ಪದ್ಮಾವತಿ ಕೆ.ವಿ ಅವರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸಿ ಪ್ರಶಸ್ತಿ

Must Read
    ಅಮೆರಿಕನ್ ವಿಸ್ಡಂ ಪೀಸ್ ಯುನಿವರ್ಸಿಟಿ, ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿ ಸಹಯೋಗದಲ್ಲಿ ತಮಿಳುನಾಡು ಹೊಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಕಾಡುಗೋಡಿಯ ಜನನಿ ಪಬ್ಲಿಕ್ ಶಾಲೆಯ ಶೈಕ್ಷಣಿಕ ಆಡಳಿತ ಅಧಿಕಾರಿ ಪದ್ಮಾವತಿ ಕೆ ವಿ  ಅವರಿಗೆ ಪ್ರತಿಷ್ಠಿತ ಡಾ. ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶೈಕ್ಷಣಿಕ ಸಂಪನ್ಮೂಲ  ವ್ಯಕ್ತಿಯಾಗಿ  ಪದ್ಮಾವತಿ ಕೆ ವಿ ಯವರು ಕಳೆದ ಒಂದುವರೆ ದಶಕದಿಂದ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಎಂಟನೇ ರಾಂಕ್ ವಿಜೇತೆಯಾಗಿ, ಇತಿಹಾಸ ಎಂ ಎ, ಬಿ ಎಡ್  ಪೂರೈಸಿ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

     ನಾಡಿನ ಅನೇಕ ಪತ್ರಿಕೆಗಳಲ್ಲಿ ಸಾಂದರ್ಭಿಕ ಲೇಖನಗಳು ಪ್ರಕಟವಾಗಿದ್ದು ಲೇಖಕಿಯಾಗಿ ಇವರಿಗೆ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಕೂಡ ಮಾಡುವ ಪ್ರಣವ ಪುರಸ್ಕಾರ, ನಿತ್ಯೋತ್ಸವ ಸಾಂಸ್ಕೃತಿಕ ಹಾಗು ಸಾಮಾಜಿಕ ಟ್ರಸ್ಟ್ ನೀಡುವ ನಿತ್ಯೋತ್ಸವ ಕನ್ನಡ ಸಿರಿ  ಪ್ರಶಸ್ತಿಗೂ ಭಾಜನರಾಗಿದ್ದಾರೆ.

    ವಿಶ್ವ ವಿಖ್ಯಾತ  ಕ್ಷಿಪಣಿ ತಂತ್ರಜ್ಞಾನ  ವಿಜ್ಞಾನಿ, ಈ ದೇಶ ಕಂಡ ಹೆಮ್ಮೆಯ ಗೌರವಾನ್ವಿತ ರಾಷ್ಟ್ರಪತಿ ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ರವರ ಸ್ಮರಣಾರ್ಥ ನೀಡುವ ಈ ಪ್ರಶಸ್ತಿ ಲಭಿಸಿದಕ್ಕೆ ವಿವಿಯ ಆಯ್ಕೆ ಸಮಿತಿ ಸದಸ್ಯರಿಗೆ ಧನ್ಯವಾದ ಮತ್ತು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

   ವೇದಿಕೆಯಲ್ಲಿ ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಸ್ಕೃತ ಅಕಾಡೆಮಿಯ ಆಡಳಿತ ಕುಲ ಸಚಿವ ಎಸ್ ಕುಮಾರ್, ಡಾ.ಕರಾಟೆ ಎಪಿ ಶ್ರೀನಾಥ್, ಸಾಲೂರು ಬೃಹನ್ಮಠದ ಕೃಷ್ಣ ಮೂರ್ತಿ ಮಹಾಸ್ವಾಮಿಗಳು, ನಿವೃತ್ತ ಎಸಿಪಿ ಡಾ ಲಯನ್ ಎಸ್ ಬಿ ಛಬ್ಬಿ, ಡಿಸಿಪಿ ಬಿಎಸ್ ಅಂಗಡಿ, ಗಂಗಮ್ಮ ಶಕ್ತಿ ಪೀಠದ ಎಸ್ ರವಿಚಂದ್ರನ್ ಸ್ವಾಮೀಜಿ ಮೊದಲಾದ ಗಣ್ಯರು  ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group