spot_img
spot_img

ಚಾಲಕರು ರಸ್ತೆ ಸುರಕ್ಷತೆಯ ಬಗ್ಗೆ ತಿಳಿದಿರಬೇಕು – ಪಿಎಸ್ಐ ಮುಶಾಪೀರ

Must Read

spot_img
- Advertisement -

ಸಿಂದಗಿ; ವಾಹನ ಚಾಲಕರು ಮತ್ತು ಪಾದಾಚಾರಿಗಳು ರಸ್ತೆ ಸುರಕ್ಷತೆ ಬಗ್ಗೆ ಉತ್ತಮ ಶಿಸ್ತು ಮತ್ತು ಜ್ಞಾನ ಬೆಳೆಸಿಕೊಳ್ಳಬೇಕು ಶಿಸ್ತಿನ ಸಂಚಾರ, ಸುಗಮ ಸಂಚಾರಕ್ಕೆ ಹಾದಿ ಎಂಬುದನ್ನು ತಿಳಿದಿರಬೇಕು ಇಲ್ಲವಾದಲ್ಲಿ ಅಪಾಯಕಾರಿ ಎಂದು ಪಿಎಸ್‌ಐ ಆರೀಫ ಮುಶಾಪೀರ ಹೇಳಿದರು.

ಪಟ್ಟಣದ ಬಸ್ ಡಿಪೋದ ಅವರಣದಲ್ಲಿ ಹಮ್ಮಿಕೊಂಡ ರಸ್ತೆ ಸುರಕ್ಷತಾ ಸಪ್ತಾಹ ಕಾರ‍್ಯಕ್ರಮದಲ್ಲಿ ಮಾತನಾಡಿ, ರಸ್ತೆ ಅಪಘಾತಗಳ ಸಂಖ್ಯೆ ದಿನೆ ದಿನೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರಲ್ಲಿ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲು ಇಡೀ ದೇಶಾದ್ಯಂತ ಒಂದು ವಾರದ ಕಾಲ ರಸ್ತೆ ಸುರಕ್ಷತಾ ಸಪ್ತಾಹ ನಡೆಯಲಿದೆ ಕಾರಣ ಶಾಲಾ ಕಾಲೇಜು ವಿದ್ಯರ‍್ಥಿಗಳು ಹಾಗೂ ವಾಹನ ಚಾಲಕರಿಂದ ವಿವಿಧ ಜಾಗೃತಿ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ರಸ್ತೆ ಅಪಘಾತ, ಸಾವು ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲಿ ಶಿಸ್ತು ಮೂಡಿಸುವುದು ಇದರ ಉದ್ದೇಶವಾಗಿದೆ ನೆಮದಿಯ ಬಾಳಿಗೆ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಎಂಬುದು ಈ ಸಪ್ತಾಹದ ಪ್ರಮುಖ ವಿಷಯ ಇದರಲ್ಲಿ ಪ್ರಮುಖವಾಗಿ ರಸ್ತೆ ಅಪಘಾತಗಳು, ಸರ‍್ವಜನಿಕರಿಗೆ ಸಂಚಾರ ಸುರಕ್ಷತಾ ಸೂಚನೆಗಳು, ರಸ್ತೆ ಅಪಘಾತ ನಿಯಂತ್ರಣ, ರಸ್ತೆ ಸುರಕ್ಷೆ ಮತ್ತು ಜೀವನ ರಕ್ಷೆ ಎಂದರು.

- Advertisement -

ಘಟಕ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ ಮಾತನಾಡಿ, ವಾಹನ ಚಾಲಕರು ಏನು ಮಾಡಬೇಕು, ಮಕ್ಕಳು ಏನು ಮಾಡಬೇಕು, ಪಾದಚಾರಿ ಹೇಗೆ ಸಂಚರಿಸಬೇಕು ಸಂಚಾರಿ ಗೆರೆಗಳು, ಸಂಚಾರದ ಸಂಕೇತಗಳು, ಸುಗಮ ಸಂಚಾರಕ್ಕೆ ಸುಲಭ ಉಪಾಯಗಳು, ಕಡ್ಡಾಯವಾಗಿ ಪಾಲಿಸಬೇಕಾದ ಚಿನ್ಹೆಗಳು, ಕಾಲು ನಡಿಗೆಯ ಸುರಕ್ಷಿತ ದಾರಿ, ಸಿಗ್ನಲ್‌ನಲ್ಲಿ ಆಗುವ ಅಪಘಾತ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಬಗ್ಗೆ ಚಾಲಕರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂರ‍್ಭದಲ್ಲಿ ಮಹಾದೇವ ಹೂವಿನಹಳ್ಳಿ, ಸಂತೋಷ ಹತ್ತರಕಿ, ಎಂ.ಎಸ್.ಡೋರನಳ್ಳಿ, ಅರವಿಂದ ತರಡಿ ಸೇರಿದಂತೆ ಅನೇಕರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group