ಮಸಗುಪ್ಪಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಸಿಸಿ ರಸ್ತೆ ಅನುದಾನ ಘೋಷಿಸಿದ ಈರಣ್ಣ ಕಡಾಡಿ

Must Read

ಮೂಡಲಗಿ: ಘಟಪ್ರಭಾ ನದಿ ತಟದ ಮೇಲಿರುವ ಮಸಗುಪ್ಪಿ ಗ್ರಾಮವು ಪದೇ ಪದೇ ಪ್ರವಾಹಕ್ಕೆ ಈಡಾಗುತ್ತಿದ್ದರೂ ಕೂಡಾ ಅದೇ ಘಟಪ್ರಭಾ ನದಿಯ ದಡದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಪುರಾತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ಪುನರುಜ್ಜೀವನಗೊಳಿಸುವ ಮೂಲಕ ಇಡಿ ತಾಲೂಕಿನಲ್ಲಿಯೇ ಭವ್ಯವಾದ ಮಂದಿರವನ್ನು ನಿರ್ಮಿಸಿ ದೈವ ಭಕ್ತಿಗೆ ಮಾದರಿಯಾಗಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮಸಗುಪ್ಪಿ ಜನತೆಯ ಒಕ್ಕಟನ್ನು ಪ್ರಶಂಸಿದರು.

ಮಂಗಳವಾರ ಜೂ-03 ರಂದು ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆಯಾಗಿ 3 ವರ್ಷ ತುಂಬಿದ ಪ್ರಯುಕ್ತ ನಡೆದ ಹೋಮ-ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಮಸಗುಪ್ಪಿ ಗ್ರಾಮದ ಸಂಕೇಶ್ವರ-ಸಂಗಮ (ರಾ.ಹೆ 51) ರಸ್ತೆಯಿಂದ ಮಹಾಲಕ್ಷ್ಮಿ ದೇವಸ್ಥಾನದವರೆಗೆೆ ಸಿ.ಸಿ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ.ಗಳ ಅನುದಾನವನ್ನು ಸಂಸದರು ಘೋಷಣೆ ಮಾಡಿ ಮಾತನಾಡಿದರು.

ಈಗಾಗಲೇ ಗ್ರಾಮದ ಮಹಾಲಕ್ಷ್ಮಿ ಪ್ರೌಢ ಶಾಲೆ ಕೊಠಡಿ ನಿರ್ಮಾಣಕ್ಕೆ 10. ಲಕ್ಷ ರೂ, ಶ್ರೀ ಮಹಾಲಕ್ಷ್ಮಿ (ಗದ್ದುಗೆ) ದೇವಸ್ಥಾನಕ್ಕೆ 5 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಯುವಕರಿಗೆ ತಮ್ಮ ದೇಹದಾರ್ಢ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕತೆ ಇರುವ ಓಪನ ಜಿಮ್ ಮಂಜೂರಾತಿ ಮಾಡುವುದಾಗಿ ಆಶ್ವಾಸನೆ ನೀಡಿದರು. ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಜಡಿಸಿದ್ದೇಶ್ವರ ಮಠದ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು, ಉಪ್ಪಾರಹಟ್ಟಿ ಸಿದ್ದಾರೂಢ ಮಠದ ಪೂಜ್ಯ ಶ್ರೀ ನಾಗೇಶ್ವರ ಮಹಾಸ್ವಾಮಿಗಳು, ಹುಣಶ್ಯಾಳ ಪಿ.ಜಿ ಸಿದ್ದಲಿಂಗ ಕೈವಲ್ಯಾಶ್ರಮದ ಪೂಜ್ಯಶ್ರೀ ನಿಜಗುಣ ದೇವರು, ತಪಶಿ ರೇವಣ್ಣಸಿದ್ದೇಶ್ವರ ಮಠದ ಪೂಜ್ಯಶ್ರೀ ಸುರೇಶ ಮಹಾರಾಜರು, ಕಪರಟ್ಟಿ ಗುರು ಮಹಾದೇವ ಆಶ್ರಮದ ಪೂಜ್ಯಶ್ರೀ ಬಸವರಾಜ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಗ್ರಾ.ಪಂ. ಅಧ್ಯಕ್ಷ ಬಸವರಾಜ ಭುಜನ್ನವರ, ಭರಮಪ್ಪ ಗಂಗಣ್ಣವರ, ಸಂಜು ಹೋಸಕೊಟೆ, ನಿಂಗಪ್ಪಾ ತೋಳಿ, ಲಕ್ಕಪ್ಪ ಮಕರದ, ವಿರೂಪಾಕ್ಷ ಕೊಳವಿ, ಹಣಮಂತ ಕುಲಕರ್ಣಿ, ಬಸವರಾಜ ಗಾಡವಿ, ಕೃಷ್ಣಾ ಆಶಿರೊಟ್ಟಿ, ಲಕ್ಷ್ಮಣ ಗುಡಪ್ಪಗೋಳ, ಈಶ್ವರ ಗಾಡವಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group