ಟೈಟಾನಿಕ್
1912 ರಲ್ಲಿ ಇಂಗ್ಲೆಂಡಿನ ಸೌತ್‌ಹ್ಯಾಂಪ್ಟನ್‌ನಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. ‘ಮುಳುಗಲಾರದ ಹಡಗು’ ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್‌ನ ದಾರುಣ ಅಂತ್ಯ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲೊಂದು.
‘ಸ್ಟಾರ್ ಲೈನ್’ ಎಂಬ ಸಾರಿಗೆ ಸಂಸ್ಥೆಯ ಒಡೆತನದಲ್ಲಿದ್ದ ಟೈಟಾನಿಕ್ ಅನ್ನು ಬೆಲ್‌ಫಾಸ್ಟ್‌ನ ಹಾರ್ಲಂಡ್ ಅಂಡ್ ವುಲ್ಫ್ ಎಂಬ ಸಂಸ್ಥೆ ನಿರ್ಮಿಸಿತ್ತು. ಆ ಸಮಯದ ಅತ್ಯಂತ ದೊಡ್ಡ ಹಾಗೂ ವೈಭವೋಪೇತ ಹಡಗುಗಳಲ್ಲಿ ಟೈಟಾನಿಕ್ ಅಗ್ರಸ್ಥಾನ ಪಡೆದಿತ್ತು. ಇಷ್ಟು ಭರ್ಜರಿಯಾಗಿದ್ದ ಹಡಗು ಮುಳುಗುವುದು ಅಸಾಧ್ಯವೆಂದೇ ಎಲ್ಲರ ಭಾವನೆಯಾಗಿತ್ತು.
ತನ್ನ ಮೊದಲ ಯಾನದಲ್ಲಿ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಟೈಟಾನಿಕ್ 1912 ರ ಏಪ್ರಿಲ್ 14 – 15 ರ ಮಧ್ಯರಾತ್ರಿ ನ್ಯೂಫೌಂಡ್‌ಲ್ಯಾಂಡಿನ ತೀರದಿಂದ ಸುಮಾರು 640 ಕಿಲೋಮೀಟರ್ ದಕ್ಷಿಣದಲ್ಲಿ ನೀರ್ಗಲ್ಲೊಂದಕ್ಕೆ ಡಿಕ್ಕಿ ಹೊಡೆಯಿತು. ನೀರ್ಗಲ್ಲು ಅಪ್ಪಳಿಸಿದ ಮೂರು ಗಂಟೆಗಳೊಳಗೆಯೇ, ಏಪ್ರಿಲ್ 15 ರ ಮುಂಜಾನೆ 2.20 ರ ಸಮಯದಲ್ಲಿ ಟೈಟಾನಿಕ್ ಸುಮಾರು 1500 ಪ್ರಯಾಣಿಕರೊಡನೆ ಸಂಪೂರ್ಣವಾಗಿ ಮುಳುಗಿಹೋಯಿತು.
ಟೈಟಾನಿಕ್‌ನಲ್ಲಿದ್ದ ಸುಮಾರು 2220 ಪ್ರಯಾಣಿಕರಲ್ಲಿ 1700 ಜನರಿಗೆ ಮಾತ್ರ ಸಾಲುವಷ್ಟು ಲೈಫ್ ಬೋಟುಗಳಿದ್ದದ್ದು ಈ ದುರಂತವನ್ನು ಮತ್ತಷ್ಟು ಘೋರವನ್ನಾಗಿಸಿತು. ಅಲ್ಲಿ ಲಭ್ಯವಿದ್ದ ಕೆಲವೇ ಲೈಫ್ ಬೋಟುಗಳನ್ನೂ ಸಹ ಸರಿಯಾಗಿ ಉಪಯೋಗಿಸಿಕೊಳ್ಳಲಾಗಲಿಲ್ಲ; ಅನೇಕ ಲೈಫ್ ಬೋಟುಗಳು ತಮ್ಮ ಪೂರ್ಣ ಸಾಮರ್ಥ್ಯಕ್ಕಿಂತ ಕಡಿಮೆ ಜನರನ್ನು ಕೊಂಡೊಯ್ದವು. ಕಡೆಗೆ ಈ ದುರಂತದಲ್ಲಿ ಬದುಕುಳಿದವರ ಸಂಖ್ಯೆ ಕೇವಲ 705.
ಲೈಫ್ ಬೋಟುಗಳಲ್ಲಿ ಹೊರಟ ಈ ಜನರನ್ನು ‘ಕಾರ್ಪೇಥಿಯಾ’ ಎಂಬ ಹಡಗು ರಕ್ಷಿಸಿತು. ಈ ಹಡಗು ಟೈಟಾನಿಕ್‌ನಿಂದ ಕಳುಹಿಸಲ್ಪಟ್ಟಿದ್ದ ಅಪಾಯದ ಸಂಕೇತವನ್ನು ಗ್ರಹಿಸಿ ಸಹಾಯಕ್ಕಾಗಿ ತೆರಳುತ್ತಿತ್ತು. ಆದರೆ ಟೈಟಾನಿಕ್ ನೀರ್ಗಲ್ಲಿಗೆ ಡಿಕ್ಕಿ ಹೊಡೆದ ಸಮಯದಲ್ಲಿ ಅದರ ಸಮೀಪದಲ್ಲೇ ಇದ್ದ ‘ಕ್ಯಾಲಿಫೋರ್ನಿಯನ್’ ಎಂಬ ನೌಕೆಯ ರೇಡಿಯೋ ಗ್ರಾಹಕ ನಿಷ್ಕ್ರಿಯವಾಗಿದ್ದರಿಂದ ಟೈಟಾನಿಕ್‌ಗೆ ಸರಿಯಾದ ಸಮಯದಲ್ಲಿ ನೆರವು ದೊರಕಲಿಲ್ಲ.
ಟೈಟಾನಿಕ್‌ನಲ್ಲಿದ್ದ ಮೊದಲ ಮತ್ತು ಎರಡನೇ ದರ್ಜೆ ಪ್ರಯಾಣಿಕರಲ್ಲಿ ಬಹುತೇಕ ಎಲ್ಲ ಮಕ್ಕಳು ಹಾಗೂ ಮಹಿಳೆಯರು ಉಳಿದುಕೊಂಡರು. ತೃತೀಯ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳಲ್ಲಿ ಸುಮಾರು ಮೂರನೇ ಎರಡು ಭಾಗದಷ್ಟು ಬದುಕುಳಿಯಲಿಲ್ಲ. ಹಡಗಿನಲ್ಲಿದ್ದ ಅನೇಕ ಆಗರ್ಭ ಶ್ರೀಮಂತರೂ ಈ ದುರಂತದಲ್ಲಿ ಜೀವತೆತ್ತರು. ಇವರಲ್ಲಿ ಟೈಟಾನಿಕ್‌ನಲ್ಲಿದ್ದ ಅತ್ಯಂತ ಶ್ರೀಮಂತ ವ್ಯಕ್ತಿ ಜಾನ್ ಜೇಕಬ್ ಆಸ್ಟರ್, ಟೈಟಾನಿಕ್‌ನ ಕ್ಯಾಪ್ಟನ್ ಎಡ್ವರ್ಡ್ ಜೆ. ಸ್ಮಿತ್, ಟೈಟಾನಿಕ್‌ನ ವಿನ್ಯಾಸಕಾರ ಥಾಮಸ್ ಆಂಡ್ರೂಸ್, ವಾಣಿಜ್ಯೋದ್ಯಮಿಗಳಾದ ಇಸಿಡಾರ್ ಸ್ಟ್ರಾಸ್, ಬೆಂಜಮಿನ್ ಗುಗನ್‌ಹೀಮ್ ಸೇರಿದಂತೆ ಅನೇಕ ಪ್ರಸಿದ್ಧರೂ ಇದ್ದರು.
ಈ ದುರಂತದ ಪರಿಣಾಮವಾಗಿ ನೌಕಾಯಾನದ ಸುರಕ್ಷತೆಯ ಬಗೆಗೆ ವಿಶ್ವದ ಗಮನ ಹರಿಯಿತು. ಪ್ರತಿಯೊಂದು ಹಡಗಿನಲ್ಲೂ ಎಲ್ಲ ಪ್ರಯಾಣಿಕರಿಗೂ ಸಾಲುವಷ್ಟು ಲೈಫ್‌ಬೋಟುಗಳಿರಬೇಕಾದುದನ್ನು ಕಡ್ಡಾಯಗೊಳಿಸಲಾಯಿತು. ‘ಕ್ಯಾಲಿಫೋರ್ನಿಯನ್’ ನೌಕೆಯ ರೇಡಿಯೋ ಗ್ರಾಹಕ ಕಾರ್ಯನಿರತವಾಗಿದ್ದಿದ್ದಲ್ಲಿ ಟೈಟಾನಿಕ್ ದುರಂತದ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿತ್ತೆಂಬುದನ್ನು ಮನಗಂಡ ನಂತರ ಹಡಗುಗಳಲ್ಲಿನ ಸಂಪರ್ಕ ಸಾಧನಗಳು ದಿನದ 24 ಗಂಟೆಗಳೂ ಚಾಲನೆಯಲ್ಲಿರಬೇಕೆಂಬ ನಿಯಮವನ್ನೂ ಜಾರಿಗೆ ತರಲಾಯಿತು. ಸಮುದ್ರದಲ್ಲಿ ನೀರ್ಗಲ್ಲುಗಳ ಕುರಿತು ಮಾಹಿತಿನೀಡಿ ಅಪಘಾತಗಳನ್ನು ತಡೆಯಲು ಅಂತರರಾಷ್ಟ್ರೀಯ ಐಸ್ ಪಟ್ರೋಲ್ ಅನ್ನು ಸ್ಥಾಪಿಸಲಾಯಿತು.
ಅತ್ಯಂತ ಐಷಾರಾಮಿ ಹಾಗೂ ದುರಂತ ಅಂತ್ಯ ಕಂಡ ಟೈಟಾನಿಕ್ ಹಡಗಿನ ಬಗ್ಗೆ ಇತ್ತೀಚೆಗೆ ನಮ್ಮಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಅಟ್ಲಾಂಟಿಕ್‌ದಲ್ಲಿ ಮುಳುಗಿದ ಟೈಟಾನಿಕ್ ಹಡಗಿನ ಅವಶೇಷಗಳನ್ನು ಪತ್ತೆಹಚ್ಚಲು ಜಲಾಂತರ್ಗಾಮಿ ನೌಕೆಯನ್ನು ಕಳುಹಿಸಲಾಯಿತು. ಇದು ಅನೇಕ ಅಚ್ಚರಿಗೊಳಿಸುವ ಮಾಹಿತಿಗಳನ್ನು ಬಹಿರಂಗಪಡಿಸಿದೆ.
1912 ರ ಏಪ್ರಿಲ್ 10 ರಂದು ನ್ಯೂಯಾರ್ಕ್‌ಗೆ ತನ್ನ ಮೊದಲ ಪ್ರಯಾಣ ಪ್ರಾರಂಭಿಸಿದ ಟೈಟಾನಿಕ್, 4 ದಿನಗಳ ಪ್ರಯಾಣದ ನಂತರ ಹಡಗು ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಸಾವಿರಾರು ಪ್ರಯಾಣಿಕರ ಸಾವಿಗೆ ಕಾರಣವಾಯಿತು.
ಟೈಟಾನಿಕ್ ಹಡಗಿನ ಅವಶೇಷಗಳನ್ನು ಪತ್ತೆಹಚ್ಚಲು ಜಲಾಂತರ್ಗಾಮಿ ನೌಕೆಯನ್ನು ಕಳುಹಿಸಲಾಯಿತು. ಇದು ಜನರ ಪ್ರಾಣವನ್ನು ಉಳಿಸಬಹುದಾಗಿದ್ದ ಅನೇಕ ವಿಷಯಗಳ ಬಗ್ಗೆ ತಿಳಿಸಿದೆ. ಇಲ್ಲಿವೆ ಆ ಕಾರಣಗಳು…
ಲೈಫ್ ಬೋಟ್‌ಗಳ ಕೊರತೆ
ಟೈಟಾನಿಕ್ ಹಡಗಿನಲ್ಲಿ ಲೈಫ್ ಬೋಟ್‌ಗಳ ಕೊರತೆ ಇತ್ತು. ವಾಸ್ತವವಾಗಿ, ಹಡಗಿನ ವಿನ್ಯಾಸವು ಸುಮಾರು 64 ಲೈಫ್ ಬೋಟ್ ಗಳನ್ನು ಆರಾಮವಾಗಿ ಸಾಗಿಸಬಹುದಾದ ಸಾಮರ್ಥ್ಯ ಹೊಂದಿತ್ತು ಎನ್ನಲಾಗಿದೆ. ಹೆಚ್ಚಿನ ಸಂಖ್ಯೆಯ ಬೋಟ್‌ಗಳ ಕೊರತೆ ಟೈಟಾನಿಕ್ ಹಡಗು ಮುಳಗಲು ಕಾರಣವಾಯಿತು.
ದೋಣಿಯನ್ನು ಖಾಲಿ ಬಿಡುವುದು
ಕೆಲವೇ ಲೈಫ್‌ಬೋಟ್‌ಗಳು ಮಾತ್ರ ಇದ್ದ ಕಾರಣ, ಹೆಚ್ಚಿನ ಜನರನ್ನು ಸಾಗಿಸದೇ ಹಾಗೆ ಆಯ್ದ ಕೆಲವರನ್ನು ಮಾತ್ರ ಕರೆದೊಯ್ಯಲಾಯಿತು. ಈ ಕಾರಣದಿಂದಲೇ ಅನೇಕ ಜನರು ಸಾವನ್ನಪ್ಪಿದರು.
ನಿರ್ಲಕ್ಷಿಸಲಾದ ಎಚ್ಚರಿಕೆ
ಟೈಟಾನಿಕ್ ಅಪಘಾತಕ್ಕೀಡಾಗುವ ಮೊದಲು, ಮುಂದೆ ಮಂಜುಗಡ್ಡೆಗಳ ಎಚ್ಚರಿಕೆ ಇತ್ತು. ಆದರೆ ಹಡಗಿನ ಸದಸ್ಯರು ಅದನ್ನು ನಿರ್ಲಕ್ಷಿಸಿದರು.
ಹಡಗು ಹಿಮ್ಮುಖವಾಗಿ ಓಡಿಸಲು ಆದೇಶ
ಅಧಿಕಾರಿಗಳು 30 ಸೆಕೆಂಡುಗಳ ಹಿಂದೆ ಮಂಜುಗಡ್ಡೆಯನ್ನು ನೋಡಿದ ನಂತರ ಎಂಜಿನ್ ಅನ್ನು ಹಿಮ್ಮುಖವಾಗಿ ಓಡಿಸಲು ಆದೇಶ ನೀಡಿದ್ದರು ಎಂದು ಹೇಳಲಾಗುತ್ತದೆ. ವಾಸ್ತವವಾಗಿ, 30 ಸೆಕೆಂಡ್‌ಗಳ ಸಮಯ ಇಂತಹ ದುರಂತ ತಪ್ಪಿಸಲು ಸಾಧ್ಯವಾಗಲಿಲ್ಲ.
ದುರ್ಬೀನುಗಳ ಕೊರತೆ
ಹಡಗಿನಲ್ಲಿ ದುರ್ಬೀನಿನ ಕೊರತೆಯು ಕೂಡ ಎದುರಿಗಿದ್ದ ಮಂಜುಗಡ್ಡೆ ಅಪಾಯವನ್ನು ಊಹಿಸಲು ಸಾಧ್ಯವಾಗಲಿಲ್ಲ.
ಟೈಟಾನಿಕ್ ಹಡಗು ತಯಾರಿಕೆ ಬಗ್ಗೆ
1909 ರ ಮಾರ್ಚ್ 31 ರಂದು ಟೈಟಾನಿಕ್ ಹಡಗಿನ ನಿರ್ಮಾಣ ಪ್ರಾರಂಭವಾಯಿತು. 1911 ರ ಮೇ 31 ರಂದು ನಿರ್ಮಾಣ ಪೂರ್ಣಗೊಂಡಿತು. ಹಡಗು ನಿರ್ಮಾಣ ಮಾಡುವ ಸಮಯದಲ್ಲಿಯೇ ಹಲವು ಕಾರಣಗಳಿಂದ ಇಬ್ಬರು ಪ್ರಾಣ ಕಳೆದುಕೊಂಡರು. ಅಷ್ಟೇ ಅಲ್ಲ, 246 ಜನರು ಗಾಯಗೊಂಡರು.ಈ ಹಡಗು ತುಂಬಾ ಶಕ್ತಿಯುತವಾಗಿತ್ತು ಎನ್ನಲಾಗುತ್ತದೆ. ಎಷ್ಟೆಂದರೆ ಅದರ ಶಬ್ದವು ಸುಮಾರು 16 ಕಿಮೀ ವರೆಗೆ ಕೇಳುತ್ತಿತ್ತಂತೆ.ಟೈಟಾನಿಕ್ ಹಡಗನ್ನು $7.5 ಮಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.ಸುಮಾರು 10,000 ವರ್ಷಗಳ ಹಿಂದೆ ಈ ಹಡಗು ಡಿಕ್ಕಿ ಹೊಡೆದ ಮಂಜುಗಡ್ಡೆಯು ಗ್ರೀನ್‌ಲ್ಯಾಂಡ್ ದೇಶದಿಂದ ಬೇರ್ಪಟ್ಟಿತ್ತು ಎಂದು ಗುರುತಿಸಲಾಗಿದೆ.
ಟೈಟಾನಿಕ್ ದುರಂತದ ಸಮಯದಲ್ಲಿ ಉತ್ತರ ಅಟ್ಲಾಂಟಿಕ್ ಸಮುದ್ರದ ತಾಪಮಾನ ಕೇವಲ 2 ಡಿಗ್ರಿಯಷ್ಟಿತ್ತು. ಇಂತಹ ಭಯಂಕರ ಕಡಿಮೆ ತಾಪಮಾನದಲ್ಲಿ 15 ನಿಮಿಷಗಳಿಗಿಂತ ಹೆಚ್ಚು ಹೊತ್ತು ಬದುಕಲು ಅಸಾಧ್ಯವಾಗಿತ್ತು.
ಟೈಟಾನಿಕ್ ಹಡಗಿನ ಬಗ್ಗೆ ಗಮನ ಸೆಳೆವ ಕೆಲವು ಸಂಗತಿಗಳು :
ಟೈಟಾನಿಕ್ ವಿಶ್ವದ ಅತಿದೊಡ್ಡ ಪ್ರಯಾಣಿಕರ ಹಡಗು. ಆದರೆ ಅದು ಮುಳುಗಿದ ನಂತರ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲಿ ಒಂದಾಗಿ ಉಳಿಯಿತು. ಈ ಬಗ್ಗೆ 1997 ರಲ್ಲಿ ಇಂಗ್ಲಿಷ್ ಚಿತ್ರವೂ ಬಂದಿತು. ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಈ ಚಿತ್ರದಲ್ಲಿ ಹಡಗು ಹೊರಟ ಕ್ಷಣದಿಂದ ಹಿಡಿದು ಮುಳುಗುವವರೆಗೆ ವಿವರಿಸಿರುವುದು ಹೃದಯಸ್ಪರ್ಶಿಯಾಗಿದೆ. ಅಂದಹಾಗೆ ಇಲ್ಲಿ ಟೈಟಾನಿಕ್ ಬಗ್ಗೆ ಕೆಲವು ಗಮನ ಸೆಳೆಯುವ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ ಓದಿ.
* ’ಮುಳುಗಲಾರದ ಹಡಗು’ ಮುಳುಗಿತು!
ಬೆಲ್‌ಫಾಸ್ಟ್‌ನ ಹಾರ್ಲಂಡ್ ಅಂಡ್ ವುಲ್ಫ್ ಸಂಸ್ಥೆ ನಿರ್ಮಿಸಿದ್ದ ಟೈಟಾನಿಕ್, ಅತ್ಯಂತ ದೊಡ್ಡ ಹಾಗೂ ವೈಭವೋಪೇತ ಹಡಗುಗಳಲ್ಲಿ ಅಗ್ರಸ್ಥಾನ ಪಡೆದಿದ್ದು, ‘ವೈಟ್ ಸ್ಟಾರ್ ಲೈನ್’ ಎಂಬ ಸಂಸ್ಥೆಯ ಒಡೆತನದಲ್ಲಿತ್ತು. ಇಂತಹ ಬೃಹತ್ ಹಡಗು 1912 ರಂದು, ಏಪ್ರಿಲ್ 14-15 ರ ಮಧ್ಯರಾತ್ರಿ ನ್ಯೂಫೌಂಡ್‌ಲ್ಯಾಂಡಿನ ತೀರದಿಂದ ಸುಮಾರು 640 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣದಲ್ಲಿ ನೀರ್ಗಲ್ಲೊಂದಕ್ಕೆ ಡಿಕ್ಕಿ ಹೊಡೆದು ಮೂರು ಗಂಟೆಗಳೊಳಗೆಯೇ, ಅಂದರೆ ಏಪ್ರಿಲ್ 15 ರ ಮುಂಜಾನೆ 2.20 ರ ಸಮಯದಲ್ಲಿ ಸುಮಾರು 1500 ಪ್ರಯಾಣಿಕರೊಡನೆ ಸಂಪೂರ್ಣವಾಗಿ ಮುಳುಗಿಹೋಯಿತು. ‘ಮುಳುಗಲಾರದ ಹಡಗು’ ಎಂದು ಹೆಸರುವಾಸಿಯಾಗಿದ್ದ ಟೈಟಾನಿಕ್ ಮುಳುಗುವುದು ಅಸಾಧ್ಯ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಅದು ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಚಿ ಮುಳುಗಿಹೋಗಿರುವುದು ಇಂದಿಗೂ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಟೈಟಾನಿಕ್ ನಿರ್ಮಿಸಿದ ನಂತರ ಇದು ಕೂಡ ಭೂಮಿಯ ಮೇಲಿನ ಒಂದು ಭಾಗದಂತಿತ್ತು. ಟೈಟಾನಿಕ್ ನಮ್ಮ ಜೊತೆ ಇದ್ದದ್ದು ಅಲ್ಪಾವಧಿಯಾದರೂ, ಯಾವುದಾದರೊಂದು ಹಂತದಲ್ಲಿ ಟೈಟಾನಿಕ್ ಬಗ್ಗೆ ಈಗಲೂ ನಾವು ಮೆಲುಕು ಹಾಕುತ್ತಿರುತ್ತೇವೆ.
* ಟೈಟಾನಿಕ್ ಒಳಾಂಗಣಕ್ಕೆ ಪ್ರೇರಣೆಯಾದ ಹೋಟೆಲ್ :
ಟೈಟಾನಿಕ್ ದಿನಕ್ಕೆ ಸುಮಾರು 600 ಟನ್ ಕಲ್ಲಿದ್ದಲನ್ನು ಬಳಸುತ್ತಿತ್ತು. ಇದನ್ನು 176 ಪುರುಷರ ತಂಡವು ನಿರ್ವಹಿಸುತ್ತಿತ್ತು. ಪ್ರತಿ 24 ಗಂಟೆಗಳಿಗೊಮ್ಮೆ ಸುಮಾರು 100 ಟನ್ ಬೂದಿಯನ್ನು ಸಮುದ್ರಕ್ಕೆ ಹೊರಹಾಕುತ್ತಿತ್ತು ಟೈಟಾನಿಕ್. ಟೈಟಾನಿಕ್ ಹಡಗಿನಲ್ಲಿ 20,000 ಬಾಟಲ್ ಬಿಯರ್, 1,500 ಬಾಟಲ್ ವೈನ್ ಮತ್ತು 8,000 ಸಿಗಾರ್ ಇತ್ತು. ಆದರೆ ಇದು ಪ್ರಥಮ ದರ್ಜೆ ಪ್ರಯಾಣಿಕರ ಬಳಕೆಗಾಗಿ ಮಾತ್ರ. ಲಂಡನ್‌ನ ರಿಟ್ಜ್ ಹೋಟೆಲ್ ಟೈಟಾನಿಕ್ ಒಳಾಂಗಣದ ಹಿಂದಿನ ಪ್ರಮುಖ ಪ್ರೇರಣೆಯಾಗಿತ್ತು. ಟೈಟಾನಿಕ್‌ನ ನಿರ್ಮಾಣಕ್ಕೆ ಹೆಚ್ಚು ಕಡಿಮೆ 26 ತಿಂಗಳು ಸುದೀರ್ಘ ಸಮಯ ತೆಗೆದುಕೊಂಡಿದೆ. ಈ ಸಮಯದಲ್ಲಿ ಬೆಲ್ಫಾಸ್ಟ್‌ನಲ್ಲಿ 246 ಜನರಿಗೆ ಗಾಯಗಳು ಮತ್ತು 2 ಸಾವುಗಳು ದಾಖಲಾಗಿರುವುದು ವರದಿಯಾಗಿದೆ. ಟೈಟಾನಿಕ್ ಹಡಗಿನ ಮುಖ್ಯ ಆಧಾರವನ್ನು ಸಾಗಿಸಲು 20 ಕುದುರೆಗಳನ್ನು ಚ ಬಳಸಿಕೊಳ್ಳಲಾಯಿತು.
* ಡಿಕ್ಕಿ ಹೊಡೆದ ಮೇಲೂ ಸಂಗೀತ ನುಡಿಸಿದ್ದೇಕೆ ??
‘ಟೈಟಾನಿಕ್’ ನಲ್ಲಿ ಪ್ರಥಮ ದರ್ಜೆ ಪ್ರಯಾಣಿಕರಿಗೆ 352 ಹಾಡುಗಳನ್ನು ಒಳಗೊಂಡಿರುವ ಸಂಗೀತ ಪುಸ್ತಕವನ್ನು ನೀಡಲಾಯಿತು. 1997 ರಲ್ಲಿ ಟೈಟಾನಿಕ್ ಕುರಿತಾಗಿ ಬಂದ ಚಲನಚಿತ್ರದಲ್ಲಿ ಹಡಗು ಮುಳುಗುವವರೆಗೂ ಸಂಗೀತಗಾರರು ಕೆಲವು ವಾದ್ಯಗಳನ್ನು ನುಡಿಸುವ ದೃಶ್ಯವನ್ನು ನೀವು ನೆನಪಿಸಿಕೊಳ್ಳಬಹುದು. ಚಿತ್ರದಲ್ಲಿ ಅವರು ಈ ದೃಶ್ಯ ಬಳಸಿಕೊಳ್ಳಲು ಕಾರಣ ಹಡಗಿನಲ್ಲಿರುವ ಸಂಗೀತಗಾರರಿಗೆ ಗೌರವ ಸೂಚಿಸಲು. ಹೌದು, ಹಡಗು ಮಂಜುಗಡ್ಡೆಗೆ ಡಿಕ್ಕಿ ಹೊಡೆದ ನಂತರವೂ ಸಂಗೀತಗಾರರು ಎರಡು ಗಂಟೆಗಳ ಕಾಲ ಸಂಗೀತವನ್ನು ಮುಂದುವರೆಸಿದ್ದರಂತೆ.
* ದುರಂತದಲ್ಲಿ ಬದುಕುಳಿದವರ ಸಂಖ್ಯೆ ಕೇವಲ 705!
ಟೈಟಾನಿಕ್ ದುರಂತ ಸಂಭವಿಸಿದಾಗ ಈ ಹಡಗಿನಲ್ಲಿ ಇದ್ದದ್ದು ಸುಮಾರು 2220 ಪ್ರಯಾಣಿಕರು. ಆದರೆ ಹಡಗಿನಲ್ಲಿ 1700 ಜನರಿಗೆ ಮಾತ್ರ ಸಾಲುವಷ್ಟು ಲೈಫ್ ಬೋಟುಗಳಿದ್ದವಂತೆ. ವಿಪರ್ಯಾಸವೆಂದರೆ ಅಲ್ಲಿ ಲಭ್ಯವಿದ್ದ ಕೆಲವೇ ಲೈಫ್ ಬೋಟುಗಳನ್ನೂ ಸಹ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಅನೇಕ ಲೈಫ್ ಬೋಟುಗಳು ತಮ್ಮ ಪೂರ್ಣ ಸಾಮರ್ಥ್ಯಕ್ಕಿಂತ ಕಡಿಮೆ ಜನರನ್ನು ಕೊಂಡೊಯ್ದವು. ನಿಮಗೆಲ್ಲರಿಗೂ ನಾನು ಮೊದಲೇ ಹೇಳಿದಂತೆ ಕಡೆಗೆ ಈ ದುರಂತದಲ್ಲಿ ಬದುಕುಳಿದವರ ಸಂಖ್ಯೆ ಕೇವಲ 705.
* ದುರಂತವನ್ನು ಹೀಗೆ ತಪ್ಪಿಸಬಹುದಿತ್ತು?!
ನಮಗೆ ಲಭ್ಯವಿರುವ ಎಲ್ಲಾ ಫೋಟೋಗಳು ಮತ್ತು ವರ್ಣಚಿತ್ರಗಳಲ್ಲಿ ಟೈಟಾನಿಕ್‌ನಲ್ಲಿ ನಾಲ್ಕು ಕೊಳವೆಗಳು ಇದ್ದವು ಎಂದು ತೋರಿಸುತ್ತವೆ. ಆದರೆ ವಾಸ್ತವದಲ್ಲಿ ಅವುಗಳಲ್ಲಿ ಮೂರು ಮಾತ್ರ ಚಿ ಕಾರ್ಯನಿರ್ವಹಿಸುತ್ತಿದ್ದವು. ಹಡಗು ಸುಂದರವಾಗಿ ಕಾಣುವಂತೆ ಮಾಡಲು ಕೊನೆಯ ಕೊಳವೆ ಸೇರಿಸಲಾಗಿದೆ! ವೀಕ್ಷಣಾ ಡೆಕ್ ನಲ್ಲಿ ಬೈನಾಕ್ಯುಲರ್ ಇತ್ತು ಎಂದು ಹಲವರು ಹೇಳುತ್ತಾರೆ. ಇದನ್ನು ಉಪಯೋಗಿಸಿಕೊಂಡು ದುರಂತವನ್ನು ತಪ್ಪಿಸಬಹುದಿತ್ತು. ಆದರೆ ದಂತಕಥೆಯ ಪ್ರಕಾರ ಹಡಗಿನಲ್ಲಿ ಬೈನಾಕ್ಯುಲರ್ ಇದ್ದರೂ ಆ ಬೈನಾಕ್ಯುಲರ್ ಒಳಗೊಂಡಿರುವ ಪೆಟ್ಟಿಗೆಯ ಕೀಲಿ ಯಾರ ಬಳಿಯೂ ಇರಲಿಲ್ಲ. ಟೈಟಾನಿಕ್ ನ ದುರಂತವನ್ನು 1985 ರಲ್ಲಿ ಕಂಡುಹಿಡಿಯಲಾಯಿತು. ಇದು ನ್ಯೂಫೌಂಡ್‌ಲ್ಯಾಂಡಿನ ತೀರದಿಂದ 370 ಮೈಲಿ ದೂರದಲ್ಲಿದೆ.
* ಟೈಟಾನಿಕ್ ಆರ್ಟಿಫ್ಯಾಕ್ಟ್ ಎಕ್ಸಿಬಿಶನ್ :
ಭವ್ಯವಾದ ಟೈಟಾನಿಕ್ ಹಡಗು ಮತ್ತು ಅದರ ದುರಂತದ ಬಗ್ಗೆ ತಿಳಿಸಲು ‘ಲಾಸ್ ವೆಗಾಸ್’ ನಲ್ಲಿ ಆಕರ್ಷಕ ವಸ್ತುಸಂಗ್ರಹಾಲಯವಿದೆ. ಈ ‘ಟೈಟಾನಿಕ್ ಎಕ್ಸಿಬಿಷನ್’ನಲ್ಲಿ ಹಡಗಿನ ಕೆಲವು ಭಾಗಗಳನ್ನು ಒಳಗೊಂಡಂತೆ ಸುಮಾರು 300 ಕಲಾಕೃತಿಗಳ ಸಂಗ್ರಹವನ್ನು ಟೈಟಾನಿಕ್‌ನಿಂದ ಮರುಪಡೆಯಲಾಗಿದೆ. ಸಂಗ್ರಹದಲ್ಲಿ ಹಡಗಿನಲ್ಲಿದ್ದ ಪ್ರಯಾಣಿಕರ ವೈಯಕ್ತಿಕ ವಸ್ತುಗಳು ಇವೆ. ನೀವು ಇಲ್ಲಿ ಅವರ ವೈಯಕ್ತಿಕ ಕಥೆಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಕೆಲವು ಕಥೆಗಳನ್ನು ಕೇಳಿ ನಿಮ್ಮ ಮನ ಕರಗಿದರೆ, ಮತ್ತೆ ಕೆಲವು ಕಥೆಗಳು ಎದೆಗುಂದಿಸುತ್ತವೆ.
ಅದೇನೇ ಇರಲಿ, ಹಡಗಿನ ಅಪಘಾತವು ಪ್ರತಿಯೊಬ್ಬರ ಜೀವನವನ್ನು ಹೇಗೆ ಬದಲಿಸಿತು ಎಂಬುದರ ಪ್ರತಿಯೊಂದು ವಿವರವನ್ನು ನೀವಿಲ್ಲಿ ತಿಳಿದುಕೊಳ್ಳಬಹುದು. ವಸ್ತುಸಂಗ್ರಹಾಲಯವು ವಾಸ್ತವವಾಗಿ ಅದ್ದೂರಿ ಮೆಟ್ಟಿಲುಗಳನ್ನು ಒಳಗೊಂಡಿರುವುದನ್ನು ಕಾಣಬಹುದು ಮತ್ತು ಕ್ರೂಯಿಸ್ ಲೈನರ್ ಕೊಠಡಿಗಳೂ ಇವೆ. ಕೊಠಡಿ ಪ್ರವೇಶಿಸಿದ ನಂತರ, ಆ ರಾತ್ರಿ ಪ್ರಯಾಣಿಸಿದ ನಿಜವಾದ ಪ್ರಯಾಣಿಕರ ಟಿಕೆಟ್ ಅನ್ನು ನೀವು ಸ್ವೀಕರಿಸಬಹುದು ಮತ್ತು ಕೊನೆಯಲ್ಲಿ ನೀವು ಆ ಪ್ರಯಾಣಿಕನು ಬದುಕುಳಿದಿದ್ದಾನೆಯೇ, ಇಲ್ಲವೇ ಎಂದು ನಿಮಗೆ ತಿಳಿಯುತ್ತದೆ. ಕೆಲವೊಮ್ಮೆ ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ಕೊಟ್ಟಾಗ ದುಃಖ ಉಮ್ಮಳಿಸಿ ಬರುತ್ತದೆ. ಆದರೂ ಟೈಟಾನಿಕ್ ಆರ್ಟಿಫ್ಯಾಕ್ಟ್ ಎಕ್ಸಿಬಿಶನ್ ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.
@ Titanic Ship ಮುಳುಗಿದ ದಿನದಂದು ಪ್ರಯಾಣಿಕರು ತಿಂದಿದ್ದೇನು ಗೊತ್ತಾ? ವೈರಲ್ ಆಯ್ತು 111 ವರ್ಷ ಹಳೆಯ ಮೆನು ಕಾರ್ಡ್!
ಟೈಟಾನಿಕ್ (Titanic) ಹಡಗು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಇದರ ಸಿನಿಮಾವನ್ನು ನೋಡಿದವರು ಕಡಿಮೆ ಮಂದಿ ಇರಬಹುದು. ಆದರೆ, ಟೈಟಾನಿಕ್ ಅಂತ ಒಂದು ಹಡಗು ಇತ್ತು, ಅದು ಮುಳುಗಿ ಹೋಯ್ತು ಎಂದು ಹಲವರಿಗೆ ಗೊತ್ತಿರುತ್ತದೆ. ಆ ಹಡಗಿನಲ್ಲಿ ಎರಡು ಸಾವಿರಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಅದರಲ್ಲಿ 1500 ಜನರು ಸಾವನ್ನಪ್ಪಿದ್ದಾರೆ. ಮುಳುಗಿದ 100 ವರ್ಷಗಳ ನಂತರ, ಟೈಟಾನಿಕ್ ಇನ್ನೂ ಅತ್ಯಂತ ಪ್ರಸಿದ್ಧ ಪ್ರಯಾಣಿಕ ಲೈನರ್ ಆಗಿದೆ. ಐಷಾರಾಮಿ ಕ್ರೂಸ್ ಲೈನರ್ ಏಪ್ರಿಲ್ 14,1912 ರಂದು ಸೌತಾಂಪ್ಟನ್, ಇಂಗ್ಲೆಂಡ್‌ನಿಂದ ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ಗೆ (Newyork) ತನ್ನ ಸಮುದ್ರಯಾನದಲ್ಲಿ ಮುಳುಗಿತು. ದುರದೃಷ್ಟಕರ ಹಡಗಿನಲ್ಲಿ ನಡೆದ ದುರಂತ ಕಥೆಯ ಮೇಲೆ ಮಾಡಿದ ಅನೇಕ ಸಾಕ್ಷ್ಯಚಿತ್ರಗಳು (Documentry) ಮತ್ತು ಚಲನಚಿತ್ರಗಳು (Films) ಪ್ರಸಿದ್ಧಿಯಾಗಿವೆ.
ಟೈಟಾನಿಕ್ ಹಡಗು ಮುಳುಗಿ 111 ನೇ ವರ್ಷದ ಸಂದರ್ಭದಲ್ಲಿ, ಟೇಸ್ಟ್ ಅಟ್ಲಾಸ್ ಎಂಬ ಜನಪ್ರಿಯ ಇನ್‌ಸ್ಟಾಗ್ರಾಮ್ ಪುಟವು ಹಡಗಿನಲ್ಲಿ ನೀಡಲಾಗುತ್ತಿದ್ದ ಆಹಾರಗಳ ಮಾಹಿತಿಯನ್ನು ನೀಡಿದೆ. ಮೆನುಗಳ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಏಪ್ರಿಲ್ 15 ರ ರಾತ್ರಿ ಹಡಗು ಮುಳುಗಿದಾಗ ಆಹಾರವಾಗಿ, ಚಿಕನ್ ಕರಿ, ಬೇಯಿಸಿದ ಮೀನು, ಮಟನ್ ಮುಂತಾದ ರುಚಿಕರವಾದ ಭಕ್ಷ್ಯಗಳನ್ನು ಪ್ರಯಾಣಿಕರಿಗೆ ನೀಡಿತ್ತು.
ಡೂಮ್ಡ್ ಎರಡನೇ ದರ್ಜೆಯ ಪ್ರಯಾಣಿಕರಿಗೆ ಪ್ಲಮ್ ಫುಡಿಂಗ್ ತಯಾರಿಸಿತ್ತು. ಮೂರು ವರ್ಗಗಳ ಮೆನುಗಳ ನಡುವೆ ಅಗಾಧ ವ್ಯತ್ಯಾಸವನ್ನು ಕಾಣಬಹುದು ಎಂದು ಟೇಸ್ಟ್ ಅಟ್ಲಾಸ್ ಪೋಸ್ಟ್ ಬಹಿರಂಗಪಡಿಸಿದೆ.
ಪ್ರಥಮ ದರ್ಜೆಯ ಪ್ರಯಾಣಿಕರಿಗೆ ಮೆನುವು ಹೇಗಿತ್ತೆಂದರೆ ಅದು ಹಬ್ಬದೂಟಕ್ಕಿಂತ ಕಡಿಮೆಯಿರಲಿಲ್ಲ. ಕಾರ್ನ್ಡ್ ಬೀಫ್, ತರಕಾರಿಗಳು, ಗ್ರಿಲ್ಡ್ ಮಟನ್ ಚಾಪ್ಸ್, ಕಸ್ಟರ್ಡ್ ಪುಡ್ಡಿಂಗ್, ಪಾಟೆಡ್ ಸೀಗಡಿಗಳು, ನಾರ್ವೇಯನ್ ಆಂಚೊವಿ ಮತ್ತು ವಿವಿಧ ಬಗೆಯ ಚೀಸ್‌ಗಳನ್ನು ಸೇರಿದಂತೆ ಇನ್ನೂ ಹಲವು ಖಾದ್ಯಗಳನ್ನು ಒಳಗೊಂಡಿತ್ತು. ಆದರೆ, ಹಡಗಿನಲ್ಲಿದ್ದ ಮೂರನೇ ವರ್ಗಕ್ಕೆ ಉಪಹಾರ ಮತ್ತು ರಾತ್ರಿಯ ಊಟಕ್ಕೆ ಸೀಮಿತವಾದ ಭಕ್ಷ್ಯಗಳನ್ನು ನೀಡಲಾಗಿತ್ತು.
ಓಟ್ಮೀಲ್ ಗಂಜಿ ಮತ್ತು ಹಾಲು, ಆಲೂಗಡ್ಡೆ, ಹ್ಯಾಮ್ ಮತ್ತು ಮೊಟ್ಟೆಗಳು, ತಾಜಾ ಬ್ರೆಡ್ ಮತ್ತು ಬೆಣ್ಣೆ, ಮಾರ್ಮಲೇಡ್ ಮತ್ತು ಸ್ವೀಡಿಷ್ ಬ್ರೆಡ್ ಗಳನ್ನು ಒಳಗೊಂಡಿತ್ತು. ಆದರೆ, ಪ್ರಯಾಣಿಕರು ಯಾವುದೇ ವರ್ಗಕ್ಕೆ ಸೇರಿದವರಾಗಿರಲಿ, ಟೈಟಾನಿಕ್ ಎಲ್ಲರಿಗೂ ಐಷಾರಾಮಿ ಭೋಜನವನ್ನೇ ಬಡಿಸಿತ್ತು ಎಂದು ಟೇಸ್ಟ್ ಅಟ್ಲಾಸ್ ತಿಳಿಸಿದೆ.
@ ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು :
ಜಗತ್ತಿನ ಮೊದಲ ಐಷಾರಾಮಿ ಹಡಗು ಎಂದೇ ಪ್ರಸಿದ್ಧಿ ಪಡೆದು ಪ್ರತಿಯೊಬ್ಬನೂ ತನ್ನೆಡೆ ನೋಡುವಂತೆ ಮಾಡಿದ್ದ ‘ಟೈಟಾನಿಕ್’ ತನ್ನ ಮೊದಲ ಪ್ರಯಾಣದಲ್ಲೇ ದುರಂತ ಕಂಡಿತ್ತು. ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದ್ದ ಈ ದುರಂತ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು.
ಬದುಕಿ ಬಂದ ಕೆಲವರು ಸಮುದ್ರಲ್ಲಿ ಹಡಗಿನ ಮಾರ್ಗಕ್ಕೆ ಅಡ್ಡ ಬಂದಿದ್ದ ಹಿಮಬಂಡೆಗಳು ಅಪ್ಪಳಿಸಿ ಈ ಅವಘಡ ಸಂಭವಿಸಿತ್ತು ಎಂದಿದ್ದರು. ಆದರೆ ಟೈಟಾನಿಕ್ ದುರಂತಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸತ್ಯಗಳು ಹೊರಬರುತ್ತಿದ್ದು, ಹೊಸ ಸಂಶೋಧನೆಗಳು ಈ ದುರಂತಕ್ಕೆ ಬೇರೆಯದ್ದೆ ವ್ಯಾಖ್ಯಾನಗಳನ್ನು ನೀಡುತ್ತವೆ.
ಕೇವಲ ಹಿಮಬಂಡೆಗಳು ಹಡಗಿಗೆ ಅಪ್ಪಳಿಸಿದ್ದರ ಪರಿಣಾಮ ಈ ದುರಂತವಾಗಿದ್ದಲ್ಲ, ಬದಲಾಗಿ ಹಡಗಿನ ಬಾಯ್ಲರ್ ವಿಭಾಗದಲ್ಲಿ ಬೆಂಕಿ ತಗುಲಿದ್ದೂ ಕೂಡಾ ಇದಕ್ಕೆ ಕಾರಣವೆಂದು ವಾದಿಸಲಾಗುತ್ತಿದೆ. ಆದರೂ ದೈತ್ಯ ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ ಕೆಲವು ನಗ್ನ ಸತ್ಯಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ.
ಬಹುಶಃ ಟೈಟಾನಿಕ್ ದುರಂತ ಪ್ರಕರಣದಲ್ಲಿ ಚಿ ಮಾತ್ರ ಹೀಗಾಗಿರಬೇಕು. ಮುಳುಗುತ್ತಿದ್ದ ಹಡಗಿನಲ್ಲಿದ್ದ ಪುರುಷರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮೊದಲು ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಿದ್ದರು.
ಪ್ರಪಂಚದ ಅತ್ಯಂತ ಭೀಕರ ದುರ್ಘಟನೆಗಳಲ್ಲಿ ಒಂದಾಗಿರುವ ಟೈಟಾನಿಕ್ ‘ಮುಳುಗಲಾರದ ಹಡಗು’ ಎಂದೇ ಭಾರೀ ಪ್ರಚಾರ ಪಡೆದಿತ್ತು. ಇಷ್ಟು ಭರ್ಜರಿಯಾಗಿದ್ದ ಹಡಗು ಮುಳುಗಲು ಸಾಧ್ಯವೇ ಇಲ್ಲ ಎಂಬುವುದು ಎಲ್ಲರ ಭಾವನೆಯಾಗಿತ್ತು.
ಆದರೆ, ಅತ್ಯಂತ ವೈಭವಪೂರಿತ ಹಡುಗಳಲ್ಲಿ ಅಗ್ರಸ್ಥಾನ ಪಡೆದಿದ್ದ ‘ಟೈಟಾನಿಕ್’, ಸಮುದ್ರದ ಮಾರ್ಗ ಮಧ್ಯದಲ್ಲಿ ನೀರ್ಗಲ್ಲಿಗೆ ಅಪ್ಪಳಿಸಿದ ಪರಿಣಾಮ ದುರಂತ ಸಂಭವಿಸಿತ್ತು ಎಂಬುವುದು ಸಂಶೋಧನೆಗಳು ವಾದಿಸುತ್ತವೆ.
ದುರಂತದ ಸಮಯದಲ್ಲಿ ಜೀವ ರಕ್ಷಕ ಲೈಫ್ ಬೋಟ್‌ಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗದಿರುವುದು ಕೂಡಾ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ದುರಂತದಲ್ಲಿ ಬದುಕುಳಿದವರು ಅದೃಷ್ಟಶಾಲಿಗಳೇ ಎನ್ನಬಹುದು.
ಈ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್, 1997 ರಲ್ಲಿ ಟೈಟಾನಿಕ್ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದರು. ಚಿತ್ರದಲ್ಲಿ ಲಿಯಾನಾರ್ಡೊ ಡಿ ಕಾಪ್ರಿಯೊ ಹಾಗೂ ಕೇಟ್ ವಿನ್ಸ್ಲೆಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಒಂದು ಕಾಲದ ಜಗತ್ತಿನ ಅತ್ಯಂತ ದೊಡ್ಡ ಹಡಗು ಮುಳುಗಿದ ಕಥೆಯನ್ನೇ ಹೃದಯಸ್ಪರ್ಶಿಯಾಗಿ ಚಿತ್ರಿಸಿದ ರೀತಿ ಅವಿಸ್ಮರಣೀಯ. ನಾವು ಈ ಮೊದಲೇ ಚಿ ತಿಳಿಸಿರುವಂತೆಯೇ ಟೈಟಾನಿಕ್ ಅಂದಿನ ಕಾಲದ ಅತಿದೊಡ್ಡ ಹಡಗಾಗಿತ್ತು. ಅಂದರೆ ಇದರ ಗಾತ್ರ ಸಾಮಾನ್ಯ ಫುಟ್ಬಾಲ್ ಮೈದಾನಕ್ಕಿಂತ ಮೂರು ಪಟ್ಟು ಹೆಚ್ಚಾಗಿತ್ತು.
ಹೀಗಾಗಿಯೇ ಟೈಟಾನಿಕ್ ಎಂಜಿನ್‌ಗಾಗಿ ದಿನಂಪ್ರತಿ 800 ಟನ್ ಕಲ್ಲಿದ್ದಲು ಬಳಕೆ ಮಾಡಲಾಗುತ್ತಿತ್ತು. ಹಾಗೆಯೇ ಪ್ರತಿಗಂಟೆಗೆ 43.50 ಕೀ.ಮೀ. (27 ಮೈಲ್) ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.
ಟೈಟಾನಿಕ್, ವಿಶ್ವದಲ್ಲಿ ವಿದ್ಯುತ್ ಚಾಲಿತ ಲೈಟ್ (ಎಲೆಕ್ಟ್ರಿಕ್) ಹಾಗೂ ಟೆಲಿಫೋನ್ ವ್ಯವಸ್ಥೆ ಹೊಂದಿದ್ದ ಅಂದಿನ ಅತ್ಯಾಧುನಿಕ ಹಡಗುಗಳಲ್ಲಿ ಒಂದಾಗಿತ್ತು.
ಇನ್ನೊಂದು ಅಚ್ಚರಿ ಅಂದ್ರೆ ಕಲ್ಲಿದ್ದಲು ಹೊಗೆ ಹಾಗೂ ಹಬೆ ಹೊರಹೋಗಲು ನಿರ್ಮಿಸಿದ್ದ ನಾಲ್ಕು ಕೊಳವೆಗಳಲ್ಲಿ ಕೇವಲ ಮೂರು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ನಾಲ್ಕನೆಯದನ್ನು ಹಡಗಿನ ಸೌಂದರ್ಯ ಹೆಚ್ಚಿಸಲು ನಿರ್ಮಿಸಲಾಗಿತ್ತು ಎನ್ನುವುದೇ ವಿಶೇಷ.
ಅಷ್ಟಕ್ಕೂ ಟೈಟಾನಿಕ್‌ನಲ್ಲಿ ಸಂಚರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದೊಂದು ವೈಭವಪೂರಿತ ಪ್ರಯಾಣವಾಗಿತ್ತು. ಅಂದಿನ ಕಾಲಕ್ಕೆಯೇ 99 ಸಾವಿರ ಅಮೆರಿಕನ್ ಡಾಲರ್ ಪಾವತಿಸಬೇಕಾಗಿತ್ತು. ಅಂದ್ರೆ ಭಾರತೀಯ ರೂಪಾಯಿ ಚಿ ಪ್ರಕಾರ ಇಂದಿನ ಮೌಲ್ಯ 73 ಲಕ್ಷ.
ಮತ್ತೊಂದು ಬೇಸರದ ಸಂಗತಿ ಏನೆಂದರೆ ಆಗ ತಾನೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಇಪ್ಪತ್ತಾರು ನವ ಜೋಡಿಗಳು ತಮ್ಮ ಮೊದಲ ಪ್ರವಾಸದಲ್ಲಿಯೇ ಜೀವ ಕಳೆದುಕೊಂಡಿದ್ದರು.
ಇದರಿಂದಾಗಿಯೇ ಕಹಿಸತ್ಯಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಟೈಟಾನಿಕ್ ಹಡಗು ಕೆಲವರಿಗೆ ಕರಾಳ ನೆನಪುಗಳಾದ್ರೆ ಮತ್ತೆ ಕೆಲವರಿಗೆ ಅದು ಅಧ್ಯಯನ ವಸ್ತು ಎಂದ್ರೆ ತಪ್ಪಾಗಲಾರದು.
@ ಟೈಟಾನಿಕ್ ದುರಂತ ::
ದೈತ್ಯ ಟೈಟಾನಿಕ್ ಹಡಗು 1912 ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985 ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ.
@ ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು ::
1,600 ಅಡಿ ಆಳದಲ್ಲಿ ಸ್ಫೋಟ ಸಂಭವಿಸಿ ಸಾವು :
ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ (Titanic) ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿಯಲ್ಲಿ ( Submarine ) ತೆರಳಿದ್ದ ವಿಶ್ವದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ.
ಪ್ರವಾಸಿಗರನ್ನು ಕರೆದೊಯ್ದಿದ್ದ ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ ( Submarine ) ಸಾಗರದ ಒಳಗಡೆ ಸುಮಾರು 1,600 ಅಡಿ ( 488 ಮೀಟರ್ ) ಆಳದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಸ್ಫೋಟಗೊಂಡಿದೆ. ಇದರಿಂದಾಗಿ ಐವರು ದುರಂತ ಸಾವಿಗೀಡಾಗಿದ್ದಾರೆ. ರಿಮೋಟ್ ಕಂಟ್ರೋಲ್ ಸಾಧನದಿಂದ ಇದನ್ನು ಪತ್ತೆಹೆಚ್ಚಲಾಗಿದೆ. ಜಲಾಂತರ್ಗಾಮಿ ಸಬ್‌ಮರ್ಸಿಬಲ್‌ನಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು. ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದ ಒಶಿಯನ್‌ಗೇಟ್ ಸಿಇಒ ಸ್ಟಾಕ್‌ಟನ್ ರಷ್, ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ ನಾರ್ಗಿಯೊಲೆಟ್, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಕಣ್ಮರೆಯಾದವರು. ಈ ಜಲಾಂತರ್ಗಾಮಿಯು 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಚಿ ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ