ಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಲಗಿ ತಾಲೂಕಾ ವಲಯದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಡಾ|| ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಜರುಗುವ ನವಜೀವನೋತ್ಸವ ಕಾರ್ಯಕ್ರಮ ಮಂಗಳವಾರ ಮಾ.೧೧ ರಂದು ಮುಂಜಾನೆ ೧೦=೩೦ಕ್ಕೆ ತಾಲೂಕಿನ ಗುನಜಟ್ಟಿಯ ಭಗೀರಥ ನಗರದಲ್ಲಿನ ಜೈ ಹನುಮಾನ ಮಂದಿರದಲ್ಲಿ ಜರುಗಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ನಾಗನೂರದ ಮಾತೋಶ್ರೀ ಕಾವ್ಯಶ್ರೀ ಅಮ್ಮನವರರು ವಹಿಸುವರು, ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಉದ್ಘಾಟಿಸುವರು, ಗುಜನಟ್ಟಿ ಗ್ರಾ.ಪಂ ಅಧ್ಯಕ್ಷ ಕಲ್ಲಪ್ಪ ಮುಕ್ಕಣ್ಣವರ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಅತಿಥಿಗಳಾಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯ ಭರಮಣ್ಣ ಉಪ್ಪಾರ, ಧಾರವಾಡ ಪ್ರಾದೇಶಿಕ ಕಛೇರಿ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಭಾಸ್ಕರ್ ಎನ್, ಗುಜನಟ್ಟಿ ಮುಖಂಡರಾದ ರಾಮಪ್ಪ ಅರಭಾವಿ, ಶಾಬಪ್ಪ ಬಂಡ್ರೊಳ್ಳಿ, ಹನಮಂತ ರೊಡಲಕ್ಕನ್ನವರ, ಹನುಮಂತ ಹುಲಕುಂದ, ಜಗದೀಶ ಬಂಡ್ರೋಳ್ಳಿ ಭಾಗವಹಿಸುವರು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಲಗಿ ತಾಲೂಕಾ ವಲಯದ ಯೋಜನಾಧಿಕಾರಿ ರಾಜು ನಾಯ್ಕ ಮತ್ತು ಶಿವಾನಂದ ಶಿಮೇಗೋಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.