ಕವನ : ಮುಖವಾಡ ಕಳಚಲೇಬೇಕು

Must Read

ಮುಖವಾಡ ಕಳಚಲೇಬೇಕು
(ಅಂತರಾಳದ ಹೆಣ್ಣುಗಳಿಗೊಂದು ಪ್ರತಿ)

ಮುಖವಾಡ ಕಳಚಲೇಬೇಕು
ಸತ್ಯದ ಅಲೆ ಎಲ್ಲೆಡೆ
ಹರಡಬೇಕು.
ನಮ್ಮ ಏಳಿಗೆಯ ಬೆಳಕನ್ನು ನೋಡಿ,
ಹೆಣ್ಣೆ ಹೆಣ್ಣಿಗೆ ವಿರೋಧವೇಕೆ?

ಮಕ್ಕಳ ತಾಯಿಯಾಗಿ ಬೆಳೆದವಳು,
ಇನ್ನೊಬ್ಬಳ ಹೆಜ್ಜೆಗೆ ಹಳ್ಳ ಹಾಕುವುದೇಕೆ?
ಬೆಳಕಿಗೆ ಬೆಂಕಿ ಹಚ್ಚುವ ದೃಷ್ಟಿಯಲಿ
ನಾಟಕ ಆಡೋಕೆ ಇನ್ನು ತೆರೆ ಬೀಳಲೇಬೇಕು.

ಹೊರಗೆ ನಗು, ಒಳಗೆ ವಿಷದ ಮಾತು,
ಬೆರಳಚ್ಚಿದ ಹೂವಿನಲ್ಲಿ ಹಿಂಸೆಗೊಂದು ತಾತ್ವಿಕ ನಾಟ್ಯ.
ಎದ್ದು ನಿಲ್ಲೋ ಹೆಣ್ಣು ನೋಡಿ ತಾಳಲಾರದೆ,
ಅವಳ ಓಟವನ್ನೇ ಕುಗ್ಗಿಸಲು ನಟನೆ ಮಾಡುತ್ತಾರೆ.

ಅವನ ಆಟದ ಮುಕ್ತಾಯವಿಲ್ಲದಿದ್ದರೂ,
ಈಕೆಯ ಆಟವೇ ಹೆಚ್ಚು ನೋವಿನ ಮಾತು.
ಒಬ್ಬನು ಬಲವಂತೆ ಸುತ್ತಿದ್ರೆ,
ಇನ್ನೊಬ್ಬಳು ಮರುಭಾವದ ಮಾರುಬಜಾರ.

ಅಕ್ಕಮಹಾದೇವಿಯಂತೆ ಶರಣಿ ನಟಿಸುತ್ತಾಳೆ,
ಆದರೆ ಅವಳ ತ್ಯಾಗ-ನಿಷ್ಠೆಗೆ ನಿಜವಾದ ಗೌರವವಿಲ್ಲದೆ.
ಆವರಣದ ಮಾತುಗಳಿಂದಲೇ ಆಕೆಯ ಪ್ರತಿಷ್ಠೆ ಕತ್ತಲಾಗುತ್ತದೆ,
ದರ್ಶನವಿಲ್ಲದ ವಚನಗಳಿಂದ ಗರ್ಭವಿಲ್ಲದ ಆಡಂಬರ!

ಹೆಣ್ಣು ಶಕ್ತಿ, ಸಹನೆ, ನಯತೆ, ಬೆಳಕು,
ಅವಳೇ ಅವಳ ದಾರಿ ಮುಚ್ಚುತ್ತಿದ್ದರೆ ನೋವೇಕೆ?
ಈ ತುಳಿಯುವ ಮಾತು, ಈ ಸಂಕುಚಿತ ನೋಟ,
ಇನ್ನು ಸೃಜನಶೀಲತೆಯ ಬಲಿಗೆ ಕುತಂತ್ರವೇಕೆ?

ಒಂದಾಗಿ ನಿಂತು ಬೆಂಬಲಿಸುವ ಸಮಯವಿದು,
ಹೆಣ್ಣು ಹೆಣ್ಣಿಗೆ ನೆರೆಯೆಂಬ ಹೊಸ ಯುಗವಿದು!
ಮನಸ್ಸಿನ ಮಂಕು ದೂರವಾಗಬೇಕು,
ಈ ನಾಟಕದ ತೆರೆಗೆ ಇಂದೇ
ಕೊನೆ ಬರುವಂತೆ ಮಾಡಬೇಕು.
ಮುಖವಾಡ ಕಳಚಲೇಬೇಕು.
_________________

ದೀಪಾ ಪೂಜಾರಿ, ಕುಶಾಲನಗರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group