ಸಿಂದಗಿ; ಅಂಗವಿಕಲರ ಕುಂದುಕೊರತೆಗಳ ಬಗ್ಗೆ ಸಭೆ ಕರೆಯುವಂತೆ ಆಗ್ರಹಿಸಿ ಅಂಗವಿಕಲರ ಪಾಲಕರ ಒಕ್ಕೂಟ ವತಿಯಿಂದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಅಶೋಕ ವಾಲೀಕಾರ ಮಾತನಾಡಿ, ಅಂಗವಿಕಲರ ಹಕ್ಕುಗಳ ರಕ್ಷಣೆ ಮತ್ತು ಅನುದಾನದ ಸದ್ಬಳಕೆ ಹಾಗೂ ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿ ಮತ್ತು ಅಂಗವಿಕಲರ ಹಲವಾರು ಸಮಸ್ಯೆಗಳು ಅರಿಯುವುದು ಜೊತೆಗೆ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ತಾಲೂಕು ಮಟ್ಟದ ವಿವಿಧ ಇಲಾಖೆಯಲ್ಲಿ ಅನುಷ್ಠಾನಗೊಳಿಸಿರುವ ಸೌಲಭ್ಯ ವಂಚಿತ ಅಂಗವಿಕಲರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಅಂಗವಿಕಲರ ಕುಂದುಕೊರತೆಗಳನ್ನು ನಿವಾರಿಸುವ ಕುರಿತು ಪ್ರತಿ ತಿಂಗಳು ೩ನೇ ಸೋಮವಾರದಂದು ಸಭೆ ನಡೆಸುವಂತೆ ಸರಕಾರದ ಸುತ್ತೋಲೆಯ ಮೇರೆಗೆ ಈ ಕುರಿತು ಚರ್ಚಿಸಲು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು ಮತ್ತು ಸರಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಒಳಗೊಂಡಂತೆ ಸಭೆಯನ್ನು ಏರ್ಪಡಿಸಬೇಕು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಪ್ರದೀಪಕುಮಾರ ಮಾತನಾಡಿ, ತಾಲೂಕಿನಲ್ಲಿರುವ ಅಂಗವಿಕಲರ ಕುಂದುಕೊರತೆಗಳ ಬಗ್ಗೆ ಹಾಗೂ ಪ್ರತಿಶತ ೫ ಅನುದಾನ ಬಗ್ಗೆ ಶೀಘ್ರವಾಗಿ ಸಭೆ ಕರೆಯುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ವಿಠ್ಠಲ ಕರ್ಜಗಿ, ಉಪಾಧ್ಯಕ್ಷ ಬಂದೆನವಾಜ ಕಲ್ಲೂರ, ಕಾರ್ಯದರ್ಶಿ ಮಲ್ಲಿಕಾರ್ಜುನ ಕರ್ನಾಳ, ರಾಜಕುಮಾರ ಚಾಂದಕವಟೆ, ಸುರೇಶ ಜವಳಗಿ, ಬಾಗಪ್ಪ ಹರಿಜನ, ಮಲ್ಲಪ್ಪ ದೊಡಮನಿ, ಶಿವಾನಂದ ಆನಗೊಂಡ, ಗುರುನಾಥ ಬಂಡಿವಡ್ಡರ, ಸಿದ್ದಾರ್ಥ ಚಾಕರೆಕಲ್ಲಪ್ಪ ಕ್ಷತ್ರಿ, ಸೇರಿದಂತೆ