ಒಂದು ಜನವರ್ಗವು ಇದ್ದೇ ತೀರಬೇಕು ಎಂದು ಹೇಳ ಹೊರಟರೆ ಹೇಗೆ? ಎಂದು ಪ್ರಶ್ನಿಸಿ ಮೋಹಕ ವಾದ ಒಂದು ಸಂಗೀತ ಸಂಪ್ರದಾಯಕ್ಕೆ ಗಂಧರ್ವ ಗಾನ ಎಂದು ಒಂದು ಸಮಾಜ ಕರೆಯಿತಾದರೆ ಅದಕ್ಕಿಂತ ಭಿನ್ನವಾದ ಶೈಲಿಯುಳ್ಳ ಮತ್ತೊಂದು ಗಾನ ಸಂಪ್ರದಾಯವನ್ನು ಯಕ್ಕಗಾನವೆಂದು ನಮ್ಮ ನಾಡಿನ ಜನರು ಕರೆದಿರಬೇಕೆಂದು ನನಗೆನಿಸುತ್ತದೆ..ಎಂದಿದ್ದಾರೆ.

ಕಾರಂತರ ಹೇಳಿಕೆಯನ್ನು ಸ್ಫಷ್ಟೀಕರಿಸುವಂತೆ ಕುಬಣವಾರು ಕೃಷ್ಣರಾವ್ ಅವರು ದೇಶೀ ಸಂಗೀತದಲ್ಲಿ ಎರಡು ವಿಧಾನ. ಗಂಧರ್ವಗಾನ ಮತ್ತು ಯಕ್ಷಗಾನ. ಗಂಧರ್ವರು ಹಾಡುತ್ತಿದ್ದ ರೀತಿಯಲ್ಲಿರುವ ಹಾಡುವಿಕೆ ಗಂಧರ್ವಗಾನವೆAತಲೂ ಯಕ್ಷರು ಹಾಡುತ್ತಿದ್ದ ರೀತಿಯ ಹಾಡುವಿಕೆ ಯಕ್ಷಗಾನವೆಂತಲೂ ಬಲ್ಲವರ ಮತ ಎಂದಿದ್ದಾರೆ ಜತೆಗೆ ಯಕ್ಷಗಾನವೂ ಶಾಸ್ತ್ರೀಯ ಸಂಗೀತವೇ ಎಂದು ಒಪ್ಪಿದ್ದಾರೆ.. ಯಕ್ಷಗಾನ ಕಲೆಗಳ ಸಮಷ್ಟಿರೂಪ. ಮೇಲುನೋಟಕ್ಕೆ ಗಾನವೇ ಪ್ರಧಾನವಾದಂತೆ ಕಂಡರೂ ಇಲ್ಲಿ ಸಾಹಿತ್ಯ, ನೃತ್ಯ, ಚಿತ್ರ, ಶಿಲ್ಪ ಇವೆಲ್ಲವನ್ನೂ ಗರ್ಭೀಕರಿಸಿಕೊಂಡಿರುವುದು ಗೋಚರವಾಗುತ್ತದೆ.

- Advertisement -

ಕನ್ನಡ ಯಕ್ಷಗಾನ ಕೃತಿಗಳಲ್ಲಿ ವಿವಿಧ ಜಾತಿಯ ಪದ್ಯಗಳಿವೆ. ಭಾಷೆಗೆ ವ್ಯಾಕರಣದಂತೆ ಛಂದಸ್ಸೂ ಸಾಧಕವಾಗಿದೆ. ವ್ಯಾಕರಣ ಗದ್ಯ ಪದ್ಯಗಳೆರಡಕ್ಕೂ ಸಂಬಂಧಿಸಿದ್ದಾದರೆ, ಛಂದಸ್ಸು ಪದ್ಯಕ್ಕೆ ಮಾತ್ರ ಸಂಬಂಧಿಸಿದ್ದು. ಪದ್ಯಗಳ ನಿಯಮವನ್ನು ಛಂದಸ್ ಶಾಸ್ತ್ರ ತಿಳಿಸುತ್ತದೆ. ಛಂದ್ ಎಂದರೆ ಕುಣಿ ಎಂದರ್ಥವಾಗುತ್ತದೆ. ಪದ್ಯಕ್ಕೂ ಛಂದಸ್ಸಿಗೂ ಸಂಬಂಧವಿದೆ. ಅಕ್ಷರದ ಶಬ್ಧಗಳ ಗತಿಯನ್ನು ಛಂದಸ್ಸು ನಿರ್ಧರಿಸುತ್ತದೆ. ನೃತ್ಯಗೀತಾದಿ ಸಮಾನವಾದ ಮನುಷ್ಯನ ಅಂತ:ಕರಣವನ್ನು ತೀವ್ರ ಅನುಭವವನ್ನು ವಿವಿಧ ಚಿತ್ರವೃತ್ತಿ ವಿಲಾಸಗಳನ್ನು ಪದವಾಗಿ ಬರುವ ಛಂದಸ್ಸು ನಿಗದಿಸುತ್ತದೆ. (ಕೆ.ಕೃಷ್ಣಮೂರ್ತಿ)

ಯಕ್ಷಗಾನದಲ್ಲಿ ಹಲವು ಛಂದಸ್ಸುಗಳ ಪ್ರಯೋಗವಾಗಿದ್ದರೂ ಹೆಚ್ಚಾಗಿ ಕಾಣುವುದು ದ್ರಾವಿಡ ಮೂಲದ ಛಂದಸ್ಸು. ಶಿಷ್ಟ ಕಾವ್ಯಗಳಲ್ಲಿ ಹರಿಹರನ ಕಾಲದಿಂದ ದೇಶಿ ಛಂದಸ್ಸಿನ ಬಳಕೆ ಕಂಡುಬಂದರೂ ದೇಶಿ ಛಂದಸ್ಸಿನ ವಿವಿಧ ಪ್ರಯೋಗಗಳು ಕಾಣುವುದು ಯಕ್ಷಗಾನ ಕೃತಿಗಳಲ್ಲಿ ಮಾತ್ರ. ದ್ರಾವಿಡ ಸತ್ವ ಇದರಲ್ಲಿ ಅಡಕವಾಗಿದೆ. ಏಕಪದಿಯಿಂದ ಹಿಡಿದ ಹಲವು ಪದಿಗಳವರೆಗೆ ಸಾಗುವ ರಚನೆಗಳು ಯಕ್ಷಗಾನದಲ್ಲಿ ವಿಶಿಷ್ಟವಾದಂಥವು.
ಯಕ್ಷಗಾನ ಸಾಹಿತ್ಯ ಚರಿತ್ರೆ ತುಂಬಾ ವ್ಯಾಪಕವಾದದ್ದು. ಯಕ್ಷಗಾನ ಒಂದು ಜಾನಪದ ಕಲಾಪ್ರಕಾರವೂ ನಾಟಕ ಪ್ರಕಾರವು ಆಗಿರುವುದರಿಂದ ಅದರ ಪರಂಪರೆಯೂ ಪ್ರಾಚೀನವಾದದ್ದು. ಆದರೂ ಯಕ್ಷಗಾನ ಸಾಹಿತ್ಯ ಶಿಷ್ಟ ಪರಂಪರೆಗಿಂತ ಭಿನ್ನರೂಪದಲ್ಲಿ ಬೆಳೆದು ಬಂದುದರಿಂದಲೇ ಅವುಗಳ ನಿರ್ಧಿಷ್ಟ ಕಾಲವನ್ನು ಗುರ್ತಿಸುವುದು ಕಷ್ಟವಾಗಿದೆ. ಇದುವರೆಗೆ ನೂರಾರು ಯಕ್ಷಗಾನ ಕೃತಿಗಳು ದೊರೆತಿದ್ದರೂ ಹೆಚ್ಚಿನ ಕರ್ತೃಗಳು ಅನಾಮಧೇಯರಾಗಿದ್ದಾರೆ. ಡಾ.ಎಚ್.ಬಿ. ಯಶೋಧರಾ ಅವರು ತಮ್ಮ ಪ್ರಬಂಧದಲ್ಲಿ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯವನ್ನು ಮುಖ್ಯವಾಗಿ ವಿವೇಚಿಸಿದ್ದರೂ ನೆರೆ ಭಾಷೆಯಾದ ತೆಲುಗಿನ ಯಕ್ಷಗಾನ ಕೃತಿಗಳನ್ನು ಗಮನಿಸಿದ್ದಾರೆ. ಕರ್ನಾಟಕ ಯಕ್ಷಗಾನ ಕೃತಿಗಳನ್ನು ಸಮಗ್ರವಾಗಿ ತೌಲನಿಕವಾಗಿ ವಿಶ್ಲೇಷಿಸಲಾಗಿದೆ. ಭಾರತ ಕತೆಗಳ ಆಧಾರದ ಮೇಲೆ ಕಲ್ಪಿತ ಕತೆಗಳ ನಿರ್ಮಾಣ ಯಕ್ಷಗಾನ ರಚನೆಯಲ್ಲಿ ಕಾಣುವ ಪ್ರಮುಖ ಅಂಶ.

ಕೃಷ್ಞಾರ್ಜುನ ಕಾಳಗ, ರತಿ ಕಲ್ಯಾಣ, ಕುಮುದಾಕ್ಷಿ ಕಲ್ಯಾಣ, ಕನಕಾಂಗಿ ಕಲ್ಯಾಣ, ಲಕ್ಷಣಾ ಕಲ್ಯಾಣ, ಶಶಿರೇಖಾ ಪರಿಣಯ, ಚಕ್ರಚಂಡಿಕಾ ಹಾಗೂ ನಾರದ ಪ್ರತಾಪದಂಥ ಯಕ್ಷಗಾನ ಕೃತಿಗಳು ಮಹಾಭಾರತದ ಪಾತ್ರಗಳನ್ನೊಳಗೊಂಡಿದ್ದು ಮೂಲಕತೆಗೆ ಭಂಗಬಾರದಂತೆ ಕಲ್ಪಿತ ಕತೆಗಳ ಆಧಾರದಿಂದ ರಚಿತವಾದಂಥವು. ಜತೆಗೆ ಭಾರತ ಕತೆ ನಡೆದ ನಂತರ ಪಾಂಡವರ ಸ್ಥಿತಿಯ ಬಗ್ಗೆ ಹುಟ್ಟಿಕೊಂಡಂಥ ಕೃಷ್ಣ ಗಾರುಡಿ, ಭೀಮಾರ್ಜುನರ ಕಾಳಗ ಕೃತಿಗಳೂ ಉಂಟು. ಮಹಾಭಾರತಕ್ಕೆ ಸಂಬಂಧಿಸಿದ ಯಕ್ಷಗಾನಗಳಲ್ಲಿ ಕಾಣುವ ವೈವಿಧ್ಯ ಇತರ ಪುರಾಣಮೂಲದ ಯಕ್ಷಗಾನದಲ್ಲಿ ಅಷ್ಟಾಗಿ ಕಾಣುವುದಿಲ್ಲ. ರಾಮಾಯಣಕ್ಕೆ ಸಂಬಂಧಪಟ್ಟ ಪ್ರಸಂಗಗಳಲ್ಲಿ ಕೆಲವು ವ್ಯತ್ಯಾಸಗಳಿದ್ದರೂ ಕಲ್ಪಿತ ಕತೆಗಳು ಬಹಳ ವಿರಳ. ಇನ್ನುಳಿದ ಭಾಗವತ ಶಿವಪುರಾಣ ಹಾಗೂ ಜೈನಪುರಾಣದ ಯಕ್ಷಗಾನ ಕೃತಿಗಳೆಲ್ಲಾ ಹೆಚ್ಚಾಗಿ ಆಯಾ ಪುರಾಣಗಳ ನೇರ ಅನುಕರಣೆಗಳಾಗಿವೆ. ಸದ್ಯಕ್ಕೆ ನಮಗೆ ದೊರೆತಿರುವ ಪ್ರಥಮ ಯಕ್ಷಗಾನ ಕಾವ್ಯ ಕೃತಿ ಕೃಷ್ಣಾರ್ಜುನ ಕಾಳಗ. ಇದೇ ಕತೆಯನ್ನು ಆಧರಿಸಿ ಬರೆದ ಐದು ಮಂದಿ ಯಕ್ಷಗಾನ ಕವಿಗಳು ಸಿಗುತ್ತಾರೆ. ದೇವಿದಾಸ, ಹಳೇಮಕ್ಕಿರಾಮ, ಮೂಲ್ಕಿ ರಾಮಕೃಷ್ಣಯ್ಯ, ಸಂಕರ್ಯ ಭಾಗವತ ಮತ್ತು ಅಳಿಯ ಲಿಂಗರಾಜ. ಯಕ್ಷಗಾನಗಳ ಸಾಹಿತ್ಯ ಸ್ವರೂಪ ಗಮನಿಸಿದಾಗ ಜನಪದ ಕಥೆಗಳನ್ನಾಧರಿಸಿ ರಚಿಸಿದ ಕೆಂಪಣ್ಣಗೌಡ, ಕಸ್ತೂರಿಸಿದ್ದ, ಸಾಂಬಯ್ಯ ಇವರು ಕಾಳಿಂಗನಿಗಿAತ ಪೂರ್ವ ಕವಿಗಳಾಗಿ ಕಾಣುತ್ತಾರೆ. ಕಾಳಿಂಗ ಬ್ರಾಹ್ಮಣ ಕವಿ. ಈತನ ಪಟ್ಟಾಭಿಷೇಕ ಕೃತಿಯಿಂದ ಇವನ ಕಾಲ ನಿರ್ಣಯ (ಕ್ರಿ.ಶ. ಸು.೧೨೦೦) ಮಾಡಲಾಗಿದೆ.

ಕಾಳಿಂಗನ ಈ ಪಟ್ಟಾಭಿಷೇಕ ೨೭ ಗರಿಗಳ ಒಂದು ಸಣ್ಣ ಕೃತಿ. ಕೃತಿ ಭರತ ಶತೃಘ್ನರು ವಿದ್ಯಾಭ್ಯಾಸಕ್ಕಾಗಿ ಕೇಕೆಯ ರಾಜನ ಮಗನೊಂದಿಗೆ ಕೇಕೆಯಕ್ಕೆ ಪ್ರಯಾಣ ಮಾಡಿದಲ್ಲಿಂದ ಆರಂಭವಾಗಿದೆ. ಕೃತಿ ಹೆಚ್ಚಾಗಿ ಮೂಲ ರಾಮಾಯಣಕ್ಕೆ ಋಣಿಯಾಗಿದೆ. ಕೆಂಪಣ್ಣಗೌಡ ಒಕ್ಕಲಿಗ ಕವಿ. ಮಂಡ್ಯ ಜಿಲ್ಲೆಯವನು. ಈ ಕವಿಯ ಕರಿಭಂಟನ ಕಥೆ ಒಂದೇ ಒಂದು ಕೃತಿ ದೊರಕಿದೆ. ಈ ಕೃತಿಯ ಅಂತ್ಯದಲ್ಲಿ ಕವಿ
ಸೂಕ್ಷö್ಮದೊಳೀಕೃತಿಯು ಸುಲಭವಾಗಿರಲು
ಯಕ್ಷಗಾನವ ಮಾಡಿದವರಾರೆನಲು
ಸಲುಭಾಗ್ಯ ಸಕಲು ಗುಣ ಸಂಪನ್ನ ಸು
ವಿವೇಕಿ ಕೆಂಪಣ್ಣಗೌಡನದೆನ್ನಿ
ಲಲನೆ ರತ್ನವೆನಿಪ ಹಲಗಮ್ಮನ ಗರ್ಭ
ಲಲಿತಾಕ್ಷೀರ ಕಳೆಚಂದ್ರವಮಾನೆನಿಸಿ..
ಹೀಗೆ ಹೇಳಿಕೊಂಡಿದ್ದು ಕೆಂಪಣ್ಣಗೌಡನೇ ಈ ಕೃತಿಯ ಕರ್ತೃವೆಂದೂ ಈತ ಹಲಗಮ್ಮನ ಮಗನೆಂದೂ ಸ್ಪಷ್ಟವಾಗುತ್ತದೆ. ಕಥೆಯ ಪರಿಧಿಯಲ್ಲಿ ಬರುವ ಗೌತಮ ಕ್ಷೇತ್ರ ಈಗಿನ ಶ್ರೀರಂಗಪಟ್ಟಣ. ಮಲ್ಲಿಗನೂರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿದೆ. ಲೋಕಪವನಿ ನದಿ ನಾಗಮಂಗಲ ತಾಲೂಕಿನಲ್ಲಿ ಹುಟ್ಟಿ ಕರಿಘಟ್ಟದ ಹತ್ತಿರ ಕಾವೇರಿಯೊಡನೆ ಸಂಗಮವಾಗುವುದು. ಕೃತಿಯಲ್ಲಿ ಕಾಣುವ ದಟ್ಟವಾದ ಕಾಡಿನ ವರ್ಣನೆ ಮೇಲುಕೋಟೆಯ ಸುತ್ತಾ ಕಾಣುವ ನಾರಾಯಣದುರ್ಗದ ಕಾಡನ್ನು ಹೋಲುತ್ತದೆ. ಕರ್ತೃ ಅಲ್ಲಲ್ಲಿ ಭೈರವ ಹಾಗೂ ವೀರಭದ್ರರನ್ನು ಸ್ತುತಿಸಿರುವುದನ್ನು ನೋಡಿದರೆ ಈತ ಮಂಡ್ಯ ಜಿಲ್ಲೆಯ ಆದಿಚುಂಚನvರಿಯ ಭೈರವನ ಆರಾಧಕನಾಗಿದ್ದಿರಬೇಕೆಂದೂ ಊಹಿಸಿದ್ದಾರೆ. ಕೃತಿಯಲ್ಲಿ ಬಳಸಿರುವ ಭಾಷೆ, ಗಾದೆ ಹಾಗೂ ನುಡಿಗಟ್ಟುಗಳು ಬಯಲುಸೀಮೆಯ ಮಣ್ಣಿನಿಂದ ಮೂಡಿ ಬಂದAಥವು. ಈ ಪ್ರಸಂಗ ಯಾವ ಶಿಷ್ಟ ಕಾವ್ಯದಲ್ಲಿಯಾಗಲೀ ರಾಮಾಯಣ ಭಾರತ ಹಾಗೂ ಭಾಗವತಗಳಲ್ಲಿಯಾಗಲಿ ದೊರೆಯದ ಕರ್ತೃವಿನ ಸುತ್ತಮುತ್ತಲೆಲ್ಲೋ ಬಲ್ಲಾಳರಾಯನ ಕಾಲದಲ್ಲಿ ನಡೆದಂಥ ಘಟನೆಯೊಂದರ ಪ್ರತಿರೂಪ. ಡಾ. ಎಚ್.ಬಿ. ಯಶೋಧರ ಅವರು ಜಾನಪದಕ್ಕೆ ಸಂಬAಧಿಸಿದAತೆ ಎರಡು ಪ್ರಮುಖ ಕಾರ್ಯಗಳನ್ನು ಮಾಡಿದ್ದಾರೆ. ಒಂದು ಯಕ್ಷಗಾನ ಕರೀಭಂಟನ ಕಥೆಯನ್ನು ಸಂಪಾದಿಸಿದ್ದು ಮತ್ತೊಂದು ಸಂಶೋಧನೆ ಮಹಾಪ್ರಬಂಧ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ. ಕೆಂಪಣ್ಣಗೌಡ ವಿರಚಿತ ಯಕ್ಷಗಾನ ಕರಿಭಂಟನ ಕಥೆಯನ್ನು ಶಾಸ್ತಿçÃಯವಾಗಿ ಸಂಪಾದಿಕೊಟ್ಟು ಈ ಕೃತಿಗೆ ಬರೆದಿರುವ ೧೦೩ ಪುಟಗಳ ಪ್ರಸ್ತಾವನೆಯಲ್ಲ ಯಶೋಧರಾ ಅವರ ಪ್ರತಿಭೆ, ಪಾಂಡಿತ್ಯ, ವಿಮರ್ಶಾ ಪ್ರೌಢಿಮೆಗೆ, ಸಂಶೋಧನಾ ದೃಷ್ಟಿ, ತೌಲನಿಕ ಹಾಗೂ ವ್ಯಾಖ್ಯಾನದ ವ್ಯಾಪಕತೆ ಎಷ್ಟು ಆಳವಾದದ್ದು ಎಂಬುದು ವೇಧ್ಯವಾಗುತ್ತವೆ. ಇನ್ನೂ ಈ ಗ್ರಂಥ ನಿಜಕ್ಕೂ ಮೌಲಿಕವಾದದ್ದು ಪ್ರಥಮ ಬಾರಿಗೆ ಇಂತಹ ಒಂದು ಸಮಗ್ರ ರೂಪದ ತಲಸ್ಫರ್ಶಿ ಅಧ್ಯಯನ ಹೊರಬರುತ್ತಿರುವುದು ಸಂತಸದ ಹೆಮ್ಮೆಯ ಸಂಗತಿ ಎಂಬುದಾಗಿ ಮುನ್ನುಡಿಯಲ್ಲಿ ಬರೆದಿರುವ ಈ ನಿಟ್ಟಿನಲ್ಲೇ ಕೆಲಸ ಮಾಡಿರುವ ಡಾ. ಡಿ.ಕೆ.ರಾಜೇಂದ್ರರವರು ಮುಂದುವರೆದು ಇದಕ್ಕಾಗಿ ಅವರನ್ನು ಅಭಿನಂದಿಸಬೇಕೆAಬ ಮಹದಾಸೆ ನನ್ನದು. ಆದರೆ ಅದನ್ನು ಸ್ವೀಕರಿಸಲು ಅವರೇ ಇಲ್ಲವೆಂಬುದನ್ನು ನೆನೆದಾಗ ದು:ಖ ಉಮ್ಮಳಿಸುತ್ತದೆ. ಡಾ. ಯಶೋಧರಾ ದೈವಾಧೀನರಾದ ೪ ವರ್ಷಗಳ ನಂತರ ಈ ಗ್ರಂಥ ಪ್ರಕಟಗೊಳ್ಳಲು ಕಾರಣರು ಅವರ ಪತಿ ಡಾ.ಸಿ.ಎನ್.ಜಗದೀಶ್. ಇವರು ನಿಜವಾದ ಮಾನವೀಯ ಗುಣ ತುಂಬಿಕೊAಡ ಹೃದಯವಂತ ವ್ಯಕ್ತಿ. ಪತ್ನಿ ಆಸೆಯನ್ನು ಈ ಗ್ರಂಥ ಪ್ರಕಟಿಸಿ ಪೂರೈಸಿದ್ದಾರೆ. ಇದೊಂದು ಜನಪದ ಸಂಶೋಧನಾ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾದ ಕೃತಿ. ಜಾನಪದಕ್ಕೆ ಸಂಬAಧಿಸಿದ ಇನ್ನೂ ಅನೇಕ ವಿಚಾರ ವಿಶ್ಲೇಷಣೆಗಳಿವೆ. ಕೃತಿಗೆ ಡಾಕ್ಟರನ್ನು ಸಂಪರ್ಕಿಸಬಹುದು. ನಂ. ೯೪೮೦೩೯೨೧೩೭

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group