ಸದಾಶಿವಯೋಗೇಶ್ವರ ಜಾತ್ರೆಯಲ್ಲಿ 101 ಶಿಕ್ಷಕ ದಂಪತಿಗಳಿಗೆ “ಶಿಕ್ಷಣ ಸಿರಿ” ಪ್ರಶಸ್ತಿ ಪ್ರದಾನ

Must Read

ಮೂಡಲಗಿ:– ತಾಲೂಕಿನ ರಂಗಾಪೂರ-ಮುನ್ಯಾಳ ಗ್ರಾಮದಲ್ಲಿ ನಡೆದ ಶ್ರೀ ಸದಾಶಿವ ಯೋಗೇಶ್ವರ ಜಾತ್ರಾ ಮಹೋತ್ಸವದಲ್ಲಿ ೧೦೧ ಶಿಕ್ಷಕ ದಂಪತಿಗಳಿಗೆ “ಶಿಕ್ಷಣ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀಮಠದ ಪೀಠಾಧಿಪತಿಗಳಾದ ಶ್ರೀಮದ್ ಘನ ಲಿಂಗ ಚಕ್ರವರ್ತಿ ಡಾ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಇವರ ಘನ ಅಧ್ಯಕ್ಷತೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತರಾದ ಗಜಾನನ ಮನಿಕೇರಿಯವರು ಒಬ್ಬ “ಯಶಸ್ವಿ ಶಿಕ್ಷಕನ ಹಿಂದೆ ಒಬ್ಬ ಯಶಸ್ವಿ ಮಹಿಳೆ ಇರುತ್ತಾಳೆ”, ಶಿಕ್ಷಕ ದಂಪತಿಗಳನ್ನು ಗುರುತಿಸಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿದ ಶ್ರೀಮಠದ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಹೊಸ ಯರಗುದ್ರಿಯ ಶ್ರೀ ಇರಲಿಂಗೇಶ್ವರ ಮಠದ ಶ್ರೀ ಸಿದ್ದ ಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹರ್ಲಾಪುರದ ಶ್ರೀ ಶಿವಯೋಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಸಿ. ಮನ್ನಿಕೇರಿ ಉಪಸ್ಥಿತರಿದ್ದರು. ಎಲ್ಲಾ ಪೂಜ್ಯರು ಜ್ಞಾನೋಪದೇಶ ಮಾಡಿದರು ಜಾತ್ರಾ ಕಮಿಟಿಯವರು ಹಾಗೂ ಅಪಾರ ಭಕ್ತರು ಹಾಜರಿದ್ದು ಭಾಗವಹಿಸಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group