ಗುರ್ಲಾಪೂರ – ಸ್ಥಳಿಯ ಶ್ರೀ ರೇವಣಸಿದ್ದೇಶ್ವರ ವಿವಿದ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಗುರ್ಲಾಪೂರ ಇದರ ದ್ವಿತೀಯ ಶಾಖೆಯನ್ನು ಮಮದಾಪೂರ ಗ್ರಾಮದಲ್ಲಿ ಟಿ ಡಿ ಗಾಣಿಗೇರ ಕಾಂಪ್ಲೆಕ್ಸನಲ್ಲಿ ಶ್ರೀ ಚರಮೂರ್ತೀಶ್ವರ ಮಹಾಸ್ವಾಮಿಗಳು ಮಮದಾಪೂರ ಶ್ರೀ ಮ ನಿ ಪ್ರ ಗುರುಸಿದ್ಧ ಮಹಾಸ್ವಾಮಿಗಳು ರೇವಣಸಿದ್ದೇಶ್ವರ ವಿರಕ್ತಮಠ ಬೆಂಡವಾಡ ಶ್ರೀ ವೀರಭಧ್ರಯ್ಯ ಸ್ವಾಮಿಗಳು ಮಮದಾಪೂರ ಶ್ರೀಗಳ ಸಾನ್ನಿಧ್ಯದಲ್ಲಿ ಬುಧವಾರ ದಿ ೧೬ ರಂದು. ಬೆಳಗ್ಗೆ ಮಹಾಲಕ್ಷ್ಮಿ ಹಾಗೂ ಶ್ರೀ ಮಹಾಸರಸ್ವತಿ ಪೂಜೆಯೊಂದಿಗೆ ನೆರೆವೆರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಧಾನ ಕಛೆರಿಯ ಅಧ್ಯಕ್ಷರಾದ ರಾಮಪ್ಪ ನೇಮಗೌಡರ ವಹಿಸಿದ್ದರು. ಆರಂಭದಲ್ಲಿ ಪ್ರಧಾನ ಕಛೇರಯ ಕಾರ್ಯದರ್ಶಿಗಳಾದ ಆನಂದ ಶಿವಾಪೂರ ವೇದಿಕೆ ಮೇಲೆ ಸಾನ್ನಿಧ್ಯ ವಹಿಸಿದ್ದ ಮಹಾಸ್ವಾಮಿಗಳನ್ನು ಗಣ್ಯಮಾಣ್ಯರನ್ನು ಸ್ವಾಗತಿಸಿ ಸಂಘದ ಬಗ್ಗೆ ಪ್ರಾಸ್ಥಾವಿಕವಾಗಿ ಮಾತನಾಡಿ, ಸಂಘವು ಗುರ್ಲಾಪೂರದಲ್ಲಿ ನಡೆದು ಬಂದ ದಾರಿ ಹಾಗೂ ಶೇರುದಾರರಿಗೆ ಸಿಗುವ ಲಾಭಗಳ ಬಗ್ಗೆ ತಿಳಿಸಿದರು.
ನಂತರ ಸಂಘದಲ್ಲಿ ಠೇವು ಮಾಡಿದ ಸದಸ್ಯರಿಗೆ ಸತ್ಕರಿಸಿ ಠೇವು ಪತ್ರಗಳನ್ನು ಶ್ರೀಗಳು ವಿತರಿಸಿದರು.
ಸಬೆಯ ಅಧ್ಯಕ್ಷತೆಯನ್ನು ಪ್ರಧಾನ ಕಛೆರಿಯ ಅಧ್ಯಕ್ಷರಾದ ರಾಮಪ್ಪ ನೇಮಗೌಡರ ರವರು ಮಾತನಾಡಿ, ಮಮದಾಪೂರ ಹಾಗೂ ಸುತ್ತಮುತ್ತಲಿನ ಜನರಿಗೆ ಅನೂಕೂಲವಾಗಲಿ ಎಂದು ನಿಮ್ಮೂರಿನಲ್ಲಿ ನಾವು ಶಾಖೆಯನ್ನು ಪ್ರಾರಂಭಮಾಡಿದ್ದೇವೆ ಇದರ ಸದುಪಯೋಗವನ್ನು ಎಲ್ಲರೂ ಪಡೆದು ಕೂಳ್ಳಬೇಕು ಸಂಘವು ಪ್ರಗತಿಹೊಂದಲು ಶೇರುದಾರ ಹೂಡಿಕೆದಾರ ಸಿಬ್ಬಂದಿ ಪಾತ್ರ ಅತಿಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಾದೇವ ರಂಗಾಪೂರ.ತಿಪ್ಪಣ್ಣ ಗಾಣಿಗೇರ, ಬಸಪ್ಪ ಗಾಣಿಗೇರ, ಲಗಮಪ್ಪ ಹಳ್ಳೂರ, ಸಿದ್ದಪ್ಪ ಸುಳ್ಳನವರ, ವಿಠ್ಠಲ ಜಾದವ, ರೇವಪ್ಪ ಸತ್ತಿಗೇರಿ, ಶ್ರೀಶೈಲ ನೇಮಗೌಡರ, ಅಶೋಕ ಗಾಣಿಗೇರ, ಹಣಮಂತ ಬಂಡಿವಡ್ಡರ, ನೀತಾ ನೇಮಗೌಡರ, ಪಾರ್ವತೆವ್ವ ಗಾಣಿಗೇರ ಹಾಗೂ ಬೆಟಗೇರಿ ಹಾಗೂ ಮಮದಾಪೂರ ಶಾಖೆಯ ಸಲಹಾಸಮಿತಿಯ ಆಡಳಿತ ಮಂಡಳಿ ಅದ್ಯಕ್ಷರು ಹಾಗು ಸದಸ್ಯರು ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಗುರು ಹಿರಿಯರು ಸ್ಥಳಿಯ ಸಂಘ ಸಂಸ್ಥೆಯ ಪದಾದಿಕಾರಿಗಳು ಆಗಮಿಸಿದ್ದರು. ಶಾಖಾ ಕಾರ್ಯದರ್ಶಿ ಸಚಿನ ಮೆಳೆನ್ನವರ ನಿರೂಪಿಸಿ ವಂದಿಸಿದರು