spot_img
spot_img

ಫೆ.6ರಂದು ದೇವುಡು ಕಥಾಲೋಕ ಗ್ರಂಥ ಲೋಕಾರ್ಪಣೆ ಡಾ. ಕೆ ಜಿ ಲಕ್ಷ್ಮಿ ನಾರಾಯಣಪ್ಪ ಅಭಿನಂದನೆ

Must Read

spot_img
- Advertisement -
    ಸ್ವಪ್ನ ಬುಕ್ ಹೌಸ್ ಪ್ರಕಟಪಡಿಸಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಸಂಪಾದಿಸಿರುವ ದೇವುಡು ಕಥಾಲೋಕ ಗ್ರಂಥ ಲೋಕಾರ್ಪಣೆ ಮತ್ತು ಅಮೆರಿಕೆಯ ಗೋಲ್ಡನ್ ಗೇಟ್ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪಡೆದ ಡಾ ಕೆ.ಜಿ ಲಕ್ಷ್ಮಿನಾರಾಯಣಪ್ಪ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಫೆ 6, 2025 ಗುರುವಾರ ಸಂಜೆ 5:30ಕ್ಕೆ ಜೆಸಿ ರಸ್ತೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಉದಯ ಪ್ರಕಾಶನದ ವತಿಯಿಂದ ಆಯೋಜಿಸಲಾಗಿದೆ.

ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತಿ ಕುಲಪತಿ ಪ್ರೊ.ವೈ.ಎಸ್ ಸಿದ್ದೇಗೌಡ ಗ್ರಂಥ ಲೋಕಾರ್ಪಣೆ ಮತ್ತು ಅಭಿನಂದನೆಯನ್ನು ನಡೆಸಿಕೊಡುವರು. ಹಿರಿಯ ವಿದ್ವಾಂಸ ಮತ್ತು ಸಂಸ್ಕೃತಿ ಚಿಂತಕ ಪ್ರೊ. ಕೆ. ಈ.ರಾಧಾಕೃಷ್ಣ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟನಾ ವಿಭಾಗದ ಸಂಚಾಲಕ ಡಾ.ಎನ್.ಎಸ್ ಶ್ರೀಧರಮೂರ್ತಿ ಗ್ರಂಥ ಕುರಿತು ಮಾತನಾಡುವರು.

    ಅಮೆರಿಕೆಯ ಗೋಲ್ಡನ್ ಗೇಟ್ ಸ್ಯಾನ್ ಫ್ಯಾನ್ಸಿಸ್ಕೊ ವಿಶ್ವವಿದ್ಯಾಲಯದವರು ಹಿರಿಯ ಸಾಹಿತಿ ಮತ್ತು ಸಂಶೋಧಕ ಡಾ.ಕೆ ಜಿ ಲಕ್ಷ್ಮಿನಾರಾಯಣಪ್ಪ ರವರು  ಹಿಸ್ಟರಿ ಅಂಡ್ ಕಲ್ಚರ್ ಆಫ್ ಟ್ರಡಿಷನಲ್ ವೀವರ್ಸ್ ಆಫ್ ಸೌತ್ ಇಂಡಿಯಾ ವಿಷಯದ ಕುರಿತು ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪದ್ಮಶಾಲಿ ಜನಾಂಗದ ಇತಿಹಾಸ ಸಂಸ್ಕೃತಿ ದರ್ಶನದ ಕುರಿತು ಆಳವಾದ ಅಧ್ಯಯನ ನಡೆಸಿರುವ ಶ್ರೀಯುತರು ವೃತ್ತಿ ಯಿಂದ ಕೇಂದ್ರ ಸುಂಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಪ್ರವೃತ್ತಿಯಲ್ಲಿ ಸಂಶೋಧಕರಾಗಿ ಅನೇಕ ಕೃತಿಗಳನ್ನು ರಚಿಸಿರುವ ಸಾಹಿತ್ಯಾಸಕ್ತರು, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲರು .

     ನಾಡಿನ ಸಾಮಾಜಿಕ, ಶೈಕ್ಷಣಿಕ,ಸಾಂಸ್ಕೃತಿಕ ಲೋಕದ ಅನೇಕ ಗಣ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ಕಾರ್ಯಕ್ರಮದ ಆಯೋಜಕರಾದ ಸ್ವಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮತ್ತು ಉದಯ ಪ್ರಕಾಶನದ ಪ್ರಕಾಶಕಿ ಎಂ.ಡಿ ಶೈಲಜಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group