ಸವದತ್ತಿ ಪಟ್ಟಣದ ಗುರು ಭವನದಲ್ಲಿ ಮುನವಳ್ಳಿ ಹಾಗೂ ಸವದತ್ತಿ ವಲಯದ ಅಕ್ಷರ ದಾಸೋಹ ಅಡುಗೆದಾರರಿಗೆ ಒಂದು ದಿನದ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಶೃತಿ ವಿಶ್ವಾಸ ವೈದ್ಯರವರು ಉದ್ಘಾಟಿಸಿ “ತಾವೆಲ್ಲರೂ ತಾಯಿ ಸ್ವರೂಪದ ಮಾತೆಯರು.ಮಕ್ಕಳಿಗೆ ದಿನನಿತ್ಯದ ಆಹಾರದಲ್ಲಿ ಇಲಾಖೆಯ ನಿಯಮಾನುಸಾರ ಅಡುಗೆ ಮಾಡಿ ಉಣಬಡಿಸುವ ಮೂಲಕ ಮಕ್ಕಳ ಕಾಳಜಿ ಕೂಡ ಮಾಡುತ್ತಿರುವ ನಿಮ್ಮ ಸೇವೆ ಅಭಿನಂದನಾರ್ಹ. ನಿಮಗೆ ಇನ್ನೂ ವೇತನ ಹೆಚ್ಚಳಕ್ಕೆ ನಾನು ಕೂಡ ಪ್ರಯತ್ನ ಮಾಡುವೆ ನೀವೆಲ್ಲರೂ ಅನ್ನಪೂರ್ಣೆಯರು. ತಮ್ಮ ಸೇವೆ ಸ್ಮರಣೀಯ. ನಾನು ಕೂಡ ನನ್ನ ಮಗಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಿರುವ ದಿನಗಳು ಇಂದಿಗೂ ನೆನಪಿವೆ.”ಎಂದು ಉದ್ಘಾಟನಾ ಪರ ಮಾತುಗಳನ್ನು ಶೃತಿ ವಿಶ್ವಾಸ ವೈದ್ಯ ನುಡಿದರು.
ತಾಲೂಕು ವೈದ್ಯಾಧಿಕಾರಿಗಳಾದ ಶ್ರೀಪಾದ ಸಬನೀಸ ಮಾತನಾಡಿ, ನಾವು ಇಂದು ಆರೋಗ್ಯ ಇಲಾಖೆಯ ಮೂಲಕ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿದ್ದು ತಮ್ಮ ಆರೋಗ್ಯ ಕೂಡ ಮಹತ್ವದ್ದು ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಚ್ ಪಿ ಗ್ಯಾಸ್ ಎಜೆನ್ಸಿಯ ಶಿವಪುತ್ರ ಮುಂಜನ್ನವರ, ಆರೋಗ್ಯ ಶಿಕ್ಷಕ ಎಸ್ ಡಿ ಗಾಂಜಿ, ಶಿಕ್ಷಣ ಸಂಯೋಜಕ ಸುಧೀರ್ ವಾಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಸುನೀತಾ ಪಾಟೀಲ, ತರಬೇತಿ ಸಂಪನ್ಮೂಲ ವ್ಯಕ್ತಿ ಪಿ ಎಸ್ ಶಿಂಧೆ, ನೌಕರರ ಸಂಘದ ಚುನಾಯಿತ ಪ್ರತಿನಿಧಿಗಳಾದ ಎನ್ ಎನ್ ಕಬ್ಬೂರ, ಮಹಾಂತೇಶ ಬ್ಯಾಹಟ್ಟಿ, ಗಿರೀಶ ಮುನವಳ್ಳಿ, ಪ್ರಶಾಂತ ಹಂಪನ್ನವರ, ಪ್ರಕಾಶ ಹೆಮ್ಮರಡಿ, ರಮೇಶ ಅಬ್ಬಾರ, ಪ್ರೇಮಾ ಹಲಕಿ.ಕರಿಗಾರ, ಎಸ್ ವ್ಹಿ. ಜೋಶಿ, ಗಣಪತಿ ಬಡಿಗೇರ, ಎಂ.ಎಲ್.ಕುಂಕುಮಗಾರ, ಕೆ.ಎಸ್.ಸಿಂದೋಗಿ, ಆರ್ ಪಿ ನಲವಡೆ, ಎಸ್.ಆರ್ ಲಮಾಣಿ, ವ್ಹಿ. ಎಫ್. ಕಂಪ್ಲಿ, ಬಿ.ಎನ್.ದೊಡ್ಡಕಲ್ಲನ್ನವರ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಮಾತನಾಡಿ “ನಮ್ಮ ತಾಲೂಕಿನ ಎಲ್ಲಾ ಅಡುಗೆದಾರರು ಉತ್ತಮ ಗುಣಮಟ್ಟದ ಬಿಸಿಯೂಟ ತಯಾರಿಸುತ್ತಿದ್ದು.ನಾನು ಕೂಡ ಸಂದರ್ಶನ ಸಮಯದಲ್ಲಿ ಬಿಸಿಯೂಟ ಪರೀಕ್ಷೆ ಮಾಡುತ್ತಿರುವೆ. ತಮ್ಮ ಈ ಸೇವೆ ನಿರಂತರವಾಗಿ ಸಾಗಲಿ. ಇಂದು ತರಬೇತಿ ಯಲ್ಲಿ ಗ್ಯಾಸ್ ಬಳಕೆ ಮಹತ್ವ ತಿಳಿಯುವ ಜೊತೆಗೆ ನಿಮ್ಮ ಆರೋಗ್ಯ ಕೂಡ ಮಹತ್ವದ್ದು ಈ ದಿಸೆಯಲ್ಲಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಿರಿ ಎಂದು ಕರೆ ನೀಡಿದರು.
ಬಿಸಿಯೂಟ ಯೋಜನೆ ಜಾರಿಗೆ ಬಂದ ಕುರಿತು ಕಾಲ ಕಾಲಕ್ಕೆ ಬಿಸಿಯೂಟ ಯೋಜನೆ ಯಲ್ಲಿ ಇಲಾಖೆಯು ಜಾರಿಗೆ ತಂದ ಬದಲಾವಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ರಾದ ಅಡುಗೆ ಸಿಬ್ಬಂದಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಬೇಟಿ ಪಡಾವೋ ಭೇಟಿ ಬಚಾವೋ ಎಂಬ ಮಹತ್ವದ್ದ ಪ್ರತಿಜ್ಞಾವಿಧಿ ಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಸುನೀತಾ ಪಾಟೀಲ ಬೋಧಿಸಿದರು.
ಶಿಕ್ಷಕ ಸುನೀಲ್ ಏಗನಗೌಡರ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ವಾಗೇರಿ ವಂದಿಸಿದರು