- Advertisement -
ಮೂಡಲಗಿ: ಕಲ್ಲೋಳಿ ಪಟ್ಟಣ ಶ್ರೀ ರಾಮಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ರಾಜಶ್ರೀ ನೀಲಕಂಠ ತೋಟಗಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ.ಎಚ್ ಡಿ (ಡಾಕ್ಟರೇಟ್) ಪದವಿ ನೀಡಿದೆ.
ಪ್ರೊ. ಸರಸ್ವತಿ ಎಸ್. ಭಗವತಿ ಅವರ ಮಾರ್ಗದರ್ಶನದಲ್ಲಿ ‘ಬೆಳಗಾವಿ ಪರಿಸರದ ಲಾವಣಿಗಳು: ಸಾಂಸ್ಕೃತಿಕ ಅಧ್ಯಯನ’ ವಿಷಯದ ಕುರಿತು ಹಸ್ತಪ್ರತಿಶಾಸ್ತ್ರ ವಿಭಾಗಕ್ಕೆ ಮಂಡಿಸಿದ ಸಂಶೋಧನಾ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಮಾನ್ಯ ಮಾಡಿದೆ.
ರಾಜಶ್ರೀ ತೋಟಗಿ ಅವರನ್ನು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.