‘ರೈತರು ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತಾಗಬೇಕು’ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಮೂಡಲಗಿ: ‘ಕೃಷಿಯನ್ನು ಉದ್ಯಮ ರೀತಿಯಲ್ಲಿ ಬೆಳೆಸಿದಾಗ ಮಾತ್ರ ರೈತರ ಆದಾಯವು ದ್ವಿಗುಣವಾಗಲು ಸಾಧ್ಯ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲ್ಲೂಕಿನ ಕಲ್ಲೋಳಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗೋವಿನಜೋಳ ಮತ್ತು ಸೋಯಾಅವರೆಯ ಕ್ಷೇತ್ರೋತ್ಸವ ಹಾಗೂ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಒಕ್ಕುಲತನ ಮಾಡುವ ಇಚ್ಛಾಶಕ್ತಿಯೊಂದಿಗೆ ಲಭ್ಯವಿರುವ ಹೊಸ ತಾಂತ್ರಿಕ ಅಂಶಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಮುಂದೆ ಬರಬೇಕು ಎಂದರು.

- Advertisement -

ಕೈಗಾರಿಕೆ ಸೇರಿದಂತೆ ಉಳಿದ ಕ್ಷೇತ್ರದಲ್ಲಿ ಅಧಿಕ ಲಾಭ ದೊರೆಯುವಂತೆ ಕೃಷಿ ಕ್ಷೇತ್ರದಲ್ಲಿಯೂ ಶ್ರಮಕ್ಕೆ ತಕ್ಕಂತೆ ಅಧಿಕ ಲಾಭ ದೊರೆಯುವಂತಾಗಬೇಕು. ರೈತರು ಕಾಯಕ ಯೋಗಿಯಾಗಿ ಭೂಮಿಯಲ್ಲಿ ಕೆಲಸ ಮಾಡಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರೈತರ ಪರವಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.

ಕೇಂದ್ರ ಸರ್ಕಾರವು ರೈತರ ಏಳ್ಗೆಗಾಗಿ ಹೆಚ್ಚು ಗಮನ ನೀಡಿದೆ. ರೈತರಪರವಾಗಿ ಹಲವಾರು ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕೃಷಿ ವಿಜ್ಞಾನಿಗಳು ಅಧಿಕ ಇಳುವರಿಯ, ಸುಧಾರಿತ ತಳಿಗಳ ಆವಿಷ್ಠಾರ ಮತ್ತು  ಮಣ್ಣಿನ ಫಲವತ್ತತೆ ಸಂರಕ್ಷಿಸಿ ವೃದ್ದಿಸುವಂತ ಹೊಸ ಶೋಧನೆಗಳೊಂದಿಗೆ ರೈತರಿಗೆ ನೆರವಾಗಬೇಕು. ರೈತರು ಕ್ಷೇತ್ರೋತ್ಸವ ಸೇರಿದಂತೆ ಕೃಷಿ ತಜ್ಞರೊಂದಿಗೆ ನಿರಂತರವಾಗಿ ಸಮಾಲೋಚಿಸಿ ಕೃಷಿ ಬೆಳವಣಿಗೆಗೆ ಗಮನ ನೀಡಿದರೆ ಭೂಮಿಯಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದರು.

ಯುವಕರು ನಗರಗಳಿಗೆ ವಲಸೆಹೋಗುವ ಬದಲು ಇರುವ ಭೂಮಿಯಲ್ಲಿ ಕೃಷಿ ಮಾಡುವ ಕಡೆಗೆ ಒಲವು ತೋರಬೇಕು. ಕೃಷಿಯಲ್ಲಿ ಸಾಧನೆಗೆ ಸಾಕಷ್ಟು ಅವಕಾಶಗಳು ಇವೆ ಎಂದರು.

1956ರಲ್ಲಿ ಸ್ಥಾಪಿತವಾಗಿರುವ 127 ಎಕರೆಯಷ್ಟು ಕೃಷಿ ಭೂಮಿಯನ್ನು ಹೊಂದಿರುವ ಕಲ್ಲೋಳಿಯಲ್ಲಿಯ ಕೃಷಿ ಸಂಶೋಧನಾ ಕೇಂದ್ರವು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹೆಚ್ಚು ಕೆಲಸವನ್ನು ಮಾಡಬೇಕಾಗಿದೆ. ಕೃಷಿ ತಜ್ಞರಿಂದ ಪ್ರತಿ ತಿಂಗಳು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಕೃಷಿ ಕೇಂದ್ರದ ಬೆಳವಣಿಗೆಗೆ ತಾವು ಎಲ್ಲ ರೀತಿಯಿಂದ ಸಹಕಾರ ನೀಡುತ್ತೇವೆ ಎಂದರು.

ಕಾರ್ಯಕ್ರಮದ ಪೂರ್ವದಲ್ಲಿ ಗೋವಿನಜೋಳ ಮತ್ತು ಸೋಯಾಅವರೆಯ ಕ್ಷೇತ್ರೋತ್ಸವದಲ್ಲಿ ರೈತರೊಂದಿಗೆ ಕಡಾಡಿ ಅವರು ಭಾಗಿಯಾಗಿ ಕೃಷಿ ವಿಜ್ಞಾನಿಗಳೊಂದಿಗೆ ಚರ್ಚಿಸಿದರು.

2023ರ ಒಳಗಾಗಿ ರೈತರಿಗೆ ಇರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುವ ರೀತಿಯಲ್ಲಿ ಕೇಂದ್ರ ಸರ್ಕಾರವು ಯೋಜನೆ ಹಾಕಿಕೊಂಡಿದೆ. ರೈತರ ಜೀವನ ಉಜ್ವಲವಾಗಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿವಿಯ ವ್ಯವಸ್ಥಾಪಕ ಮಂಡಳಿ ಸದಸ್ಯ ಶಶಿಮೌಳಿ ಕುಲಕರ್ಣಿ ಮಾತನಾಡಿದರು. ವ್ಯವಸ್ಥಾಪಕ ಮಂಡಳಿ ಸದಸ್ಯ ಯಲ್ಲನಗೌಡ ಪಾಟೀಲ, ಎಲ್.ಎಸ್. ಅಜಗನ್ನವರ ಅತಿಥಿಯಾಗಿದ್ದರು.

ಪ್ರಗತಿ ಪರ ರೈತರರಾದ ದುಂಡಪ್ಪ ಬೆಂಡವಾಡಿ, ಆನಂದ ಮೂಡಲಗಿ, ದುಂಡಪ್ಪ ನಿಂಗನ್ನವರ, ಶ್ರೀಕಾಂತ ಕರೆಪ್ಪಗೋಳ, ಬಸವರಾಜ ಗಾಡವಿ, ಶ್ರೀಶೈಲ್ ತುಪ್ಪದ, ಬಾಳೇಶ ಸಕ್ರೆಪ್ಪಗೋಳ, ಪುಂಡಲೀಕ ಅರಭಾವಿ, ಶ್ರೀಶೈಲ್ ಪೂಜೇರಿ, ರಮೇಶ ಶಿವಶೆಟ್ಟಿ ಇದ್ದರು.

ಧಾರವಾಡ ಕೃಷಿ ವಿವಿಯ ಬೀಜ ವಿಭಾಗದ ವಿಶೇಷ ಅಧಿಕಾರಿ ಡಾ. ಜೆ.ಎಸ್. ಹಿಳ್ಳಿ ಪ್ರಾಸ್ತಾವಿಕ ಮಾತನಾಡಿದರು, ಕಲ್ಲೋಳಿಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಶಶಿಧರ ಎನ್ ಸ್ವಾಗತಿಸಿದರು, ಲಕ್ಷ್ಮಿ ಕುಲಿಗೋಡ ಪ್ರಾರ್ಥಿಸಿದರು, ಬಸವರಾಜ ಅಳಗುಂಡಿ ಪರಿಚಯಿಸಿದರು, ಶಂಕರ ಮಠದ ನಿರೂಪಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!