ರಂಗಸಿರಿ ಮತ್ತು ನಾಲ್ಕು ಕವನ ಸಂಕಲನಗಳು ಲೋಕಾರ್ಪಣೆ

Must Read

ಕರ್ನಾಟಕ ರಾಜ್ಯ ಬರಹಗಾರರ ಸಂಘದ 5ನೇ ವರ್ಷದ ವಾರ್ಷಿಕೊತ್ಸವ ಪ್ರಯುಕ್ತ ನಡೆದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಹಾಸನದ ಸಾಹಿತಿ ನಾಟಕಕಾರ ಗೊರೂರು ಅನಂತರಾಜು ಅವರ ರಂಗಭೂಮಿ ಕುರಿತಾದ ಪುಸ್ತಕ ರಂಗ ಸಿರಿ ಕೃತಿಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧು ನಾಯ್ಕ ಲಂಬಾಣಿ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಸಮಾರ೦ಭದಲ್ಲಿ ಲೋಕರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಈಗಾಗಲೇ 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಗೊರೂರು ಅನಂತರಾಜು ಹಲವಾರು ಉದಯೋನ್ಮುಖ ಕವಿ ಸಾಹಿತಿಗಳ ಕೃತಿಗಳ ವಿಮರ್ಶೆ ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ. ರಂಗಭೂಮಿ ಯಲ್ಲೂ ಸಾಕಷ್ಟು ಕ್ರಿಯಾಶೀಲರಾಗಿ ರಂಗದ ಮೇಲೆ ಪ್ರದರ್ಶಿತ ನಾಟಕಗಳನ್ನು ನೋಡಿ ವಿಮರ್ಶೆಯನ್ನು ಮಾಡಿ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನನ್ನ ಒಂದು ಮಿನಿ ಕಾದಂಬರಿ ಸುಡುಗಾಡು ಕಥೆ
ನಾಟಕವಾಗಿ ರೂಪಾಂತರಿಸಿದ್ದಾರೆ. ಇದನ್ನು ರಂಗದ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಇದೇ ವೇದಿಕೆಯಲ್ಲಿ ಆನಂದ ಕುಮಾರ್ ಜಿ. ವಿ. ಯಾದವ್ ಅವರ ಭಾವದ ಬೆಳಕು, ಕವನ ಸಂಕಲನ,
ನಾಗರಾಜ ಟಿ.ವಿ. ಅವರ ಕವನ ಸಂಕಲನ ಮೂಕ ಸಾಕ್ಷಿಗಳು, ವೆಂಕಣ್ಣ ಮಾಳೆಕೊಪ್ಪ ಅವರ ಧರಣಿ ಕವನ ಸಂಕಲನ, ಹಾಲೇಶ್ ಹಕ್ಕಂಡಿ ಅವರ ಅಂಬರ ಮಣಿಯ ಶೃಂಗಾರ ಕವನ ಸಂಕಲನ ಮತ್ತು ಪ್ರಮೀಳಾ ಪಾಟೀಲ ಎಸ್ ಬಿಬ್ಬಳ್ಳಿ ಅವರ ಬೆಳದಿಂಗಳು ಕವನ ಸ೦ಕಲನ ಲೋಕಾರ್ಪಣೆಗೊಂಡವು

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group