ಸಿಂದಗಿ: ಪುರಸಭೆ ಯಾವುದೇ ಸದಸ್ಯರ ಗಮನಕ್ಕೆ ತರದೆ ಅಧ್ಯಕ್ಷರು ಏಕ ಮುಖ ಅಧಿಕಾರ ನಡೆಸುತ್ತಿದ್ದಾರೆ ಎಂದು 15 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಕಳೆದ 16 ರಂದು ಸಭೆ ನಡೆಸಿದ್ದು ಕಾನೂನು ಬಾಹಿರವಾಗಿದೆ ಅಲ್ಲದೆ ಅವರು ಮಾಡಿದ ಆರೋಪ ಹುರುಳ್ಳಿಲ್ಲದ್ದು ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಸ್ಪಷ್ಟ ಪಡಿಸಿದರು.
ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾನೂನು ಹೋರಾಟದಲ್ಲಿ ನನ್ನ ಗೆಲುವಾಗಿದೆ. ಅವಿಶ್ವಾಸ ಗೊತ್ತುವಳಿ ವಿಷಯಕ್ಕೆ ಸಂಬಂದಿಸಿದ ಪ್ರಕರಣ ಹೈ ಕೋರ್ಟ್ ಮೆಟ್ಟಿಲೇರಿದ್ದು ಮುಂದೆ ಏನಾಗುತ್ತೆ ಕಾದು ನೋಡಬೇಕಾಗಿದೆ ಗೆಲವು ನನ್ನ ಪರವಾಗಿದೆ ಎನ್ನುವ ಭರವಸೆ ನನ್ನಲ್ಲಿದೆ. 1420 ಆಸ್ತಿಯಲ್ಲಿ ಪುರಸಭೆ ಪರವಾನಿಗೆ ಇಲ್ಲದೆ ಕಟ್ಟಡ ಕಟ್ಟುತ್ತಿದ್ದಾರೆ ಎಂದು ತಕರಾರು ಅರ್ಜಿ ಇದೆ ಎನ್ನುವ ಆರೋಪವಿದೆ ಅಲ್ಲಿ ಈಗಾಗಲೆ ಮಳಿಗೆ ಕಟ್ಟಲಾಗಿದೆ ಕಳೆದ ಸೆಪ್ಟೆಂಬರನಲ್ಲಿ ಆ ಆಸ್ತಿಯ ಕರ ತುಂಬಲಾಗಿದೆ. ಇವರಿಗೆ ನನ್ನ ಆಸ್ತಿ ಉತಾರೆ ಗಳು ಎಲ್ಲಿಂದ ಬಂದವು ಅರ್ಜಿ ನೀಡಿ ಪಡೆದರೋ ಅಥವಾ ಕಾಯ್ದೆ ಅಡಿ ಅರ್ಜಿ ನೀಡಿ ಪಡೆದ ಬಗ್ಗೆ ಗೊತ್ತಿಲ್ಲ ಪುರಸಭೆಯವರಿಗೂ ಹಾಗೂ ಆರೋಪ ಮಾಡುವವರಿಗೆ ಯಾವ ಆಸ್ತಿಯಲ್ಲಿ ಕಟ್ಟಡ ನಡೆದಿದೆ ಎನ್ನುವ ಜ್ಞಾನವು ಇಲ್ಲ. ಇದು ಇದ್ದಿಲು ಮಸಿಗೆ ಬುದ್ಧಿ ಹೇಳಿದಂತಾಗಿದೆ ಇನ್ನು ಪಟ್ಟಣದ ಕೆಲ ಗೂಡಂಗಡಿಗಳ ಹಾಗೂ ಉದ್ಯಾನವನ ಕಾರ್ಯಾಚರಣೆ ಯಲ್ಲಿ ಶಾಸಕ ಅಶೋಕ ಮನಗೂಳಿ ಅವರ ಒತ್ತಾಯ ವಿತ್ತು ಅದನ್ನು ನನ್ನ ಅವಧಿಯಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ತೆರವುಗೊಳಿಸಲಾದ ಬಸವೇಶ್ವರ ವೃತ್ತದಿಂದ ಡಾ ಅಂಬೇಡ್ಕರ್ ವೃತ್ತದವರೆಗಿನ ಕಾಮಗಾರಿಗೆ ರೂ. 1 ಕೋಟಿ ವೆಚ್ಚದಲ್ಲ ಪೇವರ್ಸ್ ಜೋಡಣೆ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದ ಅವರು ಸೋಮವಾರದಿಂದ ಮತ್ತೆ ತೆರವು ಕಾರ್ಯಾಚರಣೆ ಹಾಗೂ ಸಾರ್ವಜನಿಕರ ಕಾರ್ಯಗಳು ಸುಗಮ ಕೆಲಸ ನಡೆಯುತ್ತದೆ. ಅವರು ಮಾಡಿದ ಆರೋಪಗಳು ಸಾಬೀತಾದರೆ ಸ್ವಯಂ ರಾಜೇನಾಮೆ ನೀಡುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ಇದ್ದರು