ಮೂಡಲಗಿ:- ಜಿಲ್ಲಾ ಪ್ರದೇಶದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಿ ಕುಟುಂಬವನ್ನು ಸುಖವಾಗಿ ಸಾಕುವ ಕನಸಿನೊಂದಿಗೆ ಬೆಳಗಾವಿಗೆ ಹೋಗಿದ್ದ ಗ್ರಾಮೀಣರಿಬ್ಬರು ಕೆಲಸ ಮಾಡುವಾಗಲೇ ಮಣ್ಣು ಕುಸಿದು ದುರ್ಮರಣಕ್ಕೀಡಾದ ದುರಂತ ಎಲ್ಲರ ಮನ ಕಲಕಿದೆ
ಬೆಳಗಾವಿ ಕನಕದಾಸ ವೃತ್ತದಲ್ಲಿ ನಡೆಸುತ್ತಿರುವ ಕಾಮಗಾರಿ, ಅಪಾರ ಪ್ರಮಾಣದ ಮಣ್ಣು ಕುಸಿದು ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಬಸವರಾಜ ಸರವಿ ಹಾಗೂ ಶಿವಲಿಂಗ ಸರವಿ ಇಬ್ಬರು ಸಾವಿಗೀಡಾಗಿದ್ದು ಸುದ್ದಿ ತಿಳಿದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಮನೆಗೆ ಬೆಳಕಾಗಬೇಕಾದವರು ಮಸಣದ ದಾರಿ ಹಿಡಿದರೆ ಬಡವರ ಬಾಳಲ್ಲಿ ಬಿರುಗಾಳಿ ಬಂದಂತಾಗಿದೆ. ಕುಟುಂಬಸ್ಥರ ಬದುಕು ಕಣ್ಣೀರಿನಲ್ಲಿ ಮುಳುಗಿ ಹೋದಂತಾಗಿದೆ.
ಈ ಸಾವು ನ್ಯಾಯವೇ.? ಎಂದು,ಪ್ರಶ್ನಿಸುವುದು ಯಾರನ್ನು!