- Advertisement -
ಬೆಂಗಳೂರಿನ ಚೈತನ್ಯ ಅಂತಾರಾಷ್ಟ್ರೀಯ ಆಕಾಡೆಮಿ ವತಿಯಿಂದ ಕೆಂಪೇಗೌಡನಗರದ ಉದಯಬಾನು ಕಲಾಸಂಘದಲ್ಲಿ ನಡೆದ ರಾಜ್ಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಲೇಖಕಿ ಹಾಗೂ ಸಮಾಜ ಸೇವಕಿ ಡಾ.ಸೌಜನ್ಯ ಶರತ್ ಚಂದ್ರ ಅವರಿಗೆ ಜನರಲ್ ಕಾರ್ಯಪ್ಪ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಹಿರಿಯ ಸಂಗೀತ ವಿದ್ವಾಂಸರಾದ ಡಾ .ವಸುಧಾ ಶ್ರೀನಿವಾಸ್ ಜನರಲ್ ಕಾರ್ಯಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರಿನ ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ,ಕೊಡಗಿನ ಸಾಹಿತಿ ಎಂ. ಡಿ.ಅಯ್ಯಪ್ಪ ,ಹಾಸನದ ಸಮಾಜ ಸೇವಕರಾದ ಡಾ.ಎಂ. ಸಿ.ರಾಜು ಹಾಗೂ ವಾಸ್ತು ತಜ್ಞರಾದ ಮುದ್ದಪ್ಪ ಆರಾಧ್ಯ ಮುಖ್ಯ ಅತಿಥಿಗಳಾಗಿದ್ದರು.