ಸರ್ಕಾರಿ ಉರ್ದು ಶಾಲೆ ಸುಣ್ಣ-ಬಣ್ಣದಿಂದ ಅಲಂಕರಿಸಲು ಶ್ರಮಿಸಿದ ಶಿಕ್ಷಕರ ಕಾರ್ಯ ಶ್ಲಾಘನೀಯ-ಮನ್ನಿಕೇರಿ

Must Read

ಮೂಡಲಗಿ: ಸರಕಾರದ ಅನುದಾನದ ಬರುವಿಕೆಯನ್ನು ಕಾಯದೇ ವಿದ್ಯಾರ್ಥಿಗಳಲ್ಲಿ ಸರ್ಕಾರಿ ಉರ್ದು ಶಾಲೆಯನ್ನು ಆಕರ್ಷಿಸಲು ಶಾಲೆಯ ಶಿಕ್ಷಕ ಸಮೂಹ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಅವರು ಪಟ್ಟಣದ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿ, ಸರಕಾರಿ ಉರ್ದು ಶಾಲೆಗೆ ಸುಣ್ಣ-ಬಣ್ಣದಿಂದ ಅಲಂಕರಿಸಲು ಶಾಲೆಯ ಶಿಕ್ಷಕ ಸಮೂಹ ತಮ್ಮ ಸ್ವಂತ ಹಣ ಮತ್ತು ಎಸ್.ಡಿ.ಎಂ ಸಿ ಪದಾಧಿಕಾರಿಗಳ ಹಾಗೂ ಸಾವರ್ಜನಿಕ ಸಹಕಾರದೊಂದಿಗೆ ಮುಂದಾಗಿ ಸುಮಾರು ೨ ಲಕ್ಷ ರೂ ಹಣದಲ್ಲಿ ಶಾಲೆಯನ್ನು ಬಣ್ಣದಿಂದ ಅಲಂಕರಸಿ ತನ್ನ ವಿದ್ಯಾರ್ಥಿಗಳಿಗೆ ಸುಂದರ ಹಾಗೂ ಪ್ರೇರಣಾದಾಯಕ ಶೈಕ್ಷಣಿಕ ಪರಿಸರ ಒದಗಿಸುವ ಉದ್ದೇಶದಿಂದ ಮಾದರಿಯ ಕೆಲಸವನ್ನು ಕೈಗೊಂಡಿದ್ದಾರೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ, ಕೇವಲ ಸಮಾಜ ಸೇವೆ ಹಾಗೂ ಶಿಕ್ಷಣದ ಮೇಲಿನ ಬದ್ಧತೆಯಿಂದ ಈ ಮಹತ್ವದ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಗೋಡೆಗಳು ಹೊಸ ಬಣ್ಣದಿಂದ ಚೈತನ್ಯಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಸ್ವಚ್ಛ ಹಾಗೂ ಸೌಂದರ್ಯ ಪೂರ್ಣ ಶೈಕ್ಷಣಿಕ ವಾತಾವರಣ ಒದಗಿಸಲು ಇದು ಸಹಾಯಕವಾಗಿದೆ ಎಂದರು.

ಸರ್ಕಾರಿ ಉರ್ದು ಪ್ರೌಢ ಶಾಲೆ ತನ್ನ ವಿದ್ಯಾರ್ಥಿಗಳ ಕಲಿಕೆಯ ಅನುಕೂಲಕ್ಕಾಗಿ ಶಿಕ್ಷಕರು ಮತ್ತು ಎಸ್.ಡಿ.ಎಂ ಸಿ ಪದಾಧಿಕಾರಿಗಳು ತಮ್ಮ ವೈಯಕ್ತಿಕ ಮೊತ್ತದಿಂದ ಈ ಕಾರ್ಯವನ್ನು ಮುನ್ನಡೆಸಿದ್ದು ಇತರ ಸರ್ಕಾರಿ ಶಾಲೆಗಳಿಗೂ ಮಾದರಿಯಾಗಿದೆ ಎಂದು ಬಿಇಒ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ನೀಲಮ್ಮ ಭೋವಿ ಮಾತನಾಡಿ, ನಮ್ಮ ಮಕ್ಕಳಿಗೆ ಉತ್ತಮ ವಾತಾವರಣ ಒದಗಿಸುವ ಉದ್ದೇಶದಿಂದ ನಮ್ಮ ತಂಡದವರು ಪ್ರತಿಯೊಬ್ಬರು ಸಹಕರಿಸಿದ್ದಾರೆ ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಅಜೀಜ್ ಡಾಂಗೆ ಮಾತನಾಡಿ, ಶಾಲೆಯ ಸುಧಾರಣೆ ಮತ್ತು ವಿದ್ಯಾರ್ಥಿಗಳ ಒಳ್ಳೆಯ ಭವಿಷ್ಯಕ್ಕಾಗಿ ನಮ್ಮ ಎಲ್ಲರ ಸಹಾಯ-ಸಹಕಾರ ಸದಾ ಸಿದ್ದ, ಈ ಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಲಿ ಎಂದರು.

ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದ ಶಾಲೆಯ ಮುಖ್ಯ ಶಿಕ್ಷಕಿ ನೀಲಮ್ಮ ಭೋವಿ, ಶಿಕ್ಷಕರಾದ ಎ.ಎಲ್. ತಹ್ವೀಲ್ದಾರ್, ಮಹಾಲಿಂಗ ಚ. ಒಂಟಗೋಡಿ, ಎಲ್.ಎ.ಮೆಕನಮರಡಿ, ಶ್ರೀಮತಿ ಎಂ.ಜೆ.ಇನಾಮದಾರ, ಎಂ.ಎಚ್.ಬೆಟಗೇರಿ, ಅತಿಥಿ ಶಿಕ್ಷಕಿ ಸರಸ್ವತಿ ಹೊಸಮನಿ, ದ್ವಿತೀಯ ದರ್ಜೆ ಸಹಾಯಕಿ ಭಾರತಿ ವಾಲಿಕಾರ ಮತ್ತು ಲಲಿತಾ ಪಾಟೀಲ ಹಾಗೂ ಮುಖಂಡ ಸುನೀಲ ಗಿರಡ್ಡಿ ಅವರನ್ನು ಬಿಇಒ ಮತ್ತು ಎಸ್‌ಡಿಎಂಸಿ ಯವರು ಹೂ ಮಾಲೆ ಹಾಕಿ ಅಭಿನಂದಿಸಿದರು.

ಈ ಸಮಯದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳಾದ ಅನ್ವರ ನದಾಫ್, ಅಬ್ದುಲಗಫಾರ ಡಾಂಗೆ, ಲಾಲಸಾಬ ಸಿದ್ದಾಪೂರ, ಹುಸೇನ ಥರಥರಿ, ಹಸನ್ ಥರಥರಿ ಮತ್ತು ಮುಖಂಡರಾದ ಮಲಿಕ ಹುಣಶ್ಯಾಳ, ಶರೀಫ ಪಟೇಲ್, ಇರ್ಶಾದ ಇನಾಮದಾರ, ಗಜ್ಜಬರ ಗೋಕಾಕ, ಮಲಿಕ ಪಾಶ್ಚಾಪೂರ, ಖ್ವಾಜಾ ಅತ್ತಾರ, ನಿವೃತ ಬಿ.ಎ.ಡಾಂಗೆ ಮತ್ತಿತರರು ಉಪಸ್ಥಿತರಿದ್ದರು

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group