ದಿ.೧೧ ರಂದು ಕಲ್ಲೋಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Must Read

ದಿ.೧೧ ರಂದು ಕಲ್ಲೋಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿ
ಮೂಡಲಗಿ: ತಾಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ, ಪ್ರಿಯದರ್ಶಿನಿ ಸಹಕಾರಿ ಪತ್ತಿನ ಸಂಘಮತ್ತು ಬೆಳಗಾವಿ ಕೆ.ಎಲ್.ಇ. ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ
ಹಾಗೂ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿ.೧೧ ರಂದು ಬೆಳಗ್ಗೆ ೯ರಿಂದ ೩ಗಂಟೆಯವರೆಗೆ ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆಯ ರಮೇಶ ಬೆಳಕೂಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ, ಮೂತ್ರ ಕೋಶ, ಮಧುಮೇಹ, ನೇತ್ರ,
ಶ್ವಾಸಕೋಶ, ಗ್ಯಾಸ್ಕೋ ಎಂಟಲಾಜಿ, ಎಲುಬು ಕೀಲು, ಕಿವಿ, ಮೂಗು ಮತ್ತು ಗಂಟಲು, ಚಿಕ್ಕ ಮಕ್ಕಳ
ಚಿಕಿತ್ಸೆ ಕ್ಯಾನ್ಸರ್, ಸ್ಟೀರೋಗ, ಚರ್ಮರೋಗ ಚಿಕಿತ್ಸೆ ದಂತರೋಗ, ಆಯುರ್ವೇದ ಚಿಕಿತ್ಸೆ,
ಹೋಮಿಯೋಪತಿಕ್ ಚಿಕಿತ್ಸೆ ಸೇರಿದಂತೆ ಉಚಿತ ಶುಗರ್, ಹಿಮೋಗ್ಲೋಬಿನ್, ಬಿಪಿ, ಇಸಿಜಿ, ಇಕೋ
ತಪಾಸನೆಯನ್ನು ನಡೆಸಿ ಉಚಿತ ಔಷಧಿಗಳನ್ನು ವಿತರಿಸಲಾಗುವುದು, ಶಿಬಿರದಲ್ಲಿ ಕೆ.ಎಲ್.ಇ. ತಜ್ಞ
ವೈದ್ಯರುಗಳು ಭಾಗವಹಿಸಲಿದ್ದು ಉಚಿತ ಶುಗರ್, ಹಿಮೋಗ್ಲೋಬಿನ್, ಬಿಪಿ, ಇಸಿಜಿ, ಇಕೋ
ತಪಾಸನೆಯನ್ನು ನಡೆಸಿ ಉಚಿತ ಔಷಧಿಗಳನ್ನೂ ವಿತರಿಸಲಾಗುವುದು, ಹೆಚ್ಚಿನ ಮಾಹಿತಿಗಾಗಿ
೮೨೧೭೨೩೭೪೮೫, ೯೪೪೯೦೦೦೬೨೩, ೮೯೬೦೨೭೭೭೨೩, ೮೯೭೧೦೭೬೦೦೫, ೮೧೫೨೯೬೬೧೯೪, ೮೬೬೦೧೦೯೮೪೮
ಮೊಬೈಲ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group