ಬೆಳಗಾವಿ :–ಬೆಳಗಾವಿಯ ವಾಯವ್ಯರಸ್ತೆ ಸಾರಿಗೆ ಸಂಸ್ಥೆಯ (ಕೆ ಎಸ್ ಆರ್ ಟಿ ಸಿ) ಎರಡನೇ ಡಿಪೋ ದಲ್ಲಿ ಇಂದು ಮುಂಜಾನೆ ಬೆಸ್ತ ಕೋಳಿ ಸಮುದಾಯದ ನೌಕರರ ಸಂಘಟನೆ ವತಿಯಿಂದ ನಿಜದ ನಗಾರಿ, ವೀರ ಗಣಾಚಾರಿ ನಿಜಶರಣ ಅಂಬಿಗರ ಚೌಡಯ್ಯನವರ 905 ನೆಯ ಜಯಂತಿ ಯನ್ನು ಶ್ರದ್ದೆ ಭಕ್ತಿ ನಿಷ್ಠೆ ಯಿಂದ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿದ್ದ ಜಿಲ್ಲಾ ಕೋಳಿ ಬೆಸ್ತ ಸಮುದಾಯ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ ರವರು ನಿಜಶರಣ ಅಂಬಿಗರ ಚೌಡಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಜಯಂತಿ ಆಚರಣೆಯನ್ನು ಮಾಡುತ್ತಿರುವದಕ್ಕೆ ಸಂತೋಷ ವ್ಯಕ್ತ ಪಡಿಸಿ ಸಂಘಟಕರಿಗೆ ಅಭಿನಂದಿಸಿದರು, ಜೊತೆಗೆ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದರು
ಡಿಪೋ ಮ್ಯಾನೇಜರ ರಾದ ಅನಂತ ಶಿರಗುಪ್ಪಿಕರ ರವರು ಅಧ್ಯಕ್ಷತೆ ವಹಿಸಿ ಅಂಬಿಗರ ಚೌಡಯ್ಯ ನವರ ವಿಚಾರಧಾರೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು
ಇಲಾಖೆಯ ಸಿಬ್ಬಂದಿಗಳಾದ ನಿಂಗಪ್ಪ ಚವಲಗಿ ಹಾಗೂ ಸಂಜಯ ನಾಗನೂರ ರವರು ಅಂಬಿಗರ ಚೌಡಯ್ಯನವರ ಜೀವನ ಸಾಧನೆ ಹಾಗೂ ಅವರ ವಚನಗಳಲ್ಲಿಯ ಆದರ್ಶ, ತತ್ವ, ಬದುಕಿಗೆ ಮಾರ್ಗದರ್ಶನ ನೀಡುವ ಅಂಶಗಳ ಕುರಿತು ಮಾತನಾಡಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಕೋಳಿ ಬೆಸ್ತ್ ಸಮುದಾಯದ ನೌಕರರ ಸಂಘದ ಉಪಾಧ್ಯಕ್ಷರಾದ ಸಂಜೀವ ಮುತ್ತೆಪ್ಪಗೋಳ, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಕಬ್ಬಲಿಗೇರ, ಕೋಶಾಧಕ್ಷರಾದ ಗಣಪತಿ ಬಾರ್ಕಿ, ವಿಠ್ಠಲ ಸುಣಗಾರ,ವಾಯವ್ಯರಸ್ತೆ ಸಾರಿಗೆ ಸಂಸ್ಥೆಯ ಎರಡನೇ ಘಟಕದ ಸಮುದಾಯದ ನೌಕರರಾದನಾಗಪ್ಪ ಚಂದ್ರಶೇಖರ,ಬಾಲಚಂದ್ರ ತುಕ್ಕೋಜಿ ಮಂಜುನಾಥ ಹೆಬಲಿ, ಎಸ್ ಎಚ್ ಪಾಟೀಲ, ರವಿ ಬಸರಿಕಟ್ಟಿ, ಸಿದ್ದು ನಾಯ್ಕೋಡಿ, ಎಸ್ ಕೆ ಬರಮಣ್ಣವರ, ರವಿ ಪಡೆಣ್ಣವರ, ಆನಂದ ಈಟಿ,ರೇವಣಸಿದ್ಧಪ್ಪ ಕರ್ನಲ್, ಎಸ್ ಎಸ್ ಸತ್ಯಾಗೋಳ, ಎಸ್ ಬಿ ಹೆಡಗೆ, ಕೆ ಎನ್ ತಳವಾರರವರು ಸೇರಿದಂತೆ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು