ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶವು ಶೇಕಡಾ ಶೇ.೭೫ ರಷ್ಟಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ.ಎಮ್.ಎಸ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜಿಗೆ ರಾಜಶ್ರೀ ಜಟ್ಟೆನ್ನವರ ಶೇ.೯೨.೬೬% ಮತ್ತು ಜೀಯಾ ನಾಯಕವಾಡಿ ಶೇ.೯೨.೬೬% ಪ್ರಥಮ, ಅಂಜಲಿ ನಿಂಗನೂರೆ ಶೇ.೯೨.೧೬% ಮತ್ತು ಯಲ್ಲವ್ವಾ ಕಪರಟ್ಟಿ ಶೇ.೯೨.೧೬% ದ್ವಿತೀಯ, ಪದ್ಮಶ್ರೀ ಬಡಿಗೇರ ಶೇ.೯೧.೧೬%, ರಾಧಿಕಾ ಮುರಗಜ್ಜಗೋಳ ಶೇ.೯೧.೧೬% ಮತ್ತು ಶ್ರೇಯಾ ದೇವರ ಶೇ.೯೧.೧೬% ತೃತೀಯ ಸ್ಥಾನವನ್ನು
ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ರಾಜಶ್ರೀ ಜಟ್ಟೇನ್ನವರ ಶೇ.೯೨.೬೬% ಪ್ರಥಮ, ಪದ್ಮಶ್ರೀ ಬಡಿಗೇರ ಶೇ.೯೧.೧೬% ಮತ್ತು ರಾಧಿಕಾ
ಮುರಗಜ್ಜಗೋಳ ಶೇ.೯೧.೧೬% ದ್ವಿತೀಯ, ಐಶ್ವರ್ಯ ಪಾಟೀಲ ಶೇ.೯೦.೮% ತೃತೀಯ ಸ್ಥಾನ, ಒಟ್ಟು ಕಲಾ ವಿಭಾಗದಲ್ಲಿ ೧೩ ಜನ ಉನ್ನತ ಶ್ರೇಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಜೀಯಾ ನಾಯಕವಾಡಿ ಶೇ.೯೨.೬೬% ಪ್ರಥಮ, ಅಂಜಲಿ ನಿಂಗನೂರೆ ಶೇ.೯೨.೧೬% ಮತ್ತು ಯಲ್ಲವ್ವಾ ಕಪರಟ್ಟಿ ಶೇ.೯೨.೧೬% ದ್ವಿತೀಯ, ಶ್ರೇಯಾ ದೇವರ ಶೇ.೯೧.೧೬% ತೃತೀಯ ಸ್ಥಾನ ಒಟ್ಟು ವಿಜ್ಞಾನ ವಿಭಾಗದಲ್ಲಿ ೧೩ ಜನ ಉನ್ನತ ಶ್ರೇಣಿಯಲ್ಲಿ
ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಲಕ್ಷ್ಮಿ ಹಳಬರ ಶೇ.೮೭% ಪ್ರಥಮ, ಕೀರ್ತನಾ ಪತ್ತಾರ ಶೇ.೮೬.೩೩% ದ್ವಿತೀಯ, ವಿನಾಯಕ ಕೊಡಗನೂರ ಶೇ.೮೩.೩೩% ತೃತೀಯ ಸ್ಥಾನ, ಒಟ್ಟಾರೆಯಾಗಿ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೧೪೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ೫೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ,
ಸಾಧನೆಗೈದ ಈ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಚೇರಮನ್ನರಾದ ವೆಂಕಟೇಶ ಆರ್.ಸೋನವಾಲ್ಕರ, ವ್ಹಾ.ಚೇರಮನ್ನರಾದ ರವೀಂದ್ರ ಪಿ.ಸೋನವಾಲ್ಕರ ಹಾಗೂ ಸಂಸ್ಥೆಯ ನಿರ್ದೇಶಕರು, ಪ್ರಾಚಾರ್ಯರಾದ ಎಮ್.ಎಸ್.ಪಾಟೀಲ, ಉಪನ್ಯಾಸಕರು ಮತ್ತು
ಕಾಲೇಜಿನ ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿ
ಅಭಿನಂದಿಸಿದ್ದಾರೆ.