spot_img
spot_img

ಜನಸ್ನೇಹಿ ಬಜೆಟ್ – ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಗೋಕಾಕ – ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಬಡವರು, ಮಧ್ಯಮ ವರ್ಗಕ್ಕೆ ಅನುಕೂಲವಾಗಿದೆ. ರೈತರಿಗೂ ಕೂಡ ಭಾರಿ ಪ್ರಯೋಜನವಾಗಿದೆ. ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸಿರುವುದು ಸಂತೋಷದಾಯವಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಬಜೆಟ್ ಬಗ್ಗೆ ತಮ್ಮ ಪ್ರಶಂಸೆ ವ್ಯಕ್ತಪಡಿಸಿದ ಅವರು,  ಯುವ ಜನಾಂಗಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಿದೆ. ವಿಕಸಿತ ಭಾರತ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಆತ್ಮ ವಿಶ್ವಾಸ ಶಕ್ತಿಯನ್ನು ಈ ಬಜೆಟ್ ತುಂಬಿದೆ.
ಒಟ್ಟಿನಲ್ಲಿ ಈ ಬಜೆಟ್ ಎಲ್ಲ ವರ್ಗಗಳಿಗೆ ಸಹಕಾರಿಯಾಗಿದೆ.
ಜನಪರ, ರೈತಪರ, ಮಹಿಳಾಪರ, ಯುವ ಜನತೆಯ ಆಶಾಕಿರಣವಾಗಿ ಮಂಡಿಸಿರುವುದು ಭಾರತ ಇನ್ನಷ್ಟೂ ಶಕ್ತಿಶಾಲಿ ರಾಷ್ಟ್ರವಾಗಲು ಪೂರಕವಾಗಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ವರದಿ ಸಿಂದಗಿ : ಕಂಪ್ಯೂಟರ್ ಉತಾರ ಕೊಡಲು ಲಂಚ

ದಾಖಲೆ ಪಡೆಯಲು ಹರಸಹಾಸ ಪಡುತ್ತಿರುವ ಸಾರ್ವಜನಿಕರು. ವರದಿ: ಪಂಡಿತ ಯಂಪೂರೆ. ಸಿಂದಗಿ; ಪಟ್ಟಣದ ಸೌಂದರೀಕರಣಕ್ಕೆ ಯಾವುದೇ ಮುಲಾಜಿಗೆ ಬಿಳದೇ ಅತಿಕ್ರಮಣ ಜಾಗೆಗಳಲ್ಲಿದ್ದ ಡಬ್ಬಾ ಮುಕ್ತ ಮಾಡಲು ದಿಟ್ಟ ಹೆಜ್ಜೆಯಿಟ್ಟು...
- Advertisement -

More Articles Like This

- Advertisement -
close
error: Content is protected !!
Join WhatsApp Group