ಕಾನಕಟ್ಟಿ ಗ್ರಾ.ಪಂ ಕಟ್ಟಡ ಮತ್ತು ಹೇಮರಡ್ಡಿ ಮಲ್ಲಮ್ಮ ವೃತ್ತ ಉದ್ಘಾಟನೆ

Must Read

ಮೂಡಲಗಿ: ತಾಲೂಕಿನ ಯಾದವಾಡ ಬಳಿಯ ಕಾನಕಟ್ಟಿಯ ಗ್ರಾಮ ಪಂಚಾಯತ ಕಾರ್ಯಾಲಯ ನೂತನ ಕಟ್ಟಡ ಹಾಗೂ ನೂತನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೃತ್ತ ಉದ್ಘಾಟನೆ ಹಾಗೂ ತಾಲೂಕಾ ಮಟ್ಟದ ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮಳ ೬೦೩ನೇ ಜಯಂತ್ಯುತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಮೇ.೧೪ ರಂದು ಕಾಮನಕಟ್ಟಿ ಗ್ರಾ.ಪಂ ಕಾರ್ಯಾಲಯ ಆವರಣದಲ್ಲಿ ಏರ್ಪಡಿಸಲಾಗಿದೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬುಧವಾರ ಮುಂಜಾನೆ ೭.೩೦ರಿಂದ ೯ ಗಂಟೆಯವರೆಗೆ ಕುಂಭ ಹಾಗೂ ವಾದ್ಯ ಮೇಳಗಳೊಂದಿಗೆ ಮೂರ್ತಿ ಮೆರವಣಿಗೆ, ೯ ರಿಂದ ೧೧ ಗಂಟೆವರೆಗೆ ಮಹಾರುದ್ರಾಭಿಷೇಕ ಹಾಗೂ ಮೂರ್ತಿ ಪ್ರತಿಷ್ಠಾಪನೆ, ಮಧ್ಯಾಹ್ನ ೧ ಗಂಟೆಗೆ ಮಹಾಪ್ರಸಾದ ಜರುಗುವುದು.

ಸಂಜೆ ೪ ಗಂಟೆಗೆ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಎರೆಹೊಸಳ್ಳಿಯ ಶ್ರೀ ಮಹಾಯೋಗಿ ವೇಮನ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವೇಮನಾನಂದ ಮಹಾಸ್ವಾಮಿಗಳು, ಸಾನ್ನಿಧ್ಯವನ್ನು ತೊಂಡಿಕಟ್ಟಿಯ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ಯಾದವಾಡದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ವಹಿಸುವರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು, ಕಾನೂನು ಮತ್ತು ಪ್ರವಾಸೋಧ್ಯಮ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸಮಾರಂಭ ಉದ್ಘಾಟಿಸುವರು, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮೂರ್ತಿ ಅನಾವರಣ ನೆರವೇರಿಸುವರು, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗ್ರಾ.ಪಂ ಕಾರ್ಯಾಲಯ ಉದ್ಘಾಟಿಸುವರು, ವಿಶೇಷ ಆಹ್ವಾನಿತರಾಗಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ, ಬೆಂಗಳೂರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ, ಕಾಮನಕಟ್ಟಿ ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ಮೋಡಿ, ತಾ.ಪಂ ಇಒ ಎಫ್.ಜಿ.ಚಿನನ್ನವರ, ಬಿಇಒ ಅಜೀತ ಮನ್ನಿಕೇರಿ, ತಾ.ಪಂ ಸಹಾಯಕ ನಿರ್ದೇಶಕರಾದ ಎಸ್.ಎಸ್.ರೋಡ್ಡನ್ನವರ, ಸಿ.ಎಸ್.ಬಾರ್ಕಿ, ಪಿಡಿಒ ಎಚ್.ವಾಯ್.ತಾಳಿಕೋಟಿ, ಅಭಿಯಂತರಾದ ಸುರೇಶ ಹೂಗಾರ, ಎಸ್.ಎಸ್.ಪಾಟೀಲ ಮತ್ತು ಅತಿಥಿಗಳಾಗಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರು, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸುವರು.

ಗಲಗಲಿ ಎನ್.ಇ.ಎಚ್.ಎಸ್ ಶಿಕ್ಷಕಿ ಸರಳಾ ಸಿಂಗರಡ್ಡಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಲ್ಲಾ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಅತಿಥಿ ಉಪನ್ಯಾಸ ನೀಡುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group