ಕಾಕತಿ ಸಾಹಿತ್ಯ ಸಮ್ಮೇಳನದಲ್ಲಿ ಕೃತಿಗಳ ಬಿಡುಗಡೆ

Must Read

ಬೆಳಗಾವಿ:  ಕಾಕತಿಯಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸವದತ್ತಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ ಸಿ ಹಿರೇಮಠ ರ ನಾವೂ ಗೆಲ್ಲಬೇಕು. ವೈ ಬಿ ಕಡಕೋಳ ರ ಮಕರಂದ ಹಾಗೂ ಭಾವಾಂತರಂಗದಲ್ಲಿ. ಕಲಬುರಗಿ ಯ ಲೇಖಕಿ ನಂದಿನಿ ಸನಬಾಳ್ ಅವರ ಭರವಸೆಗಳ ಬೆನ್ನೇರಿ ಕೃತಿಗಳ ಬಿಡುಗಡೆ ಕಾರ್ಯಕ್ರಮ ಸೋಮವಾರ ಜರುಗಿತು.

ಯುವ ದುರೀಣರಾದ ರಾಹುಲ್ ಸತೀಶ ಜಾರಕಿಹೊಳಿ ಸುಕ್ಷೇತ್ರ ಮುಕ್ತಿಮಠದ ಪರಮಪೂಜ್ಯ ಶ್ರೀ ಶಿವಸಿದ್ಧಸೋಮೇಶ್ವರ ಮಹಾಸ್ವಾಮಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಶೈಲಜಾ ಬಿಂಗೆ, ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಲೀಲಾವತಿ ಹಿರೇಮಠ, ಜಿಲ್ಲಾತಾಲೂಕು ಸಮ್ಮೇಳನದ ಉಸ್ತುವಾರಿ ಗಳು ಹಾಗೂ ಕಾಕತಿ ಹೋಬಳಿ ಘಟಕದ ಅಧ್ಯಕ್ಷ ರಾದ ಅಶೋಕ ಖೋತ, ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ಹಾಗೂ ಲೇಖಕಿ ನಂದಿನಿ ಸವಬಾಳ್, ಜಿಲ್ಲಾ ಕ. ಸಾ. ಪ. ಕಾರ್ಯದರ್ಶಿ ಎಂ ವಾಯ್ ಮೆಣಸಿನಕಾಯಿ ಮೊದಲಾದವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬೆಳಗಾವಿ ಕ. ಸಾ. ಪ ಘಟಕದ ಕಾರ್ಯದರ್ಶಿ ನಾಗಪ್ಪ ಕರವಿನಕೊಪ್ಪ,  ಶಿವಾನಂದ ತಲ್ಲೂರು, ಸವದತ್ತಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್ ಬಿ ಬೆಟ್ಟದ, ಜ್ಯೋತಿ ಬದಾಮಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೀಲಾವತಿ ಹಿರೇಮಠ ರಿಗೆ ಗೌರವ ಸನ್ಮಾನ
ಇದೇ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ ಸಿ ಹಿರೇಮಠ ರ ನಾವೂ ಗೆಲ್ಲಬೇಕು ಕೃತಿಯ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಕೋರಿದ ಪ್ರಯುಕ್ತ ಬೆಳಗಾವಿ ಜಿಲ್ಲಾ ಉಪನಿರ್ದೇಶಕರಾದ ಲೀಲಾವತಿ ಹಿರೇಮಠ ರವರನ್ನು ಸವದತ್ತಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ನಿರ್ದೇಶಕ ರಾದ ಶ್ರೀಕಾಂತ ಯರಡ್ಡಿ. ಸುಬ್ಬಾಪುರಮಠ. ಬಿಐಇಆರ್ ಟಿ ಗಳಾದ ಎಸ್ ಬಿ ಬೆಟ್ಟದ. ವೈ ಬಿ ಕಡಕೋಳ. ಲೇಖಕರಾದ ವ್ಹಿ ಸಿ ಹಿರೇಮಠ.ಮೊದಲಾದವರು ಗೌರವಿಸಿ ಸನ್ಮಾನಿಸಿದರು

ಯಲ್ಲಪ್ಪ ಕೋಳೇಕರ  ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಯಮಕನಮರಡಿ ನಿರೂಪಿಸಿದರು. ರಮೇಶ ಬಾಗೇವಾಡಿ ವಂದಿಸಿದರು

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group