spot_img
spot_img

ನಿರಂತರ ನೃತ್ಯ ಶಾಲೆ ಮಕ್ಕಳಿಂದ ನೃತ್ಯ ಸಂಭ್ರಮ ೨೦೨೫

Must Read

spot_img
   ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ೨೦೧೨ರಲ್ಲಿ ಪ್ರಾರಂಭವಾಗಿ ಬಹಳಷ್ಟು ಕಲಾವಿದರಿಗೆ ಭರತನಾಟ್ಯ ಹಾಗೂ ಕಥಕ್ ನೃತ್ಯ ಶಿಕ್ಷಣವನ್ನ ನೀಡುತ್ತಾ ಬರುತ್ತಿರುವಂತಹ ಬೆಂಗಳೂರಿನ ನೃತ್ಯ ಸಂಸ್ಥೆಗಳಲ್ಲಿ ಒಂದು. ಜನವರಿ ೫  ರಂದು ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ನಿರಂತರ ನೃತ್ಯ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
 
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅನನ್ಯ ಜಿ.ಎಂ.ಎಲ್ ಕಲ್ಚರಲ್ ಅಕಾಡೆಮಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದಂತ ಡಾ. ರಾಘವೇಂದ್ರ, ಹೆಸರಾಂತ ನೃತ್ಯಗಾರ್ತಿಯಾದ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ವಿಜೇತೆ ಡಾ. ಸುಪರ್ಣ ವೆಂಕಟೇಶ್ ಹಾಗೂ ಅಂತಾರಾಷ್ಟ್ರೀಯ ನೃತ್ಯ ಉತ್ಸವಗಳ ಸಂಯೋಜಕರಾದ ಸಾಯಿ ವೆಂಕಟೇಶ್  ಭಾಗವಹಿಸಿದ್ದರು.
 
ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಿರಂತರ ನೃತ್ಯ ಶಾಲೆಯ ಸಂಸ್ಥಾಪಕರಾದ ಸೋಮಶೇಖರ್ ಚೂಡನಾಥ್ ಹಾಗೂ ಶ್ರೀಮತಿ ಸೌಮ್ಯ ಸೋಮಶೇಖರ್ ರವರ ಸಾರಥ್ಯದಲ್ಲಿ ತಯಾರಿಗೊಂಡ ವಿದ್ಯಾರ್ಥಿಗಳು ಭರತನಾಟ್ಯ ಹಾಗೂ ಕಥಕ್ ನೃತ್ಯ ಪ್ರದರ್ಶನವನ್ನು ನೀಡುವ ಮುಖಾಂತರ ಎಲ್ಲರ ಮನಸೂರೆಗೊಂಡರು.  
ನಂತರ ಕೃಷ್ಣನ ಕುರಿತಾದ ನೃತ್ಯ ನಾಟಕ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ ಕಲಾ ರಸಿಕರನ್ನು, ಕಲಾ ಪೋಷಕರನ್ನು ಮಂತ್ರಮುಗ್ಧಗೊಳಿಸಿತು. ಕಾರ್ಯಕ್ರಮದ ಕಡೆಯಲ್ಲಿ ಕೃಷ್ಣಂ ವಂದೇ ಜಗದ್ಗುರು ಎಂಬ ಕೂಗು ಮುಗಿಲು ಮುಟ್ಟಿತು.
ಕಲೆಗಳಲ್ಲಿ ಸರ್ವೋತ್ತಮ ಕಲೆ ಎಂದರೆ ನಾಟ್ಯಕಲೆ ಎಂದು ಭರತಮುನಿ ಅವರ ನಾಟ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಸೋಮಶೇಖರ್ ಹಾಗೂ ಶ್ರೀಮತಿ ಸೌಮ್ಯ ಸೋಮಶೇಖರ್ ಅವರು ನಿರಂತರವಾಗಿ ಅವರ ಕಲಾ ಸೇವೆಯೊಂದಿಗೆ ಯುವ ಪೀಳಿಗೆಯಲ್ಲಿ ನಮ್ಮ ಭಾರತದ ಸಂಸ್ಕತಿ ಕಲೆಯ ಪ್ರತೀಕವಾದ ಭರತನಾಟ್ಯ ಹಾಗೂ ಕಥಕ್ ನೃತ್ಯ ವಿದ್ಯಾರ್ಥಿಗಳನ್ನು ನಮ್ಮ ಸಮಾಜಕ್ಕೆ ನೀಡುತ್ತಿರುವಲ್ಲಿ ಯಶಸ್ವಿಯಾಗಿದ್ದಾರೆ. 
 
ನಾಟ್ಯ ಪ್ರವೀಣ ನಾಟ್ಯ ಮಯೂರಿ ಎಂಬ ಬಿರುದನ್ನ ಪಡೆದಿರುವ ಈ ದಂಪತಿಗಳು ಅತ್ಯಂತ ಸಣ್ಣ ವಯಸ್ಸಿನ ಕಲಾವಿದರಿಂದ ಹಿಡಿದು ಉದ್ಯೋಗದಲ್ಲಿರುವ ಮಹಿಳೆಯರು, ಗೃಹಿಣಿಯರು ಸೇರಿದಂತೆ ಅನೇಕ ವಿದ್ಯಾರ್ಥಿಗಳ ದೊಡ್ಡ ಬಳಗದೊಂದಿಗೆ ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾ ಪೋಷಕರನ್ನು ರಂಜಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಈ ದಂಪತಿಗಳು ಪ್ರದರ್ಶನ ನೀಡದ ವೇದಿಕೆ ಹಾಗೂ ಉತ್ಸವಗಳೇ ಇಲ್ಲ, ಮೈಸೂರು ದಸರಾ ಉತ್ಸವ ಹಂಪಿ ಉತ್ಸವ  ಸೇರಿದಂತೆ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾ ನಮ್ಮ  ನಾಡು ನುಡಿ ಸಂಸ್ಕöÈತಿಯ ಪ್ರತೀಕವಾದ ಭರತನಾಟ್ಯಂ ಹಾಗೂ ಕಥಕ್ ಪ್ರದರ್ಶನದೊಂದಿಗೆ ಜನ ಮಾನಸದಲ್ಲಿ ರಾರಾಜಿಸುತ್ತಿದ್ದಾರೆ.
 
೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ನೃತ್ಯ ಪ್ರದರ್ಶನದ ಈ ಕಾರ್ಯಕ್ರಮ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಒಂದು ಮಾಯಾ ಲೋಕವನ್ನು ಸೃಷ್ಟಿ ಮಾಡಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ದೂರದರ್ಶನದ ನಿರೂಪಕಿಯಾದ ಸವಿಪ್ರಕಾಶ್ ನಡೆಸಿಕೊಟ್ಟರು.
SOMASHEKAR CHUDANATH

Bharatanatyam and Kathak Dancer, Choreographer
Director: NIRANTHARA SCHOOL OF DANCE, Bangalore.
Phone: +91 9844531623  E-Mail: somu.dncr@gmail.com
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group