ಜೂಜಿಗೆ ಪ್ರಸಿದ್ಧ ಫಲೋಡಿ ನಗರ

0
205

ಇಲ್ಲಿ ಮಳೆಯಿಂದ ಹಿಡಿದು ರಾಜಕಾರಣದವರೆಗೂ ಪ್ರತಿಯೊಂದರ ಮೇಲೂ ಜೂಜು ನಡೆಯುತ್ತದೆ.

ಭಾರತದ ಅತ್ಯಂತ ಬಿಜಿಯಾಗಿರುವ ಜೂಜು ಮಾರುಕಟ್ಟೆ ಎಂದು ಕರೆಯಲ್ಲಡುವ ರಾಜಸ್ಥಾನದ ಫಲೋಡಿ ಜೂಜು ಮಾರುಕಟ್ಟೆ ಈಗ ಅತ್ಯಂತ ಸುದ್ದಿಯಲ್ಲಿದೆ. ಈ ಸಲದ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿಯ ಪರ ಇದ್ದು ಸ್ವಲ್ಪ ಸೀಟುಗಳನ್ನು ಕಳೆದುಕೊಂಡರೂ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಈ ಸಟ್ಟಾ ಮಾರ್ಕೆಟ್ ಹೇಳುತ್ತದೆ.

ನಾಲ್ಕು ಹಂತದ ಚುನಾವಣೆ ಮುಗಿದ ನಂತರದ ಸಮೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿಯು ೨೯೬-೩೦೦ ಸೀಟು ಪಡೆಯಲಿದೆ ಎಂದು ಅಂದಾಜಿಸಲಾಸಲಾಗಿದೆ. ೨೦೧೯ ರಲ್ಲಿ ಬಿಜೆಪಿ ಸ್ವತಂತ್ರವಾಗಿ ೩೦೩ ಸೀಟು ಪಡೆದಿತ್ತು.

ಆದರೆ ಚುನಾವಣೆಯ ಸಮೀಕ್ಷೆಯ ವಿಷಯದಲ್ಲಿ ಉತ್ತರ ಭಾರತದ ಫಲೋಡಿ ತುಂಬಾ ಹೆಸರು ಪಡೆದಿದೆ. ಈ ವರ್ಷ ಮಳೆ ಎಷ್ಟು ಪ್ರಮಾಣದಲ್ಲಿ ಆಗುತ್ತದೆ ಎಂಬ ವಿಷಯ ಸೇರಿದಂತೆ ರಾಜಕಾರಣ, ಕ್ರಿಕೆಟ್, ಫುಟ್ಬಾಲ್ ಅಲ್ಲದೆ ಯಾವುದೇ ವಿಷಯದ ಮೇಲೆಯೂ ಇಲ್ಲಿ ಸಟ್ಟಾ ನಡೆಯುತ್ತದೆ. ಬೆಟ್ಟಿಂಗ್ ಕರಾರುವಾಕ್ಕಾಗಿ ನಡೆಯುತ್ತದೆ.
ಜೋಧಪುರದಿಂದ ಸುಮಾರು ೧೬೦ ಕಿ ಮೀ ದೂರವಿರುವ ಫಲೋಡಿಯಲ್ಲಿ ಬಹಿರಂಗವಾಗಿಯೇ ಜೂಜು ನಡೆಯುತ್ತದೆ. ನಗರದ ಜನಸಂಖ್ಯೆ ಸುಮಾರು ೬ ಲಕ್ಷವಿದ್ದರೆ ೧೨೦೦ ಜನರು ಈ ಬೆಟ್ಟಿಂಗ್ ದಂಧೆಯಲ್ಲಿಯೇ ತೊಡಗಿದ್ದಾರೆ. ವಾರ್ಷಿಕ ೨೦ ಕೋಟಿ ಬೆಟ್ಟಿಂಗ್ ದಂಧೆ ನಡೆಯುತ್ತದೆ ಎಂದು ಔಟ್ ಲುಕ್ ವರದಿ ತಿಳಿಸುತ್ತದೆ.