spot_img
spot_img

ಸಿಂದಗಿಯಲ್ಲಿ ಕಂಪ್ಯೂಟರ್ ಆಪರೇಟರ್ ದಿನ ಆಚರಣೆ

Must Read

spot_img
- Advertisement -

ಸಿಂದಗಿ – ೧೮-೧೯ ನೇ ಶತಮಾನದಲ್ಲಿ ವಿಜ್ಞಾನಿ, ಗಣಿತ ತಜ್ಞರು, ತತ್ವಶಾಸ್ತ್ರಜ್ಞರು ಆದ ಚಾರ್ಲ್ಸ್ ಬ್ಯಾಬೇಜ್ ರವರು  ಯುದ್ಧದ ಸಂದರ್ಭದಲ್ಲಿ ಯುದ್ಧ ಸಾಮಗ್ರಿ ಸಲಕರಣೆಗಳನ್ನು ಲೆಕ್ಕ ಪತ್ರ ಇಡಲು ತೊಂದರೆಯಾದ ಸಮಯದಲ್ಲಿ ಅವಿಸ್ಕರಿಸಿದ ತಂತ್ರವೇ ಗಣಕಯಂತ್ರ ಅದುವೇ ಇಂದು ಇಲಾಖೆಯಲ್ಲಿ ಬಳಸಲು ಅನುಕೂಲವಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ ತಿಳಿಸಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗಣಕ ಯಂತ್ರ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ರವರ ಜನ್ಮ ದಿನೋತ್ಸವವನ್ನು ಕರ್ನಾಟಕ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶದಂತೆ ಕಂಪ್ಯೂಟರ್ ಆಪರೇಟರ್ ದಿವಸ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣಕ ಯಂತ್ರ ನಿರ್ವಾಹಕರು ಎಲ್ಲರು ಸೇರಿ ಮೂರು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಇವರಿಗೆ ಸೇವಾ ಭದ್ರತೆ, ಕೆಲಸಕ್ಕೆ ತಕ್ಕಂತೆ ಸಂಬಳ ನೀಡುವಂತೆ ಬೇಡಿಕೆ ಸಲ್ಲಿಸಿದರು ಹಾಗೂ ಹೆಚ್ಚುವರಿ ಕೆಲಸ ಉಳಿದ ಸಿಬ್ಬಂದಿಗಳಿಗೆ ಹಂಚಿಕೆ ಮಾಡಿಕೊಡುವಂತೆ ಮನವಿ ಮಾಡಿದರು.

ದೇವರ ಹಿಪ್ಪರಗಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಭಾರತಿ ಚಲುವಯ್ಯ, ಆಲಮೇಲ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಪರಿದ ಪಟಾಣ ರವರು ಉಪಸ್ಥಿತರಿದ್ದರು.

- Advertisement -

ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಸಹಾಯಕ ನಿರ್ದೇಶಕರ ಪಂಚಾಯತ್ ರಾಜ್ ಎ ಎ ದುರ್ಗದ, ಶಿವಾನಂದ ಮೂಲಿಮನಿ, ಶಾಂತನಗೌಡ ನ್ಯಾಮಣ್ಣವರ, ಆಲಮೇಲ ಸಹಾಯಕ ನಿರ್ದೇಶಕ ಶೋಭಾ ಮುದುಗಲ, ಪಿಡಿಒ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ ದೊಡಮನಿ, ಕಂಪ್ಯೂಟರ್ ಆಪರೇಟರ್ ಸಂಘದ ಅಧ್ಯಕ್ಷರು ಗಳಾದ ಸಂಪತ್ ಕುಮಾರ ಜೈನ ಸಿಂದಗಿ, ಅಕ್ಬರ್  ಇನಾಮದಾರ ಆಲಮೇಲ, ರವಿ ಗೊಟೂರ ದೇವರ ಹಿಪ್ಪರಗಿ ಮತ್ತು ಮೂರು ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಯವರು, ಕಂಪ್ಯೂಟರ್ ಆಪರೇಟರ್ ಗಳು, ಬಿಲ್ ಕಲೆಕ್ಟರ್ ಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗಂಗಾವತಿಯಲ್ಲಿ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮ

ಗಂಗಾವತಿ - ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಖಿಲ ಕರ್ನಾಟಕ ನಾಲ್ಕನೆಯ ಕವಿ ಕಾವ್ಯ ಸಂಭ್ರಮದ ಕಾರ್ಯಕ್ರಮವನ್ನು ಇದೇ ಜನವರಿ 19 ಭಾನುವಾರದಂದು ಗಂಗಾವತಿಯ ಚೆನ್ನಬಸವೇಶ್ವರ...
- Advertisement -

More Articles Like This

- Advertisement -
close
error: Content is protected !!
Join WhatsApp Group