ದಾಖಲೆಯ 30000 ಪ್ರತಿ ವಿತರಣೆ
ಬೆಂಗಳೂರು ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ಸುವರ್ಣ ಸಂಭ್ರಮಾಚರಣೆ ಸಮಾರಂಭ ಅಂಗವಾಗಿ ನಡೆದ ಗಾಯತ್ರಿ ಮಹಾಯಾಗದ ಸ್ಮರಣಿಕೆಯಾಗಿ ಸಂಸ್ಕೃತಿ ಚಿಂತಕ, ಅಂಕಣಕಾರ,ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ ಗಾಯತ್ರಿ ಸಾರಸಂಪತ್ತು ಕೃತಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೋಕಾರ್ಪಣೆಗೊಳಿಸಿದರು .
ಕಾರ್ಯಕ್ರಮವನ್ನು ಶೃಂಗೇರಿ ಜಗದ್ಗುರು ಶ್ರೀ ವಿದುಶೇಖರ ಭಾರತಿ ಮಹಾ ಸ್ವಾಮಿಗಳು ಉದ್ಘಾಟಿಸಿದರು . ಸ್ವರ್ಣವಲ್ಲಿ ಶ್ರೀಗಳೆ ಮೊದಲಾದ ಅನೇಕ ಯತಿವರೇಣ್ಯರು ದಿವ್ಯ ಸಾನಿಧ್ಯ ವಹಿಸಿದ್ದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶಾಸಕ ಸಿ ಕೆ ರಾಮಮೂರ್ತಿ ರವಿ ಸುಬ್ರಮಣ್ಯ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಸೇರಿದಂತೆ ಗಣ್ಯಮಾನ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐತಿಹಾಸಿಕ ಈ ಸಮಾರಂಭದಲ್ಲಿ 30000 ಪ್ರತಿನಿಧಿಗಳಿಗೆ ಗಾಯತ್ರಿ ಮಂತ್ರದ ಅರ್ಥ ವಿವರಣೆಯುಳ್ಳ ಕಿರು ಹೊತ್ತಗೆಯನ್ನು ವಿತರಿಸಲಾಯಿತು ಎಂದು ಮಹಾಸಭಾಧ್ಯಕ್ಷರಾದ ಅಶೋಕ ಹಾರನಹಳ್ಳಿ ತಿಳಿಸಿರುತ್ತಾರೆ.
ವಿಶ್ವಾಮಿತ್ರ ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮತೇಜವು ಹರಡಲಿ ಎಂಬ ಸದಾಶಿಯದೊಂದಿಗೆ ವಿಶ್ವದೆಲ್ಲೆಡೆ ಬೆಳಕಪಸರಿಸುವ ಒಳಿತ ಬಯಸುವ ವಿಪ್ರ ಬಂಧುಗಳ ಮಹಾಸಂಗಮ ಕಾರ್ಯಕ್ರಮದಲ್ಲಿ ಸಂಸ್ಕಾರ ಸಂಘಟನೆ ಸ್ವಾವಲಂಬನೆ ಎಂಬ ಧ್ಯೇಯದಡಿ ವೇದ ಧರ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳ ಸಂರಕ್ಷಣೆ ವಿವಿಧತೆಯಲ್ಲಿ ಏಕತೆಯ ಅನುಪಾಲನೇ ಮತ್ತು ಸದೃಢ ರಾಷ್ಟ್ರ ನಿರ್ಮಾಣವೇ ನಮ್ಮೆಲ್ಲರ ಗುರಿಯಾಗಲಿ ಎಂಬ ಉದ್ದೇಶದೊಂದಿಗೆ ಈ ಕೃತಿ ಲೋಕಾರ್ಪಣೆಗೊಂಡಿದೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.
ಈ ಕೃತಿಯ ಪಿಡಿಎಫ್ ಬೇಕೆಂದವರು ಸಂಪರ್ಕಿಸಬಹುದು ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಕಾರ್ಯನಿರ್ವಾಹಕರು ಪ್ರಣವ ಮೀಡಿಯಾ ಹೌಸ್ ಪ್ರಕಾಶನ,ಬೆಂಗಳೂರು
9739369621