spot_img
spot_img

ಎಳ್ಳು ಬೆಲ್ಲ ಸ್ವಾದದ ಹನಿಗವನಗಳು

Must Read

spot_img
- Advertisement -

ಲ್ಲಿವೆ ಎಳ್ಳು-ಬೆಲ್ಲದ ಸ್ವಾದ-ಮೋದ ಅನಾವರಣದ ಸಪ್ತ ಹನಿಗವಿತೆಗಳು. ಸಂಕ್ರಾಂತಿಯ ನಾದ-ನಿನಾದ ರಿಂಗಣಿಸುವ ಗುಪ್ತ ಭಾವಪ್ರಣತೆಗಳು. ಇಲ್ಲಿ ಒಲವಿನ ಲಾಸ್ಯವಿದೆ. ತಿಳಿನಗೆಯ ಹಾಸ್ಯವಿದೆ. ಹಬ್ಬದ ಸವಿ ಸಂವೇದನೆಗಳ ಹೃದ್ಯ ಭಾಷ್ಯವಿದೆ. ಒಲುಮೆಯ ಅಕ್ಷರಬಂಧುಗಳಿಗೆ ವರ್ಷದ ಮೊದಲ ಹಬ್ಬಕ್ಕೆ ಮುಂಗಡವಾಗಿ Honey ಹನಿ ಕಾವ್ಯದ ಉಡುಗೊರೆಯಿದು…

ಎಳ್ಳು-ಬೆಲ್ಲದ ಹನಿಗಳು..

 ರಂಗೀಲ..!

- Advertisement -

ನನ್ನ ಕೈಗಿಡುವಾಗ ಎಳ್ಳುಬೆಲ್ಲ
ಅದೇಕೋ ಮೆಲ್ಲ.. ಮೆಲ್ಲ..
ಕೆಂಪಾಯಿತು ಅವಳ ಗಲ್ಲ.!

*******************

ಸಂಕ್ರಾಂತಿ ಸ್ಮರಣೆ.!

- Advertisement -

ಬಿಳಿ ಎಳ್ಳಿನ ಬಣ್ಣದ ಬೆಡಗಿ
ಸಿಹಿ ಬೆಲ್ಲದ ಮಾತಿನ ಹುಡುಗಿ
ಕಾಡುವಳು ಪ್ರತಿ ಸಂಕ್ರಾಂತಿಗು
ಪದೇ ಪದೇ ಚಿರ ನೆನಪಾಗಿ.!

**********************

ನಿತ್ಯ ಸಂಕ್ರಾಂತಿ.!

ಅವಳದು ಬೆಲ್ಲದ ನಿತ್ಯ ನಾವೀನ್ಯ
ನನ್ನದು ಎಳ್ಳಿನ ಚಿರ ಚೈತನ್ಯ
ಹಾಗಾಗಿ ಅನುದಿನವು ನಮಗೆ..
ಎಳ್ಳುಬೆಲ್ಲದ ಮಧುರ ಮಾಧುರ್ಯ
ಸಂಕ್ರಾಂತಿಯ ಅಮರ ಸೌಂದರ್ಯ.!

**********************

ಅಭಿಲಾಷೆ.!

ಅಕ್ಕಪಕ್ಕದೆಲ್ಲರಿಗು ಎಳ್ಳುಬೆಲ್ಲ ಕೊಟ್ಟು
“ಒಳ್ಳೆಯ ಮಾತಾಡೋಣ” ಎಂದಳು
ಅದೇಕೋ ನನಗೆ ಮಾತ್ರವೇ ಬೆಲ್ಲವಿಟ್ಟು
“ಒಲವಿನ ಮಾತಾಡೋಣ” ಅಂದಳು.!

**********************

ಸಂಕ್ರಾಂತಿ ಸ್ಪೆಶಲ್ಲು.!

ಸಂಕ್ರಾಂತಿಯಂದು ನನ್ನವಳ ಮಾತು
ಅಕ್ಷರಶಃ ಬೆಲ್ಲದಚ್ಚು..!
ಮತ್ತೆ ಇನ್ನುಳಿದ ದಿನ.. ಊಹೂಂ..
ಕೇಳಬೇಡಿ ಕಲಗಚ್ಚು..!

********************

ಸಮಾಗಮ.!

ಆದಾಗ ಬಿಳಿಬೆಲ್ಲಕೆ ಬಿಳಿಯೆಳ್ಳಿನ ಸಂಗಮ
ನೋಡಲು ಕಂಗಳಿಗೂ ಸವಿ ಸಂಭ್ರಮ..
ಬಹಳಷ್ಟು ಬಾರಿ ಬಿಳಿಬೆಲ್ಲ ಕರಿಎಳ್ಳು ಬೆರೆಸಿ
ಭಗವಂತ ಮಾಡಿಬಿಡುತ್ತಾನೆ ಸಂಗ್ರಾಮ.!

********************

ಹುಚ್ಚುಕವಿ.!

ಸಂಕ್ರಾಂತಿದಿನ ಯುವಕವಿಯೆಂದ..
“ಅವಳ ನಸುನಗು ಬೆಲ್ಲದಚ್ಚು
ನುಡಿ ಎಳ್ಳಿಗಿಂತ ಅಚ್ಚುಮೆಚ್ಚು”
ಅರ್ಧಕ್ಕೆ ನಿಲ್ಲಿಸುತ ಕೇಳುಗರೆಂದರು..
“ಸಾಕು ತಮ್ಮಾ ಬಾಯಿಮುಚ್ಚು
ಇದು ಪಡ್ಡೆವಯಸಿನ ಹುಚ್ಚು.”!

ಎ.ಎನ್.ರಮೇಶ್. ಗುಬ್ಬಿ.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group