ಡಾ. ಎಸ್. ಆರ್. ಗುಂಜಾಳ ಗುರುಗಳಿಗೆ ರಾಷ್ಟ್ರೀಯ ಬಸವ ಪುರಸ್ಕಾರ ಘೋಷಣೆ

Must Read

ಬಸವಣ್ಣನವರ ಜೀವನ ಮತ್ತು ಸಂದೇಶಗಳನ್ನು ತಮ್ಮ ಬರಹಗಳ ಮೂಲಕ ವಿಶ್ವದೆಲ್ಲೆಡೆ ಪಸರಿಸಿದ ಡಾ. ಎಸ್. ಆರ್. ಗುಂಜಾಳ ಗುರುಗಳನ್ನು ಕರ್ನಾಟಕ ಘನ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ತಮ್ಮ ಜೀವನದ ಉದ್ದಕ್ಕೂ ಬಸವ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ಗುಂಜಾಳ ಅವರು ಬಸವಣ್ಣನವರ ವಚನ ಪದಪ್ರಯೋಗ ಕೋಶ ವನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ವಿನೂತನ ಕೊಡುಗೆ ಕೊಟ್ಟವರು. ಬಸವ ಸಾಹಿತ್ಯ ದರ್ಪಣ ಕೃತಿ ಮೂಲಕ ಬಸವಣ್ಣನವರ ಕುರಿತು ಈವರೆಗೆ ಬಂದ ಸಮಗ್ರ ಸಾಹಿತ್ಯ ಸೂಚಿಯನ್ನು ರಚಿಸಿದರು.

ಇಲ್ಲಿಯವರೆಗೆ ವಿದೇಶಿ ವಿದ್ವಾಂಸರು ಬರೆದ ಶರಣ ಸಾಹಿತ್ಯ ಕುರಿತ ಇಂಗ್ಲಿಷ್ ಕೃತಿಗಳಲ್ಲಿ ಕನ್ನಡದ ಏಕೈಕ ವಿದ್ವಾಂಸರನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ, ಅವರೇ ಡಾ. ಗುಂಜಾಳ ಅವರು. Lingayat Bibliography ಎಂಬ ಇಂಗ್ಲಿಷ್ ಕೃತಿ ರಚಿಸಿ ಪಾಶ್ಚಿಮಾತ್ಯ ವಿದ್ವಾಂಸರಿಗೆ ಶರಣ ಸಾಹಿತ್ಯ ಪರಿಚಯಿಸಿದ ಕೀರ್ತಿ ಡಾ. ಗುಂಜಾಳ ಅವರದು.
೯೨ ವಯಸ್ಸಿನಲ್ಲೂ ಉತ್ಸಾಹದಿಂದ ಬಸವ ಸಾಹಿತ್ಯ ಕುರಿತು ಆಲೋಚಿಸುವ ಅವರ ಜೀವನೋತ್ಸಾಹ ನಿಜಕ್ಕೂ ಆದರ್ಶನೀಯ.

ಇಂತಹ ಹಿರಿಯರಿಗೆ ಈ ಸಲದ ರಾಷ್ಟ್ರೀಯ ಬಸವ ಪುರಸ್ಕಾರ ದೊರೆತಿರುವುದು ಅತ್ಯಂತ ಸಂತೋಷದ ಸಂಗತಿ.
ಡಾ. ಎಸ್. ಆರ್. ಗುಂಜಾಳ ಅವರಿಗೆ ವಂದನೆ ಅಭಿನಂದನೆಗಳು.

ಪ್ರಕಾಶ ಗಿರಿಮಲ್ಲನವರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group