ಕರಾಳ ದಿನದ ನೆನಪು
ಪುಲ್ವಾಮಾ ದಾಳಿ
ಆತ್ಮಾಹುತಿ ಸ್ಫೋಟದ ಸುಳಿ
ನಲುಗಿದೆ ಭಾರತಾಂಬೆಯ ಸದನ
ಇದೇ ಕಣ್ಣೀರ ಕೋಡಿಯ ವ್ಯಾಖ್ಯಾನ.
ಭಯೋತ್ಪಾದಕರ ಅಟ್ಟಹಾಸ ಭೀಕರ
ಮಾರಣಾಂತಿಕ ಅಪಾರ
ದೇಶದ ಚಿತ್ರಣ ಬದಲಿಸಿ
ವೀರ ಮರಣ ಎಂದೆಂದಿಗೂ ಸ್ಮರಿಸಿ.
ಪ್ರತೀಕಾರದ ಛಾಯೆ
ದಿಗ್ಭ್ರಮೆ ಮೂಡಿಸಿ
ಆಕ್ರಮಣದ ಪರಿಗೆ
ಕಂಪಿಸಿದೆ ಮಣ್ಣ ಕಣ ಕಣ.
ಅಟ್ಟಹಾಸದ ಮೆರವಣಿಗೆ
ಆರದ ಗಾಯ
ಇತಿಹಾಸ ಪುಟದಿ
ಕರಾಳ ದಿನದ ನೆನಪು.
ದುಃಖ ಉಮ್ಮಳಿಸಿದೆ
ಬಿಸಿ ರಕ್ತ ಜಿನುಗುತಿದೆ
ಆಗುಂತಕರ ದಾಳಿಗೆ
ಮರುಗುತಿದೆ ಜನಮನ.
ದೇಶ ಭಕ್ತಿ ಪುಟಿದಿದೆ
ಹರಿದ ರಕ್ತದ ಕೋಡಿಗೆ
ಮಡಿದ ವೀರ ಮರಣಕೆ
ಕಂಪಿಸಿದೆ ಭಾರತ ಮಾತೆ.
ನೆಮ್ಮದಿಯ ನಿದ್ರೆಗೆ
ಸುಖದ ಜೀವನಕೆ
ನಿಮ್ಮದೇ ಬೆಂಗಾವಲು
ವೀರ ಜವಾನರೇ ನಿಮಗಿದೋ ನಮನ.
ರೇಷ್ಮಾ ಕಂದಕೂರ, ಶಿಕ್ಷಕಿ