ಮೇ 14 ರಂದು ರಾಮಗೌನಿ ಸಹೋದರಿಯರಾದ ಕು.ಮೌಕ್ಷಿಕ ಮತ್ತು ಕು.ಪ್ರಿಶಿಕ ರಂಗಪ್ರವೇಶ

Must Read
ಗುರು ವಿದುಷಿ ಡಾ.ಪ್ರಿಯಾ ಗಣೇಶ್ ಶಿಷ್ಯೆ ಯಿಂದ ‘ದಿವ್ಯ ಕುಮಾರರು’ ರಂಗಪ್ರಸ್ತುತಿ

 ಸಮಯ: ಸಂಜೆ 5 .00ಘಂಟೆಗೆ  ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ , ಬೆಂಗಳೂರು

ಬೆಂಗಳೂರು – ಖ್ಯಾತ ನೃತ್ಯ ಗುರು ವಿದುಷಿ ಡಾ. ಪ್ರಿಯಾ ಗಣೇಶ್‌ರವರ ಶಿಷ್ಯೆ ರಾಮಗೌನಿ ಸಹೋದರಿಯರಾದ ಕು.ಮೌಕ್ಷಿಕ ಮತ್ತು ಕು. ಪ್ರಿಶಿಕ ರಂಗಪ್ರವೇಶ ಮೇ 14 ಬುಧವಾರ ಸಂಜೆ ೫.೦೦ ಗಂಟೆಗೆ  ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
೬ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಕು. ಪ್ರಿಶಿಕ  ಬಾಲ್ಯದಿಂದಲೂ ನಾಟ್ಯ ಕ್ಷೇತ್ರದಲ್ಲಿ ಆಸಕ್ತರು ಖ್ಯಾತ ನೃತ್ಯ ಗುರು ಡಾ. ಪ್ರಿಯಾ ಗಣೇಶ್‌ರವರ ಶಿಷ್ಯೆ ಯಾಗಿ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಭ್ಯಸಿಸುತ್ತಿದ್ದಾರೆ. ಜಿಮ್ನಾನಿಷಿಯಂ ಮತ್ತು ಈಜುವಿಕೆಯಲ್ಲೂ ಆಸಕ್ತರಾಗಿ  ಅಯೋಧ್ಯಾ ರಾಮಮಂದಿರ ಮುಂತಾದ ಹಲವು ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಈ ಯುವ ಪ್ರತಿಭೆಗೆ ಅರಸಿ ಬಂದ ಗೌರವಗಳು ಅನೇಕ.
  ದಂತ ವೈದ್ಯೆ ಡಾ.ಉಷಾ ಮತ್ತು ಪ್ರತಾಪ್ ರಾಮಗೌನಿ ಸುಪುತ್ರಿಯರಾದ ಈಕೆಯ ಸಹೋದರಿ  4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ  ಕು. ಮೌಕ್ಷಿಕ ಕೂಡ ಕಿರಿವಯಸ್ಸಿನಲ್ಲೆ ಆಪಾರ ಸಾಧನೆ ಮಾಡಿದ್ದಾರೆ.
    ವಿಶೇಷ ಮಕ್ಕಳಿಗೆ ನೃತ್ಯ ಮತ್ತು ಯೋಗದ ಪರಿಮಾಣಕಾರಿತ್ವ  ಕುರಿತು ಪಿ.ಹೆಚ್‌ಡಿ ಮಾಡಿರುವ ಡಾ.ಪ್ರಿಯಾ ಗಣೇಶ್ ಗುರುವಿನ ಮಾರ್ಗದರ್ಶನ ಮತ್ತು ವೇದಿಕೆ ಅನುಭವ ಮೂಲಕ ಸಮುದ್ಭವ ನೃತ್ಯ ಮತ್ತು ಕಲಾ ಶಾಲೆಯ ವಿದ್ಯಾರ್ಥಿನಿಯರಾದ ಕು.ಮೌಕ್ಷಿಕ ಮತ್ತು ಕು.ಪ್ರಿಶಿಕ ಪ್ರಸ್ತುತ ಪಡಿಸುವ ರಂಗಪ್ರವೇಶ –”ದಿವ್ಯ ಕುಮಾರರು”— ಕೃಷ್ಣ ಹಾಗೂ ಬಲರಾಮರ ಬಾಲ್ಯ ಲೀಲೆಗಳುಆಟ ಪಾಠಗಳುಲೋಕ ಕಲ್ಯಾಣ ಕಾರ್ಯಗಳು ಹಾಗೂ ಧರ್ಮಪಾಲನೆಯ ವಿಶಿಷ್ಟ ನೃತ್ಯಾತ್ಮಕ ಪ್ರಸ್ತುತಿಗೆ —ಖ್ಯಾತ ನೃತ್ಯಪಟು , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ, ಲೇಖಕಿ ರಂಜಿನಿ ದತ್ತಾತ್ರಿ ಮತ್ತು ಜೋತಿಷಿ ಶ್ರೀಕಂಠ ಶಾಸ್ತ್ರೀ ಸಾಕ್ಷಿಯಾಗಲಿದ್ದಾರೆ.   
    ಕು. ಸಾನಿಧ್ಯ.ಪಿ ಮತ್ತು ಕು.ಪೂರ್ವಿ.ಎಂ.ಎಸ್ “ಕೋರವಂಜಿ” ಶೈಲಿಯ ವಿಶಿಷ್ಟ ನಿರೂಪಣೆ, ವಿ.ಅನಿಲ ಕುಮಾರ – ನಟುವಾಂಗವಿ.ದೇಬೂರು ಎಸ್ ಶ್ರೀವತ್ಸ  – ಗಾಯನ ವಿ.ಶ್ರೀಹರಿ ಆರ್. ಮೃದಂಗವಿ. ಎನ್ ಆರ್ ನರಸಿಂಹ ಮೂರ್ತಿ – ಕೊಳಲು, ವಿ. ತುಮಕೂರು ಬಿ.ಶಶಿಕುಮಾರ್ – ಘಟಂ ಮತ್ತು ಮೋರ್ಚಿಂಗ್ ಹಾಗೂ ಅರುಣ್ ಭಾರದ್ವಾಜ್ ಸಾಹಿತ್ಯ ಸಹಚರ್ಯದಲ್ಲಿ ಮೂಡಿಬರುವ ಕಾರ್ಯಕ್ರಮ ಕಲಾ ರಸಿಕರ ಮನಸೂರೆಗೊಳ್ಳಲಿದೆ.
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group