ಪ್ರಾಣಾಯಾಮ ಸದುಪಯೋಗಪಡಿಸಿಕೊಳ್ಳಿ – ಯೋಗ ಗುರು ಸಿದ್ದಪ್ಪ ಸಾರಪುರಿ

Must Read

ಬೆಳಗಾವಿ – ಪ್ರಾಣಾಯಾಮದಿಂದ ರಕ್ತ ಪರಿಚಲನೆ ಸುಧಾರಣೆ ಆಗುತ್ತದೆ. ಹಾಗೂ ರಕ್ತದಲ್ಲಿ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ. ಹೃದಯರಕ್ತನಾಳಗಳು ಬಲಗೊಂಡು ಆರೋಗ್ಯ ವೃದ್ಧಿಯಾಗುತ್ತದೆ. ಅಧಿಕರಕ್ತದೊತ್ತಡ ನಿಯಂತ್ರಣವಾಗುತ್ತದೆ. ಪ್ರಾಣಾಯಾಮ ಎಂದರೆ ಉಸಿರಾಟದ ನಿಯಂತ್ರಣ ಎಂಬುದಾಗಿದೆ ಎಂದು ಯೋಗಗುರು ಸಿದ್ದಪ್ಪ ಸಾರಪುರಿ ಹೇಳಿದರು.

ಫ ಗು ಹಳಕಟ್ಟಿ ಭವನದಲ್ಲಿ ವಾರದ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಪಾಲ್ ಭಾತಿ ಎರಡು ಮೂಗಿನ ಹೊಳ್ಳೆಗಳಿಂದ ಗಾಳಿಯನ್ನು ಉಸಿರಾಡಿ ಸ್ವಲ್ಪ ಶಕ್ತಿಯುತ ಕ್ರಿಯೆಯೊಂದಿಗೆ ಗಾಳಿಯನ್ನು ಬಿಡಿಸಿ ಮತ್ತೆಮತ್ತೆಉಸಿರಾಡಿ ದೇಹದಿಂದ ಹೊರಬರುವ ಗಾಳಿಯನ್ನು ಅನುಭವಿಸಲು ನಿಮ್ಮ ಕೆಲ ಹೊಟ್ಟೆಯ ಮೇಲೆ ನಿಮ್ಮ ಕೈಯನ್ನು ಹಾಕಬಹುದು. ಕಪಾಲ್ ಎಂದರೆ ತಲೆಬುರುಡೆ ಮತ್ತು ಭಾತಿ ಎಂದರೆ ಹೊಳೆಯುವುದು ಅಥವಾ ಪ್ರಕಾಶಮಾನ ವಾಗುವುದು. ಈ ಅಭ್ಯಾಸವು ಮುಂಭಾಗದ ಮೆದುಳನ್ನು ಶುದ್ಧೀಕರಿಸಲು ಮತ್ತು ಆಲೋಚನೆಯ ಸ್ಪಷ್ಟತೆಯನ್ನು ತರಲು ವಿನ್ಯಾಸಗೊಳಿಸಲಾಗಿದೆ. ನಿರ್ವಿಶೀಕರಣ ಉಸಿರಾಟದ ಕಾರ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಎಂದರು

ಮುಖ್ಯಅತಿಥಿಗಳಾಗಿ ಮನೋಹರ ಪುಡಕಲಕಟ್ಟಿ ಆಗಮಿಸಿದ್ದರು, ದಾಸೋಹ ಸೇವೆ ಶಿವಕುಮಾರ ಅರಳಿ ಸೇವೆಗೈದರು. ಮಹಾದೇವಿ ಅರಳಿ ಅವರು ಪ್ರಾರ್ಥನೆ ನಡೆಸಿ ಕೊಟ್ಟರು .ಆರಂಭದಲ್ಲಿ ಬಸವರಾಜ ಬಿಜ್ಜರಗಿ, ವಿ ಕೆ ಪಾಟೀಲ್, ಅಕ್ಕಮಹಾದೇವಿ ತೆಗ್ಗಿ ,ಬಿ ಪಿ ಜವಣಿ, ಅಕ್ಕಮಹಾದೇವಿ ಅರಳಿ, ವಚನ ವಿಶ್ಲೇಷಣೆ ಮಾಡಿದರು.

ಸಂಗಮೇಶ ಅರಳಿ ಅವರು ಕಾಯ೯ಕ್ರಮ ನಡೆಸಿಕೊಟ್ಟರು.ರಮೇಶ ಕಳಸಣ್ಣವರ, ಸತೀಶ ಪಾಟೀಲ,ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ,ವಿಜಯ ಹುದಲಿಮಠ,ಸುನೀಲ ಸಾಣಿಕೊಪ್ಪ, ಮಾತನಾಡಿದರು. ಸೋಮಶೇಖರ ಕಟ್ಟಿ, ಶಿವಾನಂದ ನಾಯಕ,ಅನೀಲ ರಘಶೆಟ್ಟಿ,ಬಸವರಾಜ ಮತ್ತಿಕಟ್ಟಿ ವಿರುಪಾಕ್ಷಿ ದೊಡ್ಡಮನಿ ,ಜ್ಯೋತಿಬಾದಾಮಿ, ಸುಜಾತ ಮತ್ತಿಕಟ್ಟಿ , ಸುದೀಪ್ ಪಾಟೀಲ್ ,ಮಂಹಾತೇಶ್ ಮೆಣಸಿನಕಾಯಿ, ಶೇಖರ ವಾಲಿಇಟಗಿ,ಬಾಬಣ್ಣ ತಿಗಡಿ, ಗಂಗಪ್ಪಉಣಕಲ, ಶರಣ ಶರಣೆಯರು ಉಪಸ್ಥಿತರಿದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group