spot_img
spot_img

ಚಿನ್ನ ಕಳ್ಳರನ್ನು ಬಂಧಿಸಿದ ಕುಲಗೋಡ ಪೊಲೀಸರು

Must Read

spot_img
- Advertisement -

ಮೂಡಲಗಿ: -ತಾಲೂಕಿನ ಕುಲಗೋಡ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಆಟೋರಿಕ್ಷಾ ಹಾಗೂ 9.6 ಲಕ್ಷದ ಬಂಗಾರದ ಆಭರಣಗಳನ್ನು  ವಶಪಡಿಸಿಕೊಂಡಿದ್ದಾರೆ.

ಗೋಕಾಕ ನಗರದ ರಾಘವೇಂದ್ರ ರಾಮು ರೇವಣಕರ (22) ಹಾಗೂ ಓಂಕಾರ ದಯಾನಂದ ಜಾಧವ (21) ಎಂಬ ಆರೋಪಿಗಳು ಬಂಧಿಯಾಗಿದ್ದಾರೆ.

ಕಳೆದ ಸಪ್ಟೆಂಬರನಲ್ಲಿ ಗೋಕಾಕ ತಾಲೂಕಿನ ಕೌಜಲಗಿಯ ಮನೆಯೊಂದರ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನ ಕಳ್ಳತನವಾದ ಬಗ್ಗೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎಸ್.ಪಿಯವರ ಮಾರ್ಗದರ್ಶನದಲ್ಲಿ,ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಪಿ ಎಸ್ ಐ ಆನಂದ ಬಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸಿ 9.6ಲಕ್ಷ ಮೌಲ್ಯದ 113 ಗ್ರಾಂ ಬಂಗಾರ ಮತ್ತು ಆಟೋರಿಕ್ಷಾ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

- Advertisement -

ಕಾರ್ಯಾಚರಣೆಯಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ,ಕುಲಗೋಡ ಪಿ ಎಸ್ ಐ ಆನಂದ ಬಿ,ಎಸ್ ಐ 2 ವಿ.ವಿ.ಉತ್ರೇಶ್ವರ, ಎಮ್.ಬಿ.ಕರಣಿ, ವಾಯ್.ಎಮ್.ಸಾಂಗಲಿ, ಎಸ್.ವಿ.ಹಣಜಿ, ಎಮ್.ಬಿ.ಅಡಿನ, ಕೆ.ಸಿ.ಬಾಗಲಿ, ಎಮ್.ಎಸ್.ಕುರೆನ್ನವರ, ಎಸ್.ಎನ್.ಬಡಬಂಡೆ, ಎಲ್.ಎಲ್.ಪೂಜೇರಿ, ಎಸ್.ಎಫ್.ಮಳಲಿ, ವಿ.ಎಕ್.ದೂಳಪ್ಪನವರ, ಎ.ಎಚ್.ವೇಶದಾರಿ ಮತ್ತು ವಿನೋದ ಟಕ್ಕನವರ ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ಜಾತಿ ಸಂತಿ

ಜಾತಿ ಸಂತಿ !   ಜಾತಿ ಹೆಂಗೈತಿ ಅಂದ್ರ ನನ್ನ ಹೆಸರಿನಾಗ ಐತಿ ವಾಸಿಸೋ ಮನೆಯಲ್ಲಿ ಐತಿ ನಾ ಕುಡಿಯೋ ನೀರಾಗೈತಿ ನಾ ತೊಡೋ ಬಟ್ಟೆಗೈತಿ ಮತ್ತ ಅದ ರಾಡಿ ಕಟ್ಟಬೇಕು...
- Advertisement -

More Articles Like This

- Advertisement -
close
error: Content is protected !!
Join WhatsApp Group