ಮನುಷ್ಯನಿಗೆ ಆಮ್ಲಜನಕ ಎಷ್ಟು ಮುಖ್ಯವೋ ಕಾನೂನು ಅಷ್ಟೇ ಮುಖ್ಯ: ನ್ಯಾಯವಾದಿ ಎಂ ಎಸ್ ಪಾಟೀಲ

Must Read

ಸಿಂದಗಿ; ಮನುಷ್ಯನಿಗೆ ಆಮ್ಲಜನಕ ಎಷ್ಟು ಮುಖ್ಯವೊ ಅದೇ ರೀತಿ ದಿನನಿತ್ಯ ಜನರ ಮಧ್ಯದಲ್ಲಿ ನಾವು ಬದುಕಬೇಕಾದರೆ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು. ಸಂವಿಧಾನ ಎಲ್ಲರಿಗೂ ಒಂದೇ ನ್ಯಾಯ ಕೊಡುತ್ತದೆ ಎಂದು ನ್ಯಾಯಾಲಯದ ಸರಕಾರಿ ನ್ಯಾಯಾವಾದಿ ಎಂ ಎಸ್ ಪಾಟೀಲ ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗಂಡು, ಹೆಣ್ಣು, ಶ್ರೀಮಂತ, ಬಡವ ,ಕೆಳ ವರ್ಗ ಅಥವಾ ಮೇಲ್ವರ್ಗದವರು ಇರಲಿ ಎಲ್ಲರಿಗೂ ಒಂದೇ ನ್ಯಾಯ ತಪ್ಪು ಯಾರದೇ ಇದ್ದರೂ ಅವರು ಶಿಕ್ಷೆ ಅನುಭವಿಸಲೇ ಬೇಕು. ಸಾಮಾಜಿಕ ನ್ಯಾಯ ದಿನದ ಉದ್ದೇಶ ನಮ್ಮ ಸುತ್ತ ಮುತ್ತ ನಡೆಯುವ ದೌರ್ಜ್ಯನ್ಯ ಹಾಗೂ ಅನ್ಯಾಯವನ್ನು ಮೇಲೆತ್ತಿ ನೊಂದವರಿಗೆ ನ್ಯಾಯ ಒದಗಿಸಿಕೊಡುವುದೇ ಈ ಸಾಮಾಜೀಕ ನ್ಯಾಯ ದಿನ ಎಂದರು

ಸಂಗಮ ಸಂಸ್ಥೆಯ ನಿರ್ದೇಶಕರಾರ ಫಾದರ್ ಸಂತೋಷ ಮಾತನಾಡಿ, ನಮ್ಮ ದೇಶದಲ್ಲಿ ನ್ಯಾಯ ಎಂದ ತಕ್ಷಣ ನೆನಪಿಗೆ ಬರುವುದು ಭಾರತದ ಸಂವಿಧಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರರವರು ಸಂವಿಧಾನವನ್ನು ನೀಡದೆ ಹೋಗಿದ್ದರೆ ನಾವು ಯಾರೂ ಇಲ್ಲಿ ಇರುತಿರಲಿಲ್ಲ. ಸಾಮಾಜಿಕ ನ್ಯಾಯ ದಿನ ಎಂದರೆ ಗೌರವ ಘನತೆ ಮತ್ತು ಸ್ವತಂತ್ರದಿಂದ ಜೀವಿಸುವುದೆ ಸಾಮಾಜಿಕ ನ್ಯಾಯ ದಿನದ ವಿಶೇಷವಾಗಿದೆ. ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿ ಎಸ್.ಎನ್ ಕೋರವಾರ ಮಾತನಾಡಿ, ಭಾರತದ ಸಂವಿಧಾನ ಮಹಿಳೆ ಹಾಗೂ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಕೊಟ್ಟಿದೆ, ಆದರೂ ಕೂಡ ಮಹಿಳೆ ಶೋಷಣೆಗೆ ಒಳಗಾಗಿದ್ದಾಳೆ ಇವಳಿಗೆ ಸೂಕ್ತವಾದ ನ್ಯಾಯವನ್ನು ಒದಗಿಸಿ ಕೊಡುವುದು. ಶೋಷಿತರಾದ ವಿಶೇಷ ಚೇತನರು, ಹಿರಿಯರು, ವೃದ್ಧರು ಹಾಗೂ ಅನಾರೋಗ್ಯಕ್ಕೆ ಒಳಗಾದವರು ಸಮಾಜದಲ್ಲಿ ಎಲ್ಲಲ್ಲಿ ಅಸಮರ್ಥರು ಇದ್ದಾರೋ ಅವರನ್ನು ಮುಖ್ಯವಾಹಿನಿಗೆ ತರಲಿಕ್ಕೆ ಭಾರತದ ಸಂವಿಧಾನ ನಮಗೆ ಹಕ್ಕುಗಳನ್ನು ಹಾಗೂ ಅವಕಾಶ ಕೊಟ್ಟಿದೆ ಎಂದರು.

ಸಂಗಮ ಸಂಸ್ಥೆಯ ಸಹನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಮಾತನಾಡಿ, ಪ್ರತಿಯೊಬ್ಬರು ಸಮಾನ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳಾದ ಆಹಾರ, ಆರೋಗ್ಯ, ಶಿಕ್ಷಣ, ರಕ್ಷಣೆ, ವಸತಿ, ಸಾಮಾಜಿಕ ಹಕ್ಕುಗಳು, ಕಾರ್ಮಿಕರ ಹಕ್ಕುಗಳಿಗೆ ಮತ್ತು ಅವಕಾಶಗಳಿಗೆ ಅರ್ಹರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿ ಸಿ ಪಾಟೀಲ ವಕೀಲರು, ವಿವಿದ ಹಳ್ಳಿಗಳಿಂದ ಯುವಕರು, ಮಹಿಳೆಯರು, ವಿಶೇಷ ಚೇತನರು ಹಾಗೂ ಕಟ್ಟಡ ಕಾರ್ಮೀಕರು ಉಪಸ್ಥಿತರಿದ್ದರು. ಉಮೇಶ ದೊಡಮನಿ ನಿರೂಪಿಸಿದರು, ಮಲಕಪ್ಪ ಹಲಗಿ ಸ್ವಾಗತಿಸಿದರು. ಮಹೇಶ ಚವ್ಹಾಣ ವಂದಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group