ಹೆಚ್ ಡಿ ಎಫ್ ಸಿ ಬ್ಯಾಂಕಿನಿಂದ ಕೃಷಿಕರಿಗೆ ಮುಂಗಾರು ಸಾಲ ಸೌಲಭ್ಯ – ಆನಂದ್ ಕೆ ಎಸ್

Must Read

ಬಾಗಲಕೋಟ: HDFC ಬ್ಯಾಂಕ್ ಮತ್ತು ಸಿ ಎಸ್ ಸಿ ಸೇವಾ ಕೇಂದ್ರಗಳ ಸಹಯೋಗದಲ್ಲಿ ಮಾನ್ಸೂನ್ ಮೆಗಾ ಲೋನ್ ಕಾರ್ಯಕ್ರಮವನ್ನು, ನವನಗರದ, ಸೆಕ್ಟರ್  ನಂಬರ್ 35 ರಲ್ಲಿರುವ ಬುಡ್ಡರ ಕಾಂಪ್ಲೆಕ್ಸಿ ನಲ್ಲಿರುವ ಸಿ ಎಸ್ ಸಿ ಜಿಲ್ಲಾ ಕೇಂದ್ರದಲ್ಲಿ ದಿನಾಂಕ 4 ರಂದು ಬುಧವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಎಚ್ ಡಿ ಎಫ್ ಸಿ , ರಾಜ್ಯ ವ್ಯವಸ್ಥಾಪಕ ಅನಂತ ಕೆ ಎಸ್ ವಿಡಿಯೊ ಕರೆ ಮೂಲಕ ಆನ್ಲೈನ್ ನಲ್ಲಿ ಚಾಲನೆ ನೀಡಿದರು. ಅನಂತರ HDFC ಬ್ಯಾಂಕಿನ ಬಾಗಲಕೋಟೆ ಜಿಲ್ಲಾ ವ್ಯವಸ್ಥಾಪಕ ಮಹಾಂತೇಶ ಕರಿಗಾರ ಅವರು ಮಾತನಾಡಿ, ಈ ಮಾನ್ಸೂನ್ (ಮುಂಗಾರು) ಮೆಗಾ ಲೋನ್ ಮೂಲಕ ಹಲವು HDFC ಸಾಲದ ಉತ್ಪನ್ನಗಳನ್ನು ರೈತರಿಗೂ ಮತ್ತು ಸಾಮಾನ್ಯ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿಮತ್ತು ವಿಶೇಷ ರಿಯಾಯಿತಿ ಯೊಂದಿಗೆ ಒದಗಿಸಲಾಗುವುದು ಹಾಗೂ ಇತರ ಸಾಲ ಸೌಲಭ್ಯಗಳ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು HDFC Bank ಹೊಂದಿದೆ ಎಂದು ತಿಳಿಸಿದರು.

ಸಿ ಎಸ್ ಸಿ ಜಿಲ್ಲಾ ವ್ಯವಸ್ಥಾಪಕ ಶ್ರೀರಾಮ್ ಎನ್ ಮಾತನಾಡಿ, ಈ ಮೇಲಿನ ಎಲ್ಲಾ HDFC ಲೋನ್ ಸೇವೆಗಳನ್ನು ಜಿಲ್ಲಾದ್ಯಂತ ಸಿ ಎಸ್ ಸಿ ಸೇವಾ ಕೇಂದ್ರಗಳ ಮೂಲಕ ರೈತರ ಮನೆ ಬಾಗಿಲಿಗೆ ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಮತ್ತು ಯಾವುದೇ ನಮ್ಮ ಸ್ಥಳೀಯ ಉದ್ಯಮಿದಾರರು ದೇಶದ ಬೆನ್ನೆಲುಬಾಗಿರುವ ರೈತರನ್ನು ಸಾವಲಂಬಿಯಾಗಿಸಲು ಎಚ್ ಡಿ ಎಫ್ ಸಿ ಬ್ಯಾಂಕಿನವರು ಮಾನ್ಸೂನ್ ಮೆಗಾ ಲೋನ್ ಅಡಿಯಲ್ಲಿ ರೈತರ ಉತ್ತೇಜನಗಳಿಗೆ ಸಾಲವನ್ನು ಕೊಡುತ್ತಿದ್ದು ನಮ್ಮ ಉದ್ಯಮದಾರರು ಹೆಚ್ಚಿನ ರೈತರನ್ನು ಸಂಪರ್ಕಿಸಿ ಸಾಲವನ್ನು ಕೊಡುವುದರ ಮೂಲಕ ತಮ್ಮ ಆದಾಯದ ಜೊತೆಗೆ ರೈತರನ್ನು ಸಾವಲಂಬಿ ಯಾಗಿಸಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ HDFC ಸಿಬ್ಬಂದಿಗಳು ವೆಂಕಟೇಶ್ವರ ರಾವ್ ಚಿಲುಕುರಿ, ಕಾಶಿಮ್ ಅನವಲ್ , ರಾಮಣ್ಣ ಕುಂಬಾರ, ರಿಶಿಕೇಶ, ಪ್ರತಿಭಾ ,ಮಹಾಂತೇಶ, ಸುನಿಲ , ರಮೇಶ ಮುಂತಾದವರು ಮತ್ತು ಸಿ ಎಸ್ ಸಿ ವಿ ಎಲ್ ಈ ಗಳಾದಂತಹ ಹಬೀಬ್ ಎಂಡಿಗೇರಿ, ಆಶಿಶ್ ಪ್ರಭುಕರ್, ಚಂದ್ರಶೇಖರ ಪಟ್ರೋತ್ರಿ, ಶಾಹೀನ್ ರಕ್ಕಸಗಿ ಮುಂತಾದವರು ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group