spot_img
spot_img

ಅಮೃತ 2.0 ಯೋಜನೆಯಡಿ ಅರಭಾವಿ ಪಟ್ಟಣದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ.

Must Read

spot_img
- Advertisement -

140.69 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅರಭಾವಿ, ಕಲ್ಲೋಳಿ, ನಾಗನೂರು, ಮೂಡಲಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಭೂಮಿ ಪೂಜೆ.

ಮೂಡಲಗಿ – ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪಟ್ಟಣಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸಿಕೊಡುವ ಅಮೃತ ಯೋಜನೆಗೆ ಚಾಲನೆ ನೀಡಲಾಗಿದ್ದು, ಮುಂದಿನ ವರ್ಷದೊಳಗೆ ಕಾಮಗಾರಿ ಮುಗಿಯಲಿದ್ದು, ಪ್ರತಿಯೊಂದೂ ಕುಟುಂಬಗಳಿಗೆ ಕುಡಿಯುವ ನೀರು ಮನೆ ಮನೆಗಳಿಗೆ ತಲುಪಲಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಬುಧವಾರದಂದು ತಾಲೂಕಿನ ಅರಭಾವಿ ಪಟ್ಟಣದ ಆಂಜನೇಯ ದೇವಸ್ಥಾನದ ಹತ್ತಿರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಮೃತ 2.0 ಯೋಜನೆಯಡಿಯಲ್ಲಿ ಅಂದಾಜು 140.69 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅರಭಾವಿ, ಕಲ್ಲೋಳಿ, ನಾಗನೂರು ಪಟ್ಟಣ ಪಂಚಾಯತ್ ಮತ್ತು ಮೂಡಲಗಿ ಪುರಸಭೆಯ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರಿಗೆ ಕುಡಿಯುವ ನೀರು ಒದಗಿಸುವ ಮೂಲಕ ತಮ್ಮ 20 ವರ್ಷಗಳ ಕನಸು ಈಡೇರಿದಂತಾಗಿದೆ ಎಂದು ತಿಳಿಸಿದರು.

- Advertisement -

ಅರಭಾವಿ ಕ್ಷೇತ್ರದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ಅವಾಗ ಎಸ್. ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ಆಗಿನ ಸಮಯದಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಜನರಿಗೆ ಕುಡಿಯುವ ನೀರಿನಲ್ಲಿ ಅಸ್ತವ್ಯಸ್ತವಾಗಿತ್ತು. ಆಗ ನಮ್ಮ ಹಡಗಿನಾಳ ಗ್ರಾಮದ ಹಿರಿಯರೊಬ್ಬರು ಹಿಡಕಲ್ ಜಲಾಶಯದಿಂದ ನೀರು ತಗೊಂಡು ಬನ್ನಿ ಎಂದು ಸಲಹೆ ಮಾಡಿದ್ದರು. ಅಲ್ಲಿಂದ ನೀರನ್ನು ಹೇಗೆ ತರೋದು? ಎಂದು ಯೋಚಿಸಿದ್ದೆ. ಆದರೀಗ ಅವರು ಹೇಳಿದ ಮಾತಿನಂತೆ ನಮ್ಮ ಕ್ಷೇತ್ರಕ್ಕೆ ಕುಡಿಯುವ ನೀರಿನ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಜನರಿಗೆ ಕುಡಿಯಲಿಕ್ಕೆ ಶುದ್ಧ ನೀರು ಬರುತ್ತಿದೆ. ಇದಕ್ಕಾಗಿ ಅಮೃತ 2.0 ಯೋಜನೆಯನ್ನು ನಮ್ಮ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಇದ್ದ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮಂಜೂರಾತಿ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯೋಜನೆಯು ಕಾರ್ಯಗತವಾಗುತ್ತಿದೆ ಎಂದು ತಿಳಿಸಿದರು.

ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪಟ್ಟಣಗಳ ವ್ಯಾಪ್ತಿಯ ಜನರಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಉದ್ದೇಶದಿಂದ ಅಮೃತ್ ಯೋಜನೆಯಿಂದ 140.69 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ನಾಲ್ಕು ಪಟ್ಟಣಗಳ ಜನರಿಗೆ ನೀರಿನ ಯಾವುದೇ ಸಮಸ್ಯೆಗಳು ಉದ್ಭವಾಗುವುದಿಲ್ಲ. ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಶಿರಢಾನ ಗ್ರಾಮದ ಹತ್ತಿರ (ಝಂಗಟಿಹಾಳ) ಘಟಪ್ರಭಾ ನದಿಯ ಎಡ ದಂಡೆಯಲ್ಲಿ ಜಾಕವೆಲ್, ಇಂಟೆಕ್ ವೇಲ್ ಮತ್ತು ಇಂಟೆಕ ಕೊಳವೆ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

- Advertisement -

ಇನ್ನು ರಸ್ತೆಗಳ ಅಭಿವೃದ್ಧಿ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಅಮೃತ 2.0 ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರವಾಗಲಿದೆ ಎಂದು ಅವರು ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪುರಸಭೆಯಿಂದ ನಾಗರಿಕ ಸತ್ಕಾರ ಮಾಡಲಾಯಿತು.
ವೇದಿಕೆಯಲ್ಲಿ ವೇದಮೂರ್ತಿ ಶಿವಯ್ಯ ಹಿರೇಮಠ, ಅರಭಾವಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರೇಣುಕಾ ಮಾದರ, ಉಪಾಧ್ಯಕ್ಷೆ ರಾಜಶ್ರೀ ಗಂಗಣ್ಣವರ, ಮೂಡಲಗಿ ಪುರಸಭೆಯ ಅಧ್ಯಕ್ಷೆ ಖುರ್ಷದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಗಜಾನನ ಯರಗನ್ವಿ, ಬಸವಂತ ದಾಸನ್ನವರ, ಸುಭಾಸ್ ಕ್ಯತೆನ್ನವರ, ಶಂಕರ ಬಿಲಕುಂದೀ, ರಮೇಶ ಮಾದರ, ಮುತ್ತೆಪ್ಪ ಜಲ್ಲಿ, ರಾಮಪ್ಪ ಹಂದಿಗುಂದ, ರವಿ ಸಣ್ಣಕ್ಕಿ, ಹಣಮಂತ
ಗುಡಲಮನಿ, ಗಣಪತಿ ಇಳಿಗೆರಿ, ಸುಭಾಸ್ ಕುರಬೇಟ, ಪ್ರಶಾಂತ್ ನಿಡಗುಂದಿ, ಮಹಾದೇವ ಶೇಕ್ಕಿ, ಪರಸಪ್ಪ ಬಬಲಿ, ಲಾಲಸಾಬ ಸಿದ್ದಾಪುರ, ರಮೇಶ ಸಣ್ಣಕ್ಕಿ, ಭೀಮಪ್ಪ ಹಳ್ಳೂರ, ಸತ್ತೆಪ್ಪ ಕರವಾಡೆ, ಪಟ್ಟಣ ಪಂಚಾಯತ್ ಮತ್ತು ಪುರಸಭೆ ಸದಸ್ಯರು, ಮುಖ್ಯಾಧಿಕಾರಿಗಳಾದ ವಿನಾಯಕ ಬಬಲೇಶ್ವರ, ತುಕಾರಾಂ ಮಾದರ, ಚಿದಾನಂದ ಮುಗಳಖೋಡ,
ಕುಮಾರೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗರಿಕರು ಸ್ವತ್ತುಗಳಿಗೆ ಇ ಖಾತಾ ಪಡೆದುಕೊಳ್ಳಬೇಕು – ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ - ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೂ ಸಹ ಇ- ಖಾತಾ ಅಭಿಯಾನವು ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ...
- Advertisement -

More Articles Like This

- Advertisement -
close
error: Content is protected !!
Join WhatsApp Group