ಬೆಳಗಾವಿ – ರಸ್ತೆ ನಿಯಮಗಳನ್ನು ನಾವು ಪಾಲಿಸಬೇಕು. ಸ್ಪೀಡ್ ಗಾಡಿ ಓಡಿಸಬಾರದು. ಕಡ್ಡಾಯವಾಗಿ ಪಾಲಿಸಿರಿ ಟೂ ವೀಲರ್ ನಲ್ಲಿ ಹೆಲ್ಮೆಟ್ ಕಡ್ಡಾಯವಿರಲಿ ಕಾಗದಪತ್ರ ಒಂದು ಸೆಟ್ ಇಟ್ಟುಕೊಳ್ಳಬೇಕು.ಯಾವುದೇ ಕಾರಣಕ್ಕೂ ಸ್ಪೀಡ್ ಹೋಗಬಾರದು. ಮದ್ಯಪಾನ ಮಾಡಬಾರದು. ಸಮಸ್ಯೆಗಳು ಬಂದಾಗ ಒಂದು ೧೧೨ ನಂಬರ್ ಕ್ಕೆ ಕರೆ ಮಾಡಿ.ವಾಹನಗಳ ತಪಾಸಣೆ ಮಾಡಿಸುತ್ತಾ ಇರಬೇಕು. ಹದಿಹರೆಯದ ಯುವಕ ಯುವತಿಯರು ಅತಿ ಸ್ಪೀಡ್ ಗಾಡಿ ಚಾಲನೆ ಮಾಡಬಾರದು. ಅವಸರವೇ ಅಪಘಾತಕ್ಕೆ ಕಾರಣ. ಸೀಟ್ ಬೆಲ್ಟ್ ಹಾಕಿದರೆ ಏರ್ ಬ್ಯಾಗ ಓಪನ್ ಆಗಿ, ಜೀವ ರಕ್ಷಿಸುತ್ತದೆ.ಮೆದುಳಿಗೆ ಪೆಟ್ಟು ತಾಗಿದರೆ ರಕ್ತ ಹೆಪ್ಪುಗಟ್ಟುತ್ತದೆ ಕಾರಣ ಹೆಲ್ಮೆಟ್ ಕಡ್ಡಾಯವಾಗಿ ಹಾಕಬೇಕು. ಎಂದು ಸಾಹಿತಿ ಎಪ. ವಾಯ್. ತಳವಾರ. ಅವರು ತಿಳಿಸಿದರು.
ವಚನ ಪಿತಾಮಹ ಡಾ ಫ.ಗು.ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ೧೯.೦೧. ೨೦೨೫.ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ಹಾಗೂ ಉಪನ್ಯಾಸದಲ್ಲಿ ಸಂಚಾರಿ ನಿಯಮಗಳ ಪಾಲನೆ ಮತ್ತು ಸಮಾಜದಲ್ಲಿ ಆರಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಆರಂಭದಲ್ಲಿ ಶರಣೆ ಅಕ್ಕಮಹಾದೇವಿ ಅರಳಿಯವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು ಬಿ.ಪಿ.ಜೇವಣಿ, ಆನಂದ ಕರ್ಕಿ, ಜಯಶ್ರೀ ಚಾವಲಗಿ,ಮಂಗಳಾ ಕಾಕತಿಕರ, ಶ್ರೀದೇವಿ ನರಗುಂದ,ಬಸವರಾಜ ಬಿಜ್ಜರಗಿ,ವಿ.ಕೆ.ಪಾಟೀಲ, ಸುರೇಶ ನರಗುಂದ, ವಚನ ಗಾಯನ ಮಾಡಿದರು.
ಉಪನ್ಯಾಸಕರ ಪರಿಚಯ ಮಹಾಂತೇಶ ಮೆಣಸಿನಕಾಯಿ.ಮಾಡಿಕೊಟ್ಟರು. ಸಂಗಮೇಶ ಅರಳಿ ನಿರೂಪಿಸಿದರು. ಬಸವರಾಜ ಬಿಜ್ಜರಗಿ,ಸೂಮಶೇಖರ ಕತ್ತಿ, ಸದಾಶಿವ ದೇವರಮನಿ,ಸುನೀಲ ಸಾಣಿಕೂಪ್ಪ, ಸಿದ್ದಪ್ಪ ಸಾರಾಪುರಿ, ಜ್ಯೋತಿ ಬದಾಮಿ,ಲಲಿತಾ ವಾಲಿ ಇಟಗಿ,ವಿದ್ಯಾ ಕಕಿ೯,ಶೋಭಾ ದೇಯಣವರ, ಚೌಗಲೆ. ಶಿವಾನಂದ ಲಾಳಸಂಗಿ,ಸಿದ್ದಲಿ೦ಗಪ್ಪ ರೇವಣ್ಣವರ, ಕಮಲಾ ಗಣಾಚಾರಿ, ಅನೀಲ ರಘಶೆಟ್ಟಿ, ಶೇಖರ ವಾಲಿ ಇಟಗಿ, ಸಿದ್ದಪ್ಪ ಸಾರಾಪೂರಿ,ಶರಣ ಶರಣೆಯರು ಉಪಸ್ಥಿತರಿದ್ದರು