ಚಿಟಗಿನ ಕೊಪ್ಪದಲ್ಲಿ ಎನ್.ಎಸ್.ಎಸ್.ಶಿಬಿರ

0
39

ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಬೇವೂರಿನ ಪಿ.ಎಸ್.ಎಸ್ ಕಾಲೇಜು ವತಿಯಿಂದ ಎನ್.ಎಸ್.ಎಸ್.ವಾಷಿ೯ಕ ಶಿಬಿರವನ್ನು ಚಿಟಗಿನ ಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿ.ಜಿ. ಮಾಗನೂರ ವಹಿಸಿಕೊಳ್ಳುವರು.

ಕಾಯ೯ಕ್ರಮದ ಉದ್ಘಾಟನೆಯನ್ನು ಬಾಗಲಕೋಟೆಯ ಶಾಸಕರಾದ ಎಚ್.ವಾಯ್.ಮೇಟಿಯವರು ನೆರವೇರಿಸುವರು. ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಮೀನಗಡದ ಪಿ.ಎ‌ಸ್. ಐ. ಶ್ರೀಮತಿ ಜ್ಯೋತಿ ವಾಲೀಕಾರ , ಅತಿಥಿಗಳಾಗಿ ವಾಯ್.ಎಚ್.ಬೆನಕನವಾರಿ, ಮುತ್ತು ಕೆ. ಬಡಿಗೇರ ಭಾಗವಹಿಸುವರು.

ಏಳು ದಿನಗಳವರೆಗೆ ಜರುಗುವ ಈ ಶಿಬಿರದಲ್ಲಿ ಮಹಾವಿದ್ಯಾಲಯದ 50 ವಿದ್ಯಾಥಿ೯ಗಳು ಶಿಬಿರಾಥಿ೯ಗಳಾಗಿ ಭಾಗಿಯಾಗುವರು ಎಂದು ಪ್ರಾಚಾಯ೯ರಾದ ಡಾ.ಜ.ಗು.ಭೈರಮಟ್ಟಿ, ಶಿಬಿರದ ಯೋಜನಾಧಿಕಾರಿಗಳಾದ ಜಿ.ಎಸ್.ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here