spot_img
spot_img

ಶಾಂತಿಯ ಬದುಕಿಗೆ ಅಧ್ಯಾತ್ಮವೊಂದೇ ಆಶಾಕಿರಣ – ರಂಭಾಪುರಿ ಶ್ರೀ –

Must Read

spot_img
- Advertisement -

ಸಿಂದಗಿ.; ಧರ್ಮಕ್ಕಿಂತ ಯಾರು ದೊಡ್ಡವರಿಲ್ಲ. ಜಾತಿಗೆ ಕೊಡುವಷ್ಟು ಪ್ರಾಧಾನ್ಯತೆ ಧರ್ಮ ಸಂಸ್ಕೃತಿಗೆ ಕೊಡಲಾರದಂತೆ ಸಮಾಜದಲ್ಲಿ ಅರಾಜಕತೆ ತಾಂಡವಾಡುತ್ತಿದೆ ಇವತ್ತಿನ ಸಂಘರ್ಷಮಯ ಜಗತ್ತಿನಲ್ಲಿ ಅವರವರ ಧರ್ಮ ಶ್ರೇಷ್ಠವಾದರೂ ಕೂಡಾ ಇನ್ನೊಂದು ಧರ್ಮಕ್ಕೆ ಅವಹೇಳನ ಮಾಡಬಾರದು. ಮಾನವ ಧರ್ಮ ಬೆಳೆದರೆ ಮಾತ್ರ ಎಲ್ಲರೂ ಸೌಹಾರ್ದತೆಯಿಂದ ಬದುಕಲು ಸಾಧ್ಯ. ಭೌತಿಕ ಸಿರಿ ಸಂಪತ್ತಿನಿಂದ ಮನುಷ್ಯನಿಗೆ ಶಾಂತಿ ಸಿಗದು. ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕು ಬಲಗೊಳ್ಳಲು ಸಾಧ್ಯವಿದೆ. ಶಾಂತಿ ಸುಖದ ಬದುಕಿಗೆ ಅಧ್ಯಾತ್ಮವೊಂದೇ ಆಶಾಕಿರಣವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ನಗರದ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೯ನೇ ಜಾತ್ರಾ ಮಹೋತ್ಸವ ಹಾಗೂ ರಾಜಯೋಗಿ ಡಾ.ಚಂದ್ರಶೇಖರ ಶ್ರೀಗಳವರ ೫೪ನೇ ವರುಷದ ಅನುಷ್ಠಾನದ ಮಂಗಲ ನಿಮಿತ್ತವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತ, ಧನ ಕನಕಾದಿ ವಸ್ತುಗಳು ಬಹಿರಂಗದ ಸಿರಿ. ಸತ್ಯ ಶಾಂತಿಗಳು ಆಂತರಿಕ ಸಿರಿ. ಹೊರಗಿನ ಸಿರಿಯನ್ನು ಕಳ್ಳರು ಕದಿಯಬಹುದು. ಆದರೆ ಅಂತರಂಗದ ಗುಣ ಸಿರಿಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ನಡೆಯುವ ದಾರಿಯಲ್ಲಿ ಐನೂರು ರೂ.ನೋಟು ಬಿದ್ದಿದೆ. ಅದು ನನ್ನದು ನಿನ್ನದು ಎನ್ನದೇ ಸುಮ್ಮನೇ ನಡೆದರೆ ನಾವು ಸುರಕ್ಷಿತರು. ಹಾಗೆಯೇ ಸಂಸಾರದಲ್ಲಿ ಮನೆ ಮಠ, ಧನ ಕನಕಾದಿ ಮೊದಲಾದವು ನನ್ನದು ತನ್ನದು ಎನ್ನದೇ ಭಗವಂತ ಕರುಣಿಸಿದ ಕೊಡುಗೆ ಎಂದು ನಡೆದರೆ ಸುಖ ಶಾಂತಿ ಬದುಕಿಗೆ ಕಾರಣವಾಗುತ್ತದೆ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮ ಅಂತರಂಗ ಬಹಿರಂಗ ಶುದ್ಧಿಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಬದುಕಿನ ಪರಮ ರಹಸ್ಯವನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಆದಿಶೇಷ ಹಿರೇಮಠದ ಡಾ.ಚಂದ್ರಶೇಖರ ಶ್ರೀಗಳು ೫೪ನೇ ವರ್ಷದ ಶಿವಾನುಷ್ಠಾನವನ್ನು ಮಂಗಲಗೊಳಿಸಿ ೨೯ನೇ ವರ್ಷದ ಜಾತ್ರಾ ಮಹೋತ್ಸವ ಧರ್ಮ ಸಮಾರಂಭ ಹಮ್ಮಿಕೊಂಡಿರುವುದು ಅವರ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಶ್ರೀಮತಿ ನಾಗರತ್ನಮ್ಮ ಮನಗೂಳಿ ಮಾತನಾಡಿ, ಅಶಾಂತಿಯ ಬಾಳಿಗೆ ಧರ್ಮದ ಆದರ್ಶ ಚಿಂತನಗಳು ದಾರಿದೀಪ. ಸುಖವನ್ನೇ ಬಯಸುವ ಮನುಷ್ಯನಿಗೆ ಅದಕ್ಕೆ ಕಾರಣವಾಗಿರುವ ಧರ್ಮ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಮನುಷ್ಯನ ಜೀವನ ಅಶಾಂತಿ ಅತೃಪ್ತಿಯ ಗೂಡಾಗಿದೆ. ಸತ್ಯ ಧರ್ಮದ ಹಾದಿಯಲ್ಲಿ ನಡೆದಾಗ ಬಾಳು ಸಾರ್ಥಕಗೊಳ್ಳುತ್ತದೆ. ಪ್ರತಿ ವರುಷ ಆದಿಶೇಷ ಹಿರೇಮಠದ ಚಂದ್ರಶೇಖರ ಶ್ರೀಗಳು ಅನುಷ್ಠಾನ ಕೈಕೊಂಡು ಜಾತ್ರಾ ಮಹೋತ್ಸವ ಮಾಡುತ್ತಿರುವುದು ಭಕ್ತರ ಭಾಗ್ಯವೇ ಆಗಿದೆ. ಶ್ರೀಗಳ ಆಶೀರ್ವಾಧದಂತೆ ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದು ಶ್ರೀಮಠದ ಜೀರ್ಣೋದ್ದಾರಕ್ಕೆ ಸರಕಾರದಿಂದ ಅನುದಾನ ತಂದು ಅಭಿವೃದ್ಧಿಗೆ ಮುಂದಾಗುತ್ತಾರೆ ಎಂದು ಅಭಿಮತ ವ್ಯಕ್ತಪಡಿಸಿದರು.

- Advertisement -

ನೇತೃತ್ವ ವಹಿಸಿದ ಆದಿಶೇಷ ಹಿರೇಮಠದ ವೀರರಾಜೇಂದ್ರ ಸ್ವಾಮಿಗಳು ಮಾತನಾಡಿ, ಭಗವಂತ ನೀಡಿದ ಸಂಪತ್ತು ಅಮೂಲ್ಯ. ನೆಲ ಜಲ ಬೆಂಕಿ ಗಾಳಿ ಬಯಲು ಕೊಟ್ಟ ಭಗವಂತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಆಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಬದುಕಿ ಬಾಳುವ ಮನುಷ್ಯನಿಗೆ ಉಜ್ವಲ ಬೆಳಕನ್ನು ತೋರುತ್ತವೆ ಎಂದರು.

ಈ ಪವಿತ್ರ ಸಮಾರಂಭದ ಸಮ್ಮುಖವನ್ನು ವಹಿಸಿದ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ ಮನುಷ್ಯನಿಗೆ ಮರೆವು-ಅರಿವು ಎರಡೂ ಇದೆ. ಮರೆಯುವುದು ಮನುಷ್ಯನ ಸ್ವಭಾವ. ಮರೆತು ಹೋದುದನ್ನು ನೆನಪು ಮಾಡುವುದೇ ಗುರುವಿನ ಧರ್ಮವಾಗಿದೆ. ಆದಿಶೇಷ ಹಿರೇಮಠದ ಜಾತ್ರಾ ಮಹೋತ್ಸವ ಭಕ್ತರ ಬಾಳಿಗೆ ಬೆಳಕನ್ನು ತೋರಲೆಂದರು.

ಆಲೂರು ಸಂಸ್ಥಾನ ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯರು, ನಾಲವಾರದ ಶಿವಯೋಗಿ ಚಂದ್ರಶೇಖರ ಸ್ವಾಮಿಗಳು, ಸಾರಂಗಮಠದ ಡಾ. ಪ್ರಭುದೇವ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಕೆಂಬಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

- Advertisement -

ಹುಬ್ಬಳ್ಳಿಯ ಕೃಷಿಕರಾದ ಅರವಿಂದ ಕೇಶ್ವಾಪುರ, ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟಿ, ಕಲಬುರ್ಗಿಯ ಉಪನ್ಯಾಸಕಿ ಜಯಶ್ರೀ ಬಿರಾದಾರ, ಭಾಗ್ಯಜ್ಯೋತಿ ವೃದ್ಧಾಶ್ರಮದ ಗಂಗಮ್ಮ ಗೋರೇಗೊಳ್, ಉಪನ್ಯಾಸಕ ಪ್ರಶಾಂತ ದೇವಣಿ ಹಾಗೂ ಕುಮಠೆ ಪ್ರಗತಿಪರ ರೈತ ಸುರೇಶ ಬಡಿಗೇರ ಇವರಿಗೆ “ಆದಿಶೇಷ ಶ್ರೀ” ಪ್ರಶಸ್ತಿ ಪ್ರದಾನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ನೆರವೇರಿಸಿ ಶುಭ ಹಾರೈಸಿದರು.
ಆಳಂದದ ಮಹೇಶ್ವರಿ ವಾಲಿ, ಸಿಂದಗಿಯ ಶಾಂತು ಹಿರೇಮಠ, ಅಶೋಕ ವಾರದ, ಸತೀಶ ಬಿರಾದಾರ, ಮಾಗಣಗೇರಾದ ಗೊಲ್ಲಾಳಪ್ಪಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ದೇವದುರ್ಗದ ನಾಗರಾಜ ಪಾಟೀಲ, ನಾಗಠಾಣದ ಚಂದ್ರಶೇಖರ ಅರಕೇರಿ ಹಾಗೂ ವಿಜಯಪುರದ ಬಸವರಾಜ ನಾಗನೂರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಿದ್ಧಲಿಂಗಯ್ಯ ಹಿರೇಮಠ ಮತ್ತು ಕುಮಾರಿ ಪೂಜಾ ನಂದೀಶ ಹಿರೇಮಠ ನಿರೂಪಿಸಿದರು.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group