spot_img
spot_img

ಕೊರೋನಾ ನಂತರ ಕಲಿಕೆಯಲ್ಲಿ ನೂತನ ಶೈಲಿ ರೂಪಿಸಿಕೊಳ್ಳಲಾಗಿದೆ – ಬಿಇಓ ಮನ್ನಿಕೇರಿ

Must Read

spot_img
- Advertisement -

ಮೂಡಲಗಿ: ಮಕ್ಕಳ ಕಲಿಕೆ ಮೇಲೆ ಕರೊನಾ ಮಹಾಮಾರಿಯಿಂದ ದುಷ್ಪಪರಿಣಾಮ ಉಂಟಾಗಿತ್ತು. ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆಯ ಅನೇಕ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನೂತನ ಶೈಲಿಯಲ್ಲಿ ರೂಪಿಸುತ್ತಾ ಬಂದಿದೆ. ಸದ್ಯ ಕಲಿಕಾ  ಹಬ್ಬ ಯೋಜನೆ ರೂಪಿಸುವ ಮೂಲಕ ಮಕ್ಕಳ ಕಲಿಕೆ ಸಹಾಯಕವಾಗುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಮ್ಮಿಕೊಂಡಿದೆ ಎಂದು ಬಿಇಓ ಅಜೀತ ಮನ್ನಿಕೇರಿ ಹೇಳಿದರು.

ಶನಿವಾರದಂದು ತಾಲೂಕಿನ ಹಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಜರುಗಿದ ಮಕ್ಕಳ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದವರು. ಮಕ್ಕಳು ಕೇವಲ ಮನೆಯ ವಾತಾವರಣಕ್ಕೆ ಹೊಂದಿಕೊoಡು ಕಲಿಕೆಯಿಂದ ದೂರಾಗಿದ್ದರು.

ಅದು ಗ್ರಾಮೀಣ ಮಟ್ಟದ ಮಕ್ಕಳ ಕಲಿಕೆಗೆ ಅನೇಕ ತೊಂದರೆಗಳು ಉಂಟಾಗಿದ್ದವು. ಭೌತಿಕವಾಗಿ ತರಗತಿಗಳು ನಿರ್ವಹಣೆಯಾಗದೆ ಮಕ್ಕಳ ಕಲಿಕಾ ಸಾಮರ್ಥ್ಯ ಕುಂಠಿತಗೊoಡಿತು. ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಪ್ರಾರಂಭಗೊoಡಾಗಿನಿoದ ಅನೇಕ ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದ ಮೂಲಕ ವಿವಿಧ ಆಯಾಮಗಳಿಂದ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದ್ದೇವೆ ಎಂದರು.

- Advertisement -

ಪ್ರಸಕ್ತ ವರ್ಷದಲ್ಲಿ ನೂತನ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸುವ ಉದ್ದೇಶ ರಾಜ್ಯ ಮಟ್ಟದಲ್ಲಿದ್ದು, ಶೀಘ್ರದಲ್ಲಿ ಶಿಕ್ಷಣ ಇಲಾಖೆಯಿಂದ ಆದೇಶ ಬರುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಗುಣಮಟ್ಟ ಹಾಗೂ ಗುಣಾತ್ಮಕವಾದ ಶಿಕ್ಷಣವನ್ನು ಪೂರೈಸುವಲ್ಲಿ ಪ್ರಯತ್ನಿಸಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿದ್ರಾವi ಲೋಕನ್ನವರ ಮಾತನಾಡಿ, ಶಿಕ್ಷಣ ಇಲಾಖೆಯು ನಿಗದಿಪಡಿಸಿರುವ ಕಲಿಕಾ  ಸಾಮರ್ಥ್ಯಗಳನ್ನು ತರಗತಿ ಕೊನೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ ಕಾರ್ಯಪ್ರವೃತ್ತರಾಗಿದ್ದಾರೆ. ಅದೇ ರೀತಿಯಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಅತ್ಯಂತ ಕಡು ಬಡತನದ ಮಕ್ಕಳು ಶಾಲೆಗೆ ಬರುವುದರಿಂದ ಶಿಕ್ಷಕರು ಹೆಚ್ಚಿನ ಕಾಳಜಿವಹಿಸಿ ಉತ್ತಮ ಶಿಕ್ಷಣ ನೀಡುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಶಿಕ್ಷಕರಿಗೆ ಹೇಳಿದರು.

ಈ ಸಂದರ್ಭದಲ್ಲಿ ಹಳ್ಳೂರ ಸಮೂಹ ವ್ಯಾಪ್ತಿಯ ಶಿಕ್ಷಕರು ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಭಾಗವಹಿಸುವ ಮೂಲಕ ಕಲಿಕೆಯ ವಿವಿಧ ಸಾಮರ್ಥ್ಯಗಳನ್ನು ಪಡೆದುಕೊಂಡರು.

- Advertisement -

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಆನಿ, ಮಹದೇವ ಕುಲಕರ್ಣಿ, ಸಾಮಾಜಿಕ ಕಾರ್ಯಕರ್ತ ಸಿದ್ದಣ್ಣ ದುರದುಂಡಿ, ದುಂಡಪ್ಪ ಕತ್ತಿ, ಪಿ ಬಿ ಕುಲಕರ್ಣಿ, ಶಿವಾನಂದ ಕುರನಗಿ, ಸುರೇಶ ತಳವಾರ, ಎಸ್ ಎಚ್ ವಾಸನ, ಬಿ ಎಚ್ ನಿಡೋಣಿ, ಸಿಆರ್‌ಪಿ ಬಸವರಾಜ ಪಾಟೀಲ, ಪ್ರಕಾಶ ಮೊರೆ ಹಾಗೂ ಸಮೂಹ ಸಂಪನ್ಮೂಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group