ಸಿಂದಗಿ; ನಿವೇಶನವಿಲ್ಲದ ಪೌರಕಾರ್ಮಿಕರಿಗೆ ನೀಡಿದ ಭರವಸೆಯಂತೆ ಈಗಾಗಲೇ ೨೯ ಪೌರ ಕಾರ್ಮಿಕರಿಗೆ ನಿವೇಶನಗಳ ಹಕ್ಕುಪತ್ರಗಳನ್ನು ನೀಡಲಾಗಿದ್ದು ಉಳಿದ ೧೯ ಜನ ಪೌರ ಕಾರ್ಮಿಕರಿಗೆ ಈಗ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು.
ಮೋರಟಗಿ ರಸ್ತೆಯಲ್ಲಿನ ಬಿಕೆಟಿ ಹೊಟೇಲ ಎದುರಿನ ಪುರಸಭೆಗೆ ಸಂಬಂಧಿಸಿದ ಸ.ನಂ ೨೭೮ರಲ್ಲಿ ಪೌರ ಕಾರ್ಮಿಕರ ವಾಸಕ್ಕಾಗಿ ೧೯ ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದೆ ಇದರಲ್ಲಿ ೨೦ಘಿ ೩೦ ಅಳತೆಯ ನಿವೇಶನಗಳನ್ನಾಗಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ ಅವರು ಪುರಸಭೆಯಲ್ಲಿ ಸಾರ್ವಜನಿಕರ ಆಸ್ತಿಗಳು ಸುರಕ್ಷಿತವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪುರಸಭೆ ಲೋಡರ ಶಿವಾಜಿ ಕೊಡ್ಗೆ ಅವರ ಮನೆಯಲ್ಲಿಯೇ ಅವರ ಮಗ ಅಭಿಷೇಕ ಕೊಡ್ಗೆ ಲ್ಯಾಪಟಾಪ, ಪ್ರಿಂಟರ್ ಇಟ್ಟುಕೊಂಡು ಮುಖ್ಯಾಧಿಕಾರಿಯಿಂದ ಗೌಪ್ಯವಾದ ಲಾಗಿನ್ ಪಡೆದುಕೊಂಡು ಕಾನೂನು ಬಾಹಿರ ಕೆಲಸ ಮಾಡುತ್ತಿರುವ ಬಗ್ಗೆ ನಾನು ರಾತ್ರೋರಾತ್ರಿ ಅವರ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆ ಸಮೇತ ಸಿಕ್ಕುಕೊಂಡಿದ್ದಾನೆ ಎನ್ನುವ ಬಗ್ಗೆ ಪೊಲೀಸ ಠಾಣೆಗೆ ಈ ವಿಷಯ ತಿಳಿಸಿ ಸ್ಥಳಕ್ಕೆ ಬರುವಂತೆ ಕೇಳಿಕೊಂಡರು ಅವರು ಸುಳಿಯಲೇ ಇಲ್ಲ ಇದೇ ಸಂದರ್ಭದಲ್ಲಿ ತುಂಬಾ ಜನ ನನ್ನ ಸುತ್ತುವರಿದು ಭಯದ ವಾತಾವರಣ ಸೃಷ್ಟಿಸಿದರು ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಬೈಲಿನೇ ಎದ್ದು ಹೊಲ ಮೇಯ್ದಂತೆ ಆಗಿದೆ ಎಂದು ಆರೋಪಿಸಿದರು.
ಈ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅವರು ಕ್ರಮ ಜರುಗಿಸದಿದ್ದರೆ ಏಕಾಂಗಿಯಾಗಿ ಪುರಸಭೆ ಎದುರು ಧರಣಿ ನಡೆಸುವೆ ಎಂದರು.
ಪಟ್ಟಣದ ಟಿಪ್ಪು ಸುಲ್ತಾನ ಸರ್ಕಲ್ ಹತ್ತಿರ ಪುರಸಭೆ ಜಾಗೆಯಲ್ಲಿ ಬಹು ಅಂತಸ್ತಿನ ಕಟ್ಟಡಗಳು ನಿರ್ಮಾಣಗೊಂಡಿವೆ ಬಹುವರ್ಷಗಳ ಹಿಂದೆ ಈ ಜಾಗೆಯಲ್ಲಿ ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡು ಈ ಜಾಗೆಯ ಬೋಗಸ್ ಉತಾರೆಗಳನ್ನು ಸೃಷ್ಠಿಸಿ ಸ್ವಂತಕ್ಕೆ ಮಾಡಿಕೊಂಡಿದ್ದಾರೆ ಈಗ ಉತಾರಿ ರದ್ದುಪಡಿಸುವ ಠರಾವು ಮಾಡಿದೆ ಕಟ್ಟಡ ಗೂಡಂಗಡಿಗಳನ್ನು ಮಾರ್ಚ ೮ ರಂದು ಕಬ್ಜಾ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಮೊರಟಗಿ ರಸ್ತೆಯಲ್ಲಿರುವ ಪುರಸಭೆಗೆ ಸಂಬಂಧಿಸಿದ ಜಾಗೆಯೂ ಕೂಡಾ ಅತಿಕ್ರಮಣಗೊಂಡಿದೆ ಅದನ್ನು ಕೂಡಾ ತೆರವುಗೊಳಿಸಿ ಅಲ್ಲಿ ಪೌರಕಾರ್ಮೀಕರ ವಾಸಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಇಲ್ಲಿಯವರೆಗೆ ಪಟ್ಟಣದಲ್ಲಿ ತೆರವುಗೊಳಿಸಿ ಆರು ತಿಂಗಳಾದರು ಅಲ್ಲಿ ಅಭಿವೃದ್ಧಿ ಕಾರ್ಯನಡೆಸಲು ಎಸ್ ಎಫ್‌ಸಿ ಅನುದಾನದಡಿ ಪುರಸಭೆಗೆ ರೂ ೨ ಕೋಟಿ ಬಿಡುಗಡೆಗೊಂಡಿದೆ ಅದರಲ್ಲಿ ರೂ ೧ ಕೋಟಿ ನೂತನವಾಗಿ ನಿರ್ಮಾಣಗೊಳುತ್ತಿರುವ ತಾಲುಕು ಆಡಳಿತ ಸೌಧದ ಕಟ್ಟಡಕ್ಕೆ ಕಂಪೌಂಡ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ ಉಳಿದ ರೂ ೧ ಕೋಟಿಯಲ್ಲಿ ಬಸವೇಶ್ವರ ವೃತ್ತದಿಂದ ಡಾ ಅಂಬೇಡ್ಕರ ವೃತ್ತದವರೆಗೆ ಪಾದಾಚಾರಿ ಸುಗಮ ಸಂಚಾರಕ್ಕೆ ಪೇವರ್ಸ ಹಾಕಲಾಗುವುದು ಟೆಂಡರ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.