ಪುಸ್ತಕವೆಂಬ ಉತ್ತಮ ಒಡನಾಡಿ

Must Read

ಪ್ರತಿಯೊಬ್ಬ ಮಾನವನಿಗೆ ಓದುವಿಕೆ ಓದಿದ್ದು ತಿಳಿಯುವಿಕೆ ಅವಶ್ಯಕ. ಓದು ತಿಳಿವಳಿಕೆಗೆ ಪುಸ್ತಕ ಅಗತ್ಯ ಆಕರವಾಗಿದೆ. ಪುಸ್ತವೆಂಬುದು ಒಂದು ಮಾಯಾವಿ ಜಗತ್ತಿನ ಅನಾವರಣ. ಬದುಕಿನ ಚಿತ್ರಣವನ್ನು ಬದಲಾಯಿಸುತ್ತಾ ಹೊಸದೊಂದನ್ನು ಕಂಡು ಹಿಡಿಯಲು ಪ್ರೇರಣಾದಾಯಕ.

ವಾಸ್ತವ ವಸ್ತು ಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪುಸ್ತಕವು ಸಹಕಾರಿ ಚಿಂತನೆ ಮಂಥನ ನಡೆಸಿ ಸರಿ ತಪ್ಪಿನ ಅರಿವನ್ನು ಮೂಡಿಸುವ ಜ್ಞಾನ ದೀವಿಗೆ ಪುಸ್ತಕವೇ ಆಗಿದೆ.

ಸೃಜನ ಶೀಲತೆಗೆ ಹಿಡಿವ ಕೈಗನ್ನಡಿ ಭರವಸೆಗೆ ಬರೆಯುವ ಮುನ್ನುಡಿ. ನಾಗರಿಕ ಪ್ರಜ್ಞೆಗೆ ಸರಿಯಾದ ಮಾಹಿತಿಯನ್ನು ಮೂಡಿಸಲು ಪುಸ್ತಕ ಉತ್ತಮ ಆಕರವಾಗಿದೆ. ಓದುವ ಅಭ್ಯಾಸ ಮಾಡಿಕೊಳ್ಳುತ್ತಾ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಓದು ಪ್ರಮುಖ ಪಾತ್ರ ವಹಿಸುತ್ತದೆ. ಓದುವಿಕೆಯ ಜಾಗೃತಿ ಮೂಡಿಸಲು ವಿಶ್ವ ಪುಸ್ತಕ ದಿನ ಮತ್ತು ಹಕ್ಕು ಸ್ವಾಮ್ಯ ದಿನ ಎಂದು ಏಪ್ರಿಲ್ 23 ನ್ನು ಆಯ್ದು ಕೊಳ್ಳಲಾಗಿದೆ.

ಏಪ್ರಿಲ್ 23 ಜಗತ್ತು ಕಂಡ ಶ್ರೇಷ್ಠ ಬರಹಗಾರ ಎನಿಸಿಕೊಂಡ ವಿಲಿಯಂ ಶೇಕ್ಷ ಪಿಯರ್ ಅವರ ಜನನ ಮತ್ತು ಮರಣ ಹೊಂದಿದ ದಿನವಾಗಿದೆ ಅವರ ಸ್ಮರಣೆಗಾಗಿ ಈ ದಿನವನ್ನು ಆಯ್ಕೆ ಮಾಡಿದ್ದು. ಪ್ರಸ್ತುತ 2025 ರ ವಿಶ್ವ ಪುಸ್ತಕ ದಿನದ ಘೋಷ ವಾಕ್ಯ ನಿಮ್ಮ ದಾರಿಯನ್ನು ಓದಿ ಎಂಬುದಾಗಿದೆ.

ಪುಸ್ತಕದಿಂದ ಮಸ್ತಕವನ್ನು ತುಂಬಿ ಬುದ್ಧಿಯ ಹರವನ್ನು ಹೆಚ್ಚಿಸಿಕೊಳ್ಳಬಹುದು. ಆಧುನಿಕ ಜಗತ್ತಿನಲ್ಲಿ ಮಕ್ಕಳು ಪುಸ್ತಕ ಹಿಡಿದು ಓದುವುದಕ್ಕೆ ಮುಜುಗರ  ಪಡುತ್ತಾರೆ ಎಂಬುದು ದುರದೃಷ್ಟಕರ ಸಂಗತಿಯಾಗಿದೆ.ಮಕ್ಕಳಲ್ಲಿ ಓದುವಿಕೆಯ ಅಸಕ್ತಿ ಹೆಚ್ಚಿಸಲು ಪುಸ್ತಕ ದಿನ ಪುಸ್ತಕದ ಓದುವಿಕೆಯ ಮಹತ್ವ ಪ್ರಯೋಜನವನ್ನು ತಿಳಿಸುತ್ತದೆ.

ನಾಗರಿಕ ಸಮಾಜದಲ್ಲಿ ಉತ್ತಮ ಗುಣಮಟ್ಟದ ಜೀವನ ನಡೆಸಲು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಪುಸ್ತಕಗಳು ಉತ್ತಮ ಒಡನಾಡಿಗಳು ಆತ್ಮ ವಿಶ್ವಾಸ ಗಳಿಸುವ ಉತ್ತಮ ಮಾರ್ಗದರ್ಶಿ. ಪುಸ್ತದೊಂದಿಗಿನ ಬಾಂಧವ್ಯ ವೃದ್ಧಿಸಿ ಕೊಂಡು ಹೊಸ ಸಾಧನೆ ಮಾಡಲು ಸಹಕಾರಿ. ಏಕಾಂಗಿತನವನ್ನು ಹೋಗಲಾಡಿಸಿ ಪ್ರಮುಖ ಮಾಹಿತಿಗಳನ್ನು ನೀಡುತ್ತಾ ಮನೋರಂಜನೆ ಕೊಡುವುದರ ಜೊತೆಗೆ ಮನಸ್ಸಿಗೆ ಶಾಂತಿ ನೀಡುವ ಸಂಪನ್ಮೂಲ ಪುಸ್ತಕವಾಗಿದೆ.

ಓದುವ ಒಳ್ಳೆಯ ಸಂಸ್ಕಾರ ಹವ್ಯಾಸ ಪ್ರಪಂಚದ ಇತಿಹಾಸ ಮತ್ತು ಭವಿಷ್ಯಗಳ ಸೇತುವೆಯಂತೆ ಪಾತ್ರ ವಹಿಸುತ್ತದೆ. ಹೊಸ ಆಲೋಚನೆಗಳ ರಹದಾರಿ ‘ಓದುವಿಕೆಯನ್ನು ಹೂಡಿಕೆಯಂತೆ ಮಾಡಿಕೊಳ್ಳಿ ಅದು ನಿಮಗೆ ಉತ್ತಮ ಲಾಭವನ್ನು ಪಡೆದುಕೊಳ್ಳುವಂತೆ’ ಮಾಡುತ್ತದೆ ಪುಸ್ತಕಗಳು ನಿಜವಾದ ಸ್ನೇಹಿತರು ದೈನಂದಿನ ಜೀವನದಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತದೆ.

ರೇಷ್ಮಾ ಕಂದಕೂರ, ಶಿಕ್ಷಕಿ
ರೆಡ್ಡಿ ಅನುದಾನಿತ ಪ್ರಾಥಮಿಕ ಶಾಲೆ ಸಿಂಧನೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group