ಸತ್ತವರ ಬಾಡಿ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ !
ಟೊರಂಟೋ – ಜಗತ್ತಿನಲ್ಲಿ ಎಲ್ಲವೂ ದುಬಾರಿಯಾಗುತ್ತಿರಬಹುದು ಆದರೆ ಕೆನಡಾ ದೇಶದಲ್ಲಿ ಸತ್ತವರನ್ನೂ ಹೂಳಲು ತಗಲುವ ಖರ್ಚೇ ಅತ್ಯಂತ ದುಬಾರಿಯಾಗಿದ್ದು ಮೃತ ದೇಹಗಳನ್ನು ಪಡೆಯಲು ಸಂಬಂಧಿಕರು ಹಿಂದೇಟು ಹಾಕುತ್ತಿದ್ದಾರೆ.
ಇಲ್ಲಿನ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಒಂಟಾರಿಯೋ ಪ್ರಾಂತದಲ್ಲಿ ಸತ್ತವರ ಸಂಬಂಧಿಗಳು ಪಡೆಯದೇ ಇರುವ ಮೃತ ದೇಹಗಳ ಸಂಖ್ಯೆ ೨೦೧೩ ರಲ್ಲಿ ೨೪೩ ಇದ್ದದ್ದು ೨೦೨೩ ರಲ್ಲಿ ೧೧೮೩ ಕ್ಕೇರಿದೆ ಎಂದು ಆ ಪ್ರಾಂತದ ಮುಖ್ಯಾಧಿಕಾರಿ ಡ್ರಿಕ್ ಹ್ಯೂಯರ್ ಹೇಳುತ್ತಾರೆ.
ಕೆಲವು ಕಡೆ ಸತ್ತವರ ಸಂಬಂಧಿಗಳು ಮೃತ ದೇಹವನ್ನು ಪಡೆದುಕೊಳ್ಳದೇ ಇರಲು ಅನೇಕ ಕಾರಣಗಳಿರುತ್ತವೆ ಅದರಲ್ಲಿ ಸಾಮಾನ್ಯ ಕಾರಣವೆಂದರೆ ಹಣದ ಸಮಸ್ಯೆ. ಯಾಕೆಂದರೆ, ಅಂತ್ಯ ಸಂಸ್ಕಾರದ ಖರ್ಚು ತುಂಬಾ ದುಬಾರಿಯಾಗಿದ್ದು ಅದನ್ನು ಭರಿಸಲು ಸಂಬಂಧಿಗಳು ಹೆಣಗಾಡಬೇಕಾಗಿದೆ. ಅಲ್ಲದೆ ಕೆಲವೊಮ್ಮೆ ಹಣ ಹೊಂದಿಸಲಾಗದೆ ಮೃತ ದೇಹಗಳನ್ನು ಅಲ್ಲಿಯೇ ಬಿಟ್ಟು ಹೊರಟುಬಿಡುತ್ತಿದ್ದಾರೆ.
Mount Pleasant Group ಎಂಬ ಸಂಸ್ಥೆಯಲ್ಲಿ ಅಂತ್ಯ ಸಂಸ್ಕಾರದ ಖರ್ಚು ೨೮೦೦ ಡಾಲರ್ಸ ಇತ್ತು ಆದರೀಗ ಏಪ್ರಿಲ್ ಒಂದರಂದು ಈ ದರ ೩೪೦೦೦ ಡಾಲರ್ ಆಗಿದೆ ಅಲ್ಲದೆ ಇದರಲ್ಲಿ ಗೋರಿ ತೆಗೆಯುವುದು, ಮುಚ್ಚುವುದು, ಗೋರಿಯ ಕಲ್ಲು, ತೆರಿಗೆ ಹಾಗೂ ಇತರೆ ಖರ್ಚು ಸೇರಿಲ್ಲ.
ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ. ಇದಕ್ಕಾಗಿಯೇ ನಾವು ಒಂದು ಪೆನ್ಶನ್ ಪ್ಲಾನ್ ಜಾರಿಗೆ ತರಲಿದ್ದೇವೆ ಎಂಬುದಾಗಿ ಕೆನಡಾ ಹಣಕಾಸು ಸಚಿವಾಲಯದ ಪ್ರೆಸ್ ಕಾರ್ಯದರ್ಶಿ ಕ್ಯಾಥರೀನ್ ಹೇಳುತ್ತಾರೆ.